Advertisement

ವಚನಗಳು ತನು-ಮನ-ಭಾವಕ್ಕೆ ಔಷಧಿಯಾಗಲಿ

04:32 PM Sep 09, 2018 | |

ಬಸವನಬಾಗೇವಾಡಿ: 12ನೇ ಶತಮಾನದ ಬಸವಣ್ಣ ಸೇರಿದಂತೆ ಅನೇಕ ಶರಣರು ರಚಿಸಿದ ವಚನಗಳು ಫ್ಯಾನ್ಸಿ
ಆಗಬಾರದು, ತನು ಮನ ಭಾವಕ್ಕೆ ಔಷಧಿಯಾಗಬೇಕು ಎಂದು ಮುಂಡರಗಿಯ ಜಗದ್ಗುರು ತೋಂಟದಾರ್ಯ ಶಾಖಾಮಠ ಹಾಗೂ ಬೈಲೂರು ನಿಷ್ಕಲ ಮಂಟಪದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಪಟ್ಟಣದಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಸಂಸ್ಥಾಪನಾ ಹಾಗೂ ಸಂಸ್ಥಾಪಕರಾದ ಸುತ್ತೂರು ಜಗದ್ಗುರು
ಡಾ| ರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನದ ಅಂಗವಾಗಿ ನ್ಯೂ ಇಂಗ್ಲಿಷ್‌ ಶಾಲೆ ಆವರಣದಲ್ಲಿ ತಾಲೂಕಾ ಶರಣ
ಸಾಹಿತ್ಯ ಪರಿಷತ್‌ ಹಮ್ಮಿಕೊಂಡಿದ್ದ ವಚನ ದಿನ, ವಿಚಾರ ಸಂಕಿರಣ,ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಲಿಂ| ನಾಗಪ್ಪ ಗುರಪ್ಪ ಮರ್ತೂರ ದತ್ತಿ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಚನಗಳನ್ನು ಶರಣರು ದೇವರಿಗಾಗಿ ಬರೆದಿಲ್ಲ, ಬದುಕಿಗಾಗಿ ಬರೆದಿದ್ದಾರೆ. ಕೇವಲ ಮನೆ ಹೊರಗೆ ಇವನಾರವ
ಎನ್ನದೇ ಮನೆ ಒಳಗಡೆಯೂ ಇವ ನಮ್ಮವನೆಂದು ಆದರ್ಶರಾಗಿರಿ. ಸಮಾಜದ ರೋಗ ವಾಸಿಯಾಗಲು
ತನುಮನ ಶುದ್ಧಿಯಾಗಿರಬೇಕು. ವಿದ್ಯಾರ್ಥಿಗಳು ವ್ಯಸನಗಳಿಗೆ ಬಲಿಯಾಗಬಾರದು. ಮುಂದಿನ 50 ವರ್ಷಗಳಲ್ಲಿ ದೇಶದಲ್ಲಿ ಆಹಾರ ಕೊರತೆಯಾಗುವ ಹಿನ್ನೆಲೆಯಲ್ಲಿ ಬರಿ ಎಂಜನಿಯರಿಂಗ್‌ ಹಾಗೂ ವೈದ್ಯಕೀಯ ಕೋರ್ಸ್‌ಗಳ ಹಿಂದೆ ಬೀಳದೇ ರೈತರಾಗುವ ಕಡೆ ಗಮನ ಹರಿಸಿರಿ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ವಚನ ಸಂಪತ್ತನ್ನು ಉಳಿಸಿ ಕೊಟ್ಟವರು
ಕುರಿತಾಗಿ ಪ್ರಾಧ್ಯಾಪಕಿ ವಿಜಯಲಕ್ಷ್ಮೀ ರೊಟ್ಟಿ, ವಚನ ಸಾಹಿತ್ಯದಲ್ಲಿ ಪ್ರತಿಪಾದಿತವಾಗಿರುವ ವಿಶ್ವ ಮೌಲ್ಯಗಳು
ಕುರಿತಾಗಿ ಕೂಡಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಯುವರಾಜ ಮಾದನಶೆಟ್ಟಿ ಹಾಗೂ ವಚನ ವಾಚನ ವಿಶ್ಲೇಷಣೆ ಕುರಿತಾಗಿ ತಾಲೂಕು ಜಾನಪದ ಸಾಹಿತ್ಯ ಪರಿಷತ್‌ ಅಧ್ಯಕ್ಷ ದೇವೇಂದ್ರ ಗೋನಾಳ ವಿಚಾರ ಮಂಡಿಸಿದರು.

ಕಾರ್ಯಕ್ರಮದಲ್ಲಿ ತಾಲೂಕಾ ಶಸಾಪ ಅಧ್ಯಕ್ಷ ವೀರಣ್ಣ ಮರ್ತೂರ ಪ್ರಾಸ್ತಾವಿಕ ಮಾತನಾಡಿದರು. ಕದಳಿ
ವೇದಿಕೆ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ಜಿಲ್ಲಾ ಶಸಾಪ ಕಾರ್ಯದರ್ಶಿ ಸಿದ್ದಲಿಂಗಪ್ಪ ಹದಿಮೂರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಾಹೇಬಗೌಡ ಬಸರಕೋಡ, ಶಾಲಾ ಮುಖ್ಯಗುರು ಪಿ.ಡಿ. ಭಗತ್‌, ಕಾರ್ಯದರ್ಶಿ ಸುಭಾಷ್‌ ನಾಯಕ, ಮುಖ್ಯಗುರು ಎಂ.ಎಸ್‌. ಹಿರೇಮಠ, ಸಂಗನಗೌಡ ಚಿಕ್ಕೊಂಡ, ಎಸಿ ಬಶೆಟ್ಟಿ, ಎಂ.ಎಸ್‌. ಕೊಟಿ, ಮಹಾಂತೇಶ
ಸಂಗಮ, ಎಸ್ಪಿ ರಾಠೊಡ, ಪಿ.ಬಿ. ಕಡೇಮನಿ ಸೇರಿದಂತೆ ಅನೇಕರು ಇದ್ದರು. ಆರ್‌.ಎಸ್‌. ಪಟ್ಟಣಶೆಟ್ಟಿ ಸ್ವಾಗತಿಸಿದರು.

Advertisement

ದೀಪಾ ಬೂದಿಹಾಳ ಪ್ರಾರ್ಥಿಸಿದರು. ಶರಣು ಬಸ್ತಾಳ ನಿರೂಪಿಸಿದರು. ತಾಲೂಕಿನ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಮೌನೇಶ ಬಡಿಗೇರ ಹಾಗೂ ದೀಪಶ್ರೀ ಬೂದಿಹಾಳ ಅವರಿಗೆ ಬಹುಮಾನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next