Advertisement

ತ್ರಿಪಕ್ಷೀಯ ಪದ್ಧತಿ ಜಾರಿ ಆಗಲಿ; ಶ್ರೀಕಂಠೇಗೌಡ

11:31 PM Mar 11, 2020 | Lakshmi GovindaRaj |

ವಿಧಾನ ಪರಿಷತ್ತು: ದೇಶದಲ್ಲಿ ಬಹುಪಕ್ಷೀಯ ಪದ್ಧತಿ ಕೈಬಿಟ್ಟು, ತ್ರಿಪಕ್ಷೀಯ ಪದ್ಧತಿ ಜಾರಿಯಾಗಬೇಕು ಎಂದು ಜೆಡಿಎಸ್‌ನ ಶ್ರೀಕಂಠೇಗೌಡ ಹೇಳಿದರು. ಮೇಲ್ಮನೆಯಲ್ಲಿ ಬುಧವಾರ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ, ಸದ್ಯ ದೇಶದಲ್ಲಿ 2,599 ನೋಂದಾಯಿತ ರಾಜಕೀಯ ಪಕ್ಷಗಳಿವೆ.

Advertisement

ಇದರಲ್ಲಿ ಎಂಟು ರಾಷ್ಟ್ರೀಯ ಮತ್ತು 53 ಪ್ರಾದೇಶಿಕ ಪಕ್ಷಗಳೂ ಸೇರಿವೆ. ವಿಚಿತ್ರವೆಂದರೆ, ಸಂವಿಧಾನದಲ್ಲಿ ಈ ರಾಜಕೀಯ ಪಕ್ಷಗಳಿಗೆ ಅವಕಾಶವನ್ನೇ ನೀಡಿಲ್ಲ. ಸಂಘ-ಸಂಸ್ಥೆಗಳಿಗೆ ಅವಕಾಶ ನೀಡಿದ್ದು, ಅದರಡಿ ನೋಂದಣಿ ಆಗುತ್ತಿವೆ ಎಂದರು. ದಿನಕ್ಕೊಂದು ಪಕ್ಷ ಹುಟ್ಟುತ್ತಿದೆ, ಮತ್ತು ಸಾಯುತ್ತಿದೆ. ಈ ಬಹುಪಕ್ಷೀಯ ಪದ್ಧತಿಗೆ ತಿಲಾಂಜಲಿ ಹಾಡಬೇಕು. ವಿದೇಶಗಳಲ್ಲಿ ದ್ವಿಪಕ್ಷೀಯ ಪದ್ಧತಿ ಇರುವಂತೆ ನಮ್ಮಲ್ಲಿ ತ್ರಿಪಕ್ಷೀಯ ಪದ್ಧತಿ ಜಾರಿಯಾಗಬೇಕು.

ಇದರಡಿ ತಲಾ ಮೂರು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಮಾತ್ರ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ನಿರ್ಣಯ ಕೈಗೊಂಡು, ಅಗತ್ಯ ತಿದ್ದುಪಡಿ ತರುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು. ಸಂವಿಧಾನದ ಕುರಿತು ಎಲ್ಲ ರಾಜ್ಯಗಳ ವಿಧಾನ ಮಂಡಲಗಳಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಪರಮಾರ್ಶೆ ಆಗಬೇಕೆಂದರು.

Advertisement

Udayavani is now on Telegram. Click here to join our channel and stay updated with the latest news.

Next