Advertisement
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಶಿರಾಡಿ ಘಾಟಿ ರಸ್ತೆ ಅಭಿವೃದ್ಧಿಯಾಗಿದ್ದರೂ, ಭೂಕುಸಿತದ ಘಟನೆಗಳು ಈ ರಸ್ತೆಯಲ್ಲಿ ಸುಗಮ ಸಂಚಾರ ವ್ಯವಸ್ಥೆಯನ್ನು ಕಾಯ್ದುಕೊಳ್ಳುವುದಕ್ಕೆ ಸದಾ ಒಂದು ಸವಾಲು ಆಗಿ ಪರಿಣಮಿಸಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಇಲಾಖೆ ಶಿರಾಡಿಘಾಟ್‌ನಲ್ಲಿ ಸುರಂಗಮಾರ್ಗ ನಿರ್ಮಾಣ ಯೋಜನೆ ರೂಪಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಯೋಜನೆಯ ಡಿಪಿಆರ್ ಅನುಮೋದನೆಗೊಂಡಿದ್ದು ಆರು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಆರಂಭಿಸುವುದಾಗಿ ಹಾಸನದಲ್ಲಿ ಘೋಷಿಸಿದ್ದರು. ಈಗ ಮತ್ತೆ ಗಡ್ಕರಿಯವರೇ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆ ಸಚಿವರಾಗಿದ್ದಾರೆ. ಈ ಯೋಜನೆ ಶೀಘ್ರ ಕಾರ್ಯಗತಗೊಂಡರೆ ಬೆಂಗ ಳೂರು- ಮಂಗಳೂರು ನಡುವೆ ರಸ್ತೆ ಸಂಚಾರದಲ್ಲಿ ಒಂದು ಮಹತ್ವದ ಮೈಲುಗಲ್ಲು ಆಗಲಿದೆ.
Related Articles
Advertisement
ಕಾರಿಡಾರ್‌ಗೆ ಪ್ರದೇಶವನ್ನು ಆಯ್ಕೆ ಮಾಡುವಾಗ ಬಂದರು, ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಸೌಕರ್ಯಗಳನ್ನು ಪರಿಗಣಿಸಲಾಗುತ್ತದೆ. ಕಾರಿಡಾರ್‌ನಲ್ಲಿ ಉತ್ಪಾದನಾ ಹಾಗೂ ಇತರ ಉದ್ದಿಮೆಗಳ ಗುಂಪುಗಳ ಸ್ಥಾಪನೆಗೆ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ. ಇದಕ್ಕೆ ಈಗಾಗಲೇ ಪ್ರಸ್ತಾವನೆಯಲ್ಲಿರುವ ಮಂಗಳೂರು-ಬೆಂಗಳೂರು ಹೈಸ್ಪೀಡ್ ಹೈವೇ ಪ್ರಸ್ತಾವನೆಯನ್ನು ಲಿಂಕ್ ಮಾಡಿದರೆ ಮಂಗಳೂರು ಹಾಗೂ ಹಾಸನ ಭಾಗದ ಅಭಿವೃದ್ಧಿಯಲ್ಲೂ ಒಂದು ಮಹತ್ವದ ಪಾತ್ರವನ್ನು ವಹಿಸಲಿದೆ.ರಾಜ್ಯದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಅದರಲ್ಲೂ ಸಣ್ಣ ಮತ್ತು ಮಧ್ಯಮ ಕೈಗಾರಿಗೆಗಳ ಅಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ಇದೊಂದು ಮಹತ್ವದ ಯೋಜನೆಯಾಗಲಿದೆ . ಈ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕು ಎಂಬ ಒತ್ತಡ ಹೇರಲು ಶಿರಾಡಿ ಘಾಟ್ ಸುರಂಗ ಮಾರ್ಗ ಪೂರಕವಾಗಬಹುದು.
ಎಕ್ಸ್‌ಪ್ರೆಸ್ ಹೈವೆ ಪ್ರಸ್ತಾವನೆಗೂ ಪೂರಕಈಗಾಗಲೇ ಮಂಗಳೂರು-ಬೆಂಗಳೂರು ಮಧ್ಯೆ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣ ಪ್ರಸ್ತಾವನೆಯಲ್ಲಿದೆ. ಚೆನ್ನೈ – ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್‌ನ್ನು ಮಂಗಳೂರಿಗೂ ವಿಸ್ತರಿಸಬೇಕು ಎಂಬ ಬೇಡಿಕೆ ಇದೆ. ಇವುಗಳಿಗೆ ಶಿರಾಡಿಘಾಟ್ ಸುರಂಗ ಮಾರ್ಗ ಬಲ ನೀಡಲಿದೆ. ಈ ಎರಡೂ ಯೋಜನೆಗಳು ಮಂಗಳೂರು ಮತ್ತು ದ.ಕನ್ನಡ ಜಿಲ್ಲೆ ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಆಯಾಮವೊಂದಕ್ಕೆ ತೆರೆದುಕೊಳ್ಳುವುದಕ್ಕೆ ಪೂರಕವಾಗಲಿದೆ. ಪಶ್ಚಿಮ ಕರಾವಳಿ ಬಂದರಿನಿಂದ ಪೂರ್ವ ಕರಾವಳಿಯ ಬಂದರಿಗೆ ಸಂಪರ್ಕ ಕಲ್ಪಿಸುವ ಕಾರಿಡಾರ್ ಆಗಿ ರೂಪುಗೊಳ್ಳಲಿದೆ. ಇದರ ಜತೆಗೆ 3 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಕಾರಿಡಾರ್ ಮಧ್ಯೆ ಲಭ್ಯವಿದ್ದು ಉತ್ಪನ್ನಗಳ ತಯಾರಿಕಾ ಉದ್ಯಮಗಳನ್ನು ಸ್ಥಾಪಿಸಲು ಅನುಕೂಲವಾಗಿದೆ.
ಭಾರತ್‌ಮಾಲಾ ಯೋಜನೆಯಡಿಯಲ್ಲಿ ಮಂಗಳೂರು- ಬೆಂಗಳೂರು, ಮುಂಬಯಿ-ಕೋಲ್ಕತ್ತಾ, ಲೂಧಿಯಾನ-ಕಾಂಡ್ಲಾ ,ಫೋರ್‌ಬಂದರ್-ಸಿಲ್‌ಲಾರ್ ಸೇರಿದಂತೆ ದೇಶದ 4 ಹೆದ್ದಾರಿಗಳನ್ನು 3.18 ಲಕ್ಷ ಕೋಟಿ ರೂ. ಯೋಜನೆಯಲ್ಲಿ ಹೈ ಸ್ಪೀಡ್ ಹೆದ್ದಾರಿಯಾಗಿ ಪರಿವರ್ತಿಸಲು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವಾಲಯ ಯೋಜನೆ ರೂಪಿಸಿದ್ದು ಮಂಗಳೂರು-ಬೆಂಗಳೂರು ಯೋಜನೆಗೆ 1.18 ಲಕ್ಷ ಕೋ.ರೂ.ವೆಚ್ಚ ಅಂದಾಜಿಸಲಾಗಿದೆ. - ಕೇಶವ ಕುಂದರ್