Advertisement

ಗಂಟಲು ಮಾದರಿ ತಪಾಸಣೆ ತೀವ್ರಗೊಳ್ಳಲಿ

06:16 AM May 20, 2020 | Team Udayavani |

ಯಾದಗಿರಿ: ಜಿಲ್ಲೆಯಲ್ಲಿ ಸದ್ಯ ಮಹಾರಾಷ್ಟ್ರದಿಂದ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿರುವ ಜನರಲ್ಲಿಯೇ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಗುರುಮಠಕಲ್ಲ ತಾಲೂಕು ವ್ಯಾಪ್ತಿಯ ಕೇಂದ್ರಗಳಲ್ಲಿರುವ ವಲಸಿಗರ ಮಾದರಿ ತಪಾಸಣೆ ತೀವ್ರ ಗತಿಯಲ್ಲಿ ನಡೆಯುತ್ತಿದೆಯೇ ಎನ್ನುವ ಪ್ರಶ್ನೆ ಕಾಡತೊಡಗಿದೆ.

Advertisement

ಮಹಾರಾಷ್ಟ್ರದಿಂದ ಜಿಲ್ಲೆಗೆ ಸಾಕಷ್ಟು ಜನರು ಆಗಮಿಸಿ ವಿವಿಧ ಕ್ವಾರಂಟೈನ್‌ನಲ್ಲಿದ್ದಾರೆ. ಅಲ್ಲಿ ಯಾವೊಬ್ಬರು ಸಾಮಾಜಿಕ ಅಂತರ ಪಾಲಿಸದೇ ಗುಂಪಾಗಿ ವಾಸಿಸುತ್ತಿದ್ದಾರೆ. ಮಾಸ್ಕ್ ಧರಿಸದೇ ಮಹಾಮಾರಿ ಆರ್ಭಟ ಲೆಕ್ಕಿಸದೆ ನಿರ್ಭಯವಾಗಿದ್ದಾರೆ. ಅವರಲ್ಲಿ ಯಾರೇ ಒಬ್ಬರಿಗೆ ಸೋಂಕು ಪತ್ತೆಯಾದರೇ ಇಡೀ ಕ್ವಾರಂಟೈನ್‌ ಕೇಂದ್ರದಲ್ಲಿರುವವರು ಸೋಂಕಿತರ ಸಂಪರ್ಕಕ್ಕೆ ಸರಳವಾಗಿ ದೊರೆಯುವ ಪರಿಸ್ಥಿತಿಯಿದೆ.

ಈವರೆಗೆ ಕ್ವಾರಂಟೈನ್‌ ಕೇಂದ್ರದಲ್ಲಿದ್ದ 9 ಜನರಲ್ಲಿ ಸೋಂಕು ಪತ್ತೆಯಾಗಿದೆ. ಮೇ12ರಂದು ಅಹಮದಾಬಾದ್‌ ನಿಂದ ಆಗಮಿಸಿದ ದಂಪತಿಯಲ್ಲಿ ಸೋಂಕು ಪತ್ತೆಯಾಗಿತ್ತು. ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಇನ್ನು ಕ್ವಾರಂಟೈನ್‌ ಕೇಂದ್ರದಲ್ಲಿರುವವರಿಗೆ ಮನೆಗಳಿಂದ ಸಂಬಂಧಿಕರು ಆಹಾರ ಇತರೆ ತಿನಿಸುಗಳನ್ನು ತಂದುಕೊಡುತ್ತಿದ್ದಾರೆ. ಗುರುಮಠಕಲ್‌ ತಾಲೂಕಿನ ಬದ್ದೇಪಲ್ಲಿ ತಾಂಡಾದ ಐವರಲ್ಲಿ ಸೋಮವಾರವಷ್ಟೇ ಸೋಂಕು ದೃಢಪಟ್ಟಿದೆ. 9 ಜನರು ಅವರ ಪ್ರಾಥಮಿಕ ಮತ್ತು 151 ಜನರು ದ್ವಿತೀಯ ಸಂಪರ್ಕಕ್ಕೆ ಬಂದಿದ್ದಾರೆ. ಮಂಗಳವಾರ ಮಗುವಿಗೆ ಸೋಂಕು ದೃಢವಾಗಿರುವುದು ಆತಂಕಕ್ಕೆ ಎಡೆಮಾಡಿದೆ. ಇದೀಗ ಕ್ವಾರಂಟೈನ್‌ ಕೇಂದ್ರಗಳಲ್ಲಿರುವವರು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next