Advertisement

ಬುಡಕಟ್ಟು ಕಲಾವಿದರಿಗೆ ಆಸರೆ ದೊರೆಯಲಿ

03:12 PM Aug 07, 2020 | Suhan S |

ಕಲಬುರಗಿ: ತಲ-ತಲಾಂತರಗಳಿಂದ ತಮ್ಮದೇ ಆದ ವೇಷ-ಭೂಷಣ, ಕಲೆ, ಸಂಸ್ಕೃತಿ, ಪರಂಪರೆ, ವೃತ್ತಿಯನ್ನು ಉಳಿಸಿ, ಬೆಳೆಸಿಕೊಂಡು ಬಂದಿರುವ ಬುಡಕಟ್ಟು ಕಲಾವಿದರು ಪ್ರಸ್ತುತವಾಗಿ ತುಂಬಾ ಕಷ್ಟದ ಸ್ಥಿತಿಯಲ್ಲಿರುವುದರಿಂದ ಆಸರೆ ದೊರಕುವುದು ಅವಶ್ಯಕವಾಗಿದೆ ಎಂದು ಕನ್ನಡ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಎಂ.ಬಿ. ನಿಂಗಪ್ಪ ಹೇಳಿದರು.

Advertisement

ಬುಡಕಟ್ಟು ದಿನಾಚರಣೆ ಪ್ರಯುಕ್ತ ಕಜಾಪ ಜಿಲ್ಲಾ ಘಟಕದ ವತಿಯಿಂದ ನಗರದ ಸುಪರ್‌ ಮಾರ್ಕೆಟ್‌ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಲೆಮಾರಿ ಜನಾಂಗದ ಕಲಾವಿದರಿಗೆ ಹಮ್ಮಿಕೊಂಡಿದ್ದ ಸತ್ಕಾರ ಕಾರ್ಯಕ್ರಮದಲ್ಲಿ ಕಲಾವಿದರಿಗೆ ಗೌರವಿಸಿ ಮಾತನಾಡಿದ ಅವರು, ಕೋವಿಡ್ ದಿಂದ ಬುಡಕಟ್ಟು ಕಲಾವಿದರ ಬದುಕು ಅತ್ಯಂತ ದುಸ್ತರವಾಗಿದೆ. ಅವರ ನೆರವಿಗೆ ಧಾವಿಸುವುದು ಅಗತ್ಯವಾಗಿದೆಯೆಂದು ನುಡಿದರು.

ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್‌.ಬಿ. ಪಾಟೀಲ ಮಾತನಾಡಿದರು. ಬುಡಕಟ್ಟು ಕಲಾವಿದರಾದ ಚುಡಾಮಣಿ ಬೈಲ್‌ಪತ್ತರ್‌, ನರಸಮ್ಮ ಬೈಲ್‌ಪತ್ತರ್‌ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಬಸರಾಜ ಎಸ್‌.ಪುರಾಣೆ, ದೇವೇಂದ್ರಪ್ಪ ಗಣಮುಖೀ, ಅಮರ ಜಿ.ಬಂಗರಗಿ, ಬುಡಕಟ್ಟು ಜನಾಂಗದ ಅಮಣ್ಣ, ಶಾಂತಮ್ಮ ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next