ಕೋಲಾರ: ಗುರುವಾರ (ಜ.11) ದಿಂದ ಮಾರ್ಚ್, 2020ರ ವರೆಗೆ 7ನೇ ಆರ್ಥಿಕ ಗಣತಿ ಕಾರ್ಯ ನಡೆಯಲಿದ್ದು, ಸಾರ್ವಜನಿಕರು ಪಾರದರ್ಶಕ ಮಾಹಿತಿ ನೀಡುವ ಮೂಲಕ ಗಣತಿ ಕಾರ್ಯದ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು.
ಗುರು ವಾರ ತಮ್ಮ ಕಚೇರಿಯಲ್ಲಿ 7ನೇ ಆರ್ಥಿಕ ಗಣತಿ ಕಾರ್ಯ ಕುರಿತು ಹಮ್ಮಿಕೊಂಡಿದ್ದ, ಪತ್ರಿಕಾ ಗೋಷ್ಠಿಯಲ್ಲಿ ಗಣತಿ ಕಾರ್ಯದ ಮೊಬೆ„ಲ್ ಆ್ಯಪ್‌ಗೆ ಚಾಲನೆ ನೀಡಿ ಮಾತನಾಡಿದರು. ಆರ್ಥಿಕ ಗಣತಿ ಕಾರ್ಯವು ಪ್ರತಿ 5 ವರ್ಷ ಗಳಿಗೊಮ್ಮೆ ಭಾರತದಾದ್ಯಂತ ನಡೆಯುತ್ತದೆ. ಮೊದಲ ಆರ್ಥಿಕ ಗಣತಿಯು 1977ರಲ್ಲಿ ನಡೆದಿತ್ತು. ಇದುವರೆಗೂ 6 ಆರ್ಥಿಕ ಗಣತಿ ಕಾರ್ಯಗಳು ನಡೆದಿವೆ. ಪ್ರಸ್ತುತ 7ನೇ ಗಣತಿ ಕಾರ್ಯ ಚಾಲನೆಯಲ್ಲಿದೆ ಎಂದು ಮಾಹಿತಿ ನೀಡಿದರು.
ಆರ್ಥಿಕ ಗಣತಿ ಕಾರ್ಯದಲ್ಲಿ ಗ್ರಾಮೀಣ ಹಾಗೂ ಖಾಸಗಿ ವಲಯಗಳಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ವಿಭಾಗಗಳ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಪರಿಗಣಿಸಲಾಗುತ್ತದೆ. ಈ ಕಾರ್ಯದಲ್ಲಿ ಕೃಷಿ ಚಟುವಟಿಕೆ ಹೊರತುಪಡಿಸಿ ಗಣತಿ ಮಾಡಲಾಗುತ್ತದೆ. ಗಣತಿದಾರರು ತಮಗೆ ನಿರ್ದಿಷ್ಟ ಪಡಿಸಿದ ಗಡಿಯೊಳಗೆ ಬರುವ ಪ್ರತಿ ಮನೆ ಕಟ್ಟಡಗಳಿಗೂ ಭೇಟಿ ನೀಡಿ, ಅಲ್ಲಿ ನಡೆಯುವ ಉದ್ಯಮ, ವ್ಯಾಪಾರ, ಕೆಲಸಗಾರರ ಮಾಹಿತಿ, ಹಣಕಾಸಿನ ಮೂಲ ಇತ್ಯಾದಿ ಮಾಹಿತಿ ಕಲೆ ಹಾಕುತ್ತಾರೆ. ಸಂಗ್ರಹಿಸಿದ ಮಾಹಿತಿಯನ್ನು ವಿವಿಧ ಅಭಿವೃದ್ಧಿ ಕಾರ್ಯ ಕ್ರಮಗಳನ್ನು ಮತ್ತು ಯೋಜನೆ ಗಳನ್ನು ರೂಪಿಸಲು ಮಾತ್ರ ಉಪಯೋಗಿಸಲಾಗುತ್ತಿದೆ. ಸಂಪೂರ್ಣ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಮಾಹಿತಿ ಸಂಗ್ರಹಣೆಯಿಂದ ಜನರ ತಲಾದಾಯ ಹಾಗೂ ರಾಷ್ಟ್ರೀಯ ಆದಾಯವನ್ನು ಲೆಕ್ಕಚಾರಕ್ಕೆ ಬಳಸಲಾಗುವುದು ಎಂದು ತಿಳಿಸಿದರು. ಈ ವರ್ಷ ವಿಶೇಷವಾಗಿ ಕಾಗದ ರಹಿತವಾಗಿ ಮೊಬೈಲ್ ಆ್ಯಪ್‌ನಿಂದ ಮಾಹಿತಿ ಸಂಗ್ರಹಿಸ ಲಾಗುತ್ತದೆ. ಗಣತಿದಾರರು ಮಾಹಿತಿ ಯನ್ನು ಸಂಗ್ರಹಿಸಲು ಬಂದಾಗ ಸಾರ್ವಜನಿಕರು ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು. ಯಾವುದೇ ಗೊಂದಲಗಳಿಗೆ ಒಳಗಾಗದೇ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಪಂ ಸಿಇಒ ಎಚ್.ವಿ ದರ್ಶನ್, ಮುಖ್ಯ ಯೋಜನಾ ಕಾರಿ ಎಂ.ಮಾದೇಶ್, ಜಿಲ್ಲಾ ಸಂಖ್ಯಾ ಸಂಗ್ರಹಣಾ ಕಾರಿ ಎಸ್.ಧನುಂಜಯ, ಸಹಾಯಕ ನಿರ್ದೇಶಕ ವೆಂಕಟರವಣಪ್ಪ ಉಪಸ್ಥಿತರಿದ್ದರು.