Advertisement

ಹೆಚ್ಚುವರಿ ಜಾಗದ ಸದ್ಬಳಕೆ ಹೀಗಿರಲಿ

11:15 PM Jul 19, 2019 | mahesh |

ಪ್ರತಿಯೊಬ್ಬರಲ್ಲಿಯೂ ಸ್ವಂತ ಮನೆ ನಿರ್ಮಾಣದ ಕನಸುಗಳಿರುವುದು ಸಹಜವೇ. ನಾವು ನಿರ್ಮಿಸುವ ಮನೆಯ ಕೋಣೆ,ಬೆಡ್‌ ರೂಂ, ಕಿಚನ್‌ ಸಹಿತ ಹಾಲ್ ಈ ರೀತಿಯಲ್ಲಿ ಸಿಂಗರಿಸಬೇಕು ಎನ್ನುವ ಕೆಲವೊಂದು ಯೋಜನೆಗಳು ಇರುವುದು ಸಹಜ. ಕೆಲವೊಮ್ಮೆ ನಾವು ಕಟ್ಟಿಸುವ ಮನೆಯಲ್ಲಿನ ರೂಂಗಳು ಅಗತ್ಯಕ್ಕಿಂತ ಹೆಚ್ಚು ವಿಶಾಲವಾಗಿದೆ ಅಥವಾ ತೀರಾ ಚಿಕ್ಕದಾಗಿರುತ್ತವೆ. ಇದ ರಲ್ಲಿ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ಇರಿಸಿಕೊಳ್ಳುವುದು ಹೇಗೆ ಎನ್ನುವುದಕ್ಕೆ ಇಲ್ಲಿದೆ ಕೆಲವೊಂದು ಉಪಾಯಗಳು.

Advertisement

ವಿಶಾಲ ಹಾಲ್ ಬಳಕೆ ಹೇಗೆ?
ನೀವು ಕಟ್ಟಿಸಿರುವ ಮನೆಯ ಹಾಲ್ ನಿಮ್ಮ ಅಗತ್ಯಕ್ಕಿಂತ ಹೆಚ್ಚು ವಿಶಾಲವಾಗಿದೆ ಎಂದು ನಿಮಗನಿಸುತ್ತಿದೆಯೇ. ಹಾಗಾದರೆ ಖಾಲಿ ಎಂದೆನಿಸುತ್ತಿರುವ ಪ್ರದೇಶದಲ್ಲಿ ಒಂದು ಚಿಕ್ಕ ನಿಮ್ಮದೇ ಆದ ಗ್ರಂಥಾಲಯ ಸಿದ್ಧ ಪಡಿಸಿಕೊಳ್ಳಿ. ಕೆಲವು ಪುಸ್ತಕಗಳನ್ನು ಇರಿಸಬಹುದಾದ ಶೆಲ್ ್ಫಗಳನ್ನು ಸಿದ್ಧಪಡಿಸಿಕೊಳ್ಳುವ ಮೂಲಕ ನಿಮ್ಮ ಹಾಲ್ನ ಕೊನೆಯಲ್ಲಿ ಒಂದಷ್ಟು ಉತ್ತಮ ಪುಸ್ತಕಗಳನ್ನು ಜೋಡಿಸಿಡಬೇಕು. ಓದುವುದಕ್ಕೆ ಸಹಕಾರಿಯಾಗುವಂತೆ ಒಂದು ಟೇಬಲ್, ಒಂದೆರಡು ಕುರ್ಚಿಗಳನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟಲ್ಲಿ, ಅನಗತ್ಯವಾಗಿ ಹಾಳಾಗುತ್ತಿದ್ದ ಜಾಗ ವನ್ನು ನೀವು ಅರ್ಥಪೂರ್ಣವಾಗಿ ಬಳಸಿದಂತೆಯೂ ಆಗುತ್ತದೆ. ಜತೆಗೆ ಆಗಮಿಸುವ ಅತಿಥಿಗಳಿಗೂ ಇದು ಮಾದರಿ ಎನಿಸುವುದರಲ್ಲಿ ಸಂದೇಹ ಪಡಬೇಕಾಗಿಲ್ಲ.

ರೂಂ ಸ್ಪೇಸ್‌ ಅಧಿಕ ಎನಿಸುತ್ತಿದೆಯೇ?
ಮನೆ ನಿರ್ಮಾಣದ ಸಂದರ್ಭ ಕೋಣೆಗಳು ದೊಡ್ಡದಿರಲಿ ಎಂದು ಬಯ ಸುವುದು ತಪ್ಪಲ್ಲ. ಆದರೆ ಕೆಲವೊಮ್ಮೆ ನಮ್ಮ ಎಣಿಕೆಗಳಂತೆ ಕೋಣೆ ವಿಶಾಲವಾಗಿದ್ದರೂ ಕೆಲವು ಸಮಯದ ಬಳಿಕ ಇದು ಅನಾವಶ್ಯಕ ಎನಿಸುವುದಿದೆ. ಈ ಸಂದರ್ಭದಲ್ಲಿ ಸುಮ್ಮನೆ ವೆಸ್ಟ್‌ ಆಗುತ್ತಿದೆ ಎನಿಸುವ ಜಾಗಗಳನ್ನು ನಾವು ಹೇಗೆ ಸದುಪಯೋಗ ಪಡಿಸಿಕೊಳ್ಳುವುದು ಹೇಗೆ ಎಂದು ಯೋಚಿಸುವವರು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಬದಲಾಗಿ, ಒಂದು ಕೋಣೆಯನ್ನು ಎರಡು ಕೋಣೆಯನ್ನಾಗಿಸುವ ಸುಂದರ ಯೋಜನೆ ಒಂದು ಇಲ್ಲಿದೆ.

ನಿಮ್ಮ ಕೋಣೆಯ ಮಧ್ಯೆ ಎರಡೂ ಕಡೆಯಿಂದಲೂ ವಾಡ್‌ರೋಬ್‌ಗಳನ್ನು ತಂದಿರಿಸುವ ಮೂಲಕ ಅದನ್ನು ಎರಡಾಗಿ ಬೇರ್ಪಡಿಸಿ. ಒಂದು ಕಡೆಯಲ್ಲಿ ನಿಮ್ಮ ಬೆಡ್‌, ಡ್ರೆಸ್‌ ಮೆಟೀರಿಯಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಇರಿಸಿಕೊಂಡರೆ, ಇನ್ನೊಂದು ಪಾರ್ಶ್ವದಲ್ಲಿ ನಿಮಗೆ ಸಿಕ್ಕಿದ ಗಿಫ್ಟ್ ಐಟಂಗಳು ಸೇರಿದಂತೆ ಇನ್ನಿತರ ಆಲಂಕಾರಿಕ ವಸ್ತುಗಳನ್ನು ಜೋಡಿಸಿಡಿ. ಇನ್ನು ಅದೇ ಪಾರ್ಶ್ವದಲ್ಲಿ ದೊಡ್ಡ ಗಾಜಿನ ಗೋಡೆಯನ್ನು ಸಹ ಅಳವಡಿಸಿದಿರಿ ಎಂದಾದಲ್ಲಿ ಅಲ್ಲಿಯೇ ಒಂದಷ್ಟು ಕುರ್ಚಿಗಳು, ಒಂದು ಮೇಜು ಅಳವಡಿಸಿಕೊಂಡು ಪ್ರಕೃತಿ ಸೌಂದರ್ಯ ಸವಿಯುವುದರ ಜತೆಗೆ ಓದು, ಬರವಣಿಗೆ ಇತ್ಯಾದಿಗಳನ್ನೂ ಪೂರೈಸಿಕೊಳ್ಳುವುದು ಸಾಧ್ಯ.

ಕೋಣೆಗಳಲ್ಲಿ ಜಾಗ ಸಾಲುತ್ತಿಲ್ಲವೇ?
ಅಯ್ಯೋ ಮನೆಯಲ್ಲಿ ಕೋಣೆಗಳೆಲ್ಲಾ ಚಿಕ್ಕವು. ಸಾಮಗ್ರಿಗಳನ್ನು ಇಡುವುದಕ್ಕೆ ಜಾಗವೇ ಇಲ್ಲ ಎನ್ನುವ ಕೊರಗು ಇನ್ನು ಬೇಡ. ನಿಮ್ಮ ಕೊಣೆಯಲ್ಲಿ ಲಭ್ಯವಿರುವ ಸ್ಥಳಾವಕಾಶದಲ್ಲಿಯೇ ನಿಮ್ಮ ವಸ್ತುಗಳನ್ನು ಹೇಗೆ ಜೋಡಿಸಿಡುವುದು ಎನ್ನುವುದಕ್ಕೆ ಇಲ್ಲಿದೆ ಉಪಾಯ. ನಿಮ್ಮ ರೂಂ ನಲ್ಲಿ ವಸ್ತುಗಳನ್ನಿಡುವುದಕ್ಕೆ ಯೋಗ್ಯವಾಗಿರುವ ಕಾಟ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ಕಾಟ್‌ನಲ್ಲಿ ಅಳವಡಿಸಿರುವ ಕಪಾಟುಗಳಲ್ಲಿ ನಿಮ್ಮ ಬಟ್ಟೆಗಳನ್ನು ಜೋಡಿಸಿಡಿ. ಇನ್ನು ನಿಮ್ಮ ಕೋಣೆಗಳಲ್ಲಿ ವಾಡ್‌ ರೋಬ್‌ಗಳನ್ನು ಬಳಕೆ ಮಾಡುತ್ತಿದ್ದರೆ ಅದರ ಬಾಗಿಲುಗಳಲ್ಲಿ ಪುಸ್ತಕ, ಇನ್ನಿತರ ವಸ್ತುಗಳನ್ನು ಇಡಬಹುದಾದಂತಹ ಶೋಕೇಸ್‌ ಒಂದನ್ನು ಸಿದ್ಧ ಪಡಿಸಿಕೊಳ್ಳಿ. ವಾಡ್‌ ರೋಬ್‌ ನಿಮ್ಮ ಬಟ್ಟೆಗಳನ್ನು ಸಂರಕ್ಷಿಸಿದರೆ, ಶೋಕೆಸ್‌ನಲ್ಲಿ ಆಲಂಕಾರಿಕ ವಸ್ತುಗಳು. ಮೇಕಪ್‌ ಕಿಟ್‌ಗಳು ಇತ್ಯಾದಿಗಳನ್ನು ಇಟ್ಟುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಇದರಿಂದ ಜಾಗವೂ ಉಳಿತಾಯವಾಗಿ ಚಿಕ್ಕ ರೂಂ ಚೊಕ್ಕವಾಗಿ ಇತರರನ್ನು ಆಕರ್ಷಿಸುವುದರಲ್ಲಿ ನೋಡೌಟ್.

Advertisement

•ಭುವನ ಬಾಬು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next