Advertisement

ಪೊಲೀಸ್‌ ಹುತಾತ್ಮರಿಗೆ ಶ್ರದ್ಧಾಂಜಲಿ

10:07 AM Oct 22, 2017 | |

ಮಹಾನಗರ: ಪೊಲೀಸರ ಹುತಾತ್ಮರ ದಿನಾಚರಣೆಯ ಅಂಗವಾಗಿ ನಗರದ ಪೊಲೀಸ್‌ ಕಮೀಷನರೇಟ್‌ ಮತ್ತು ದ.ಕ. ಜಿಲ್ಲಾ ಪೊಲೀಸ್‌ ಘಟಕದ ಸಂಯುಕ್ತಾಶ್ರಯದಲ್ಲಿ ಪೊಲೀಸ್‌ ಹುತಾತ್ಮರ ದಿನಾಚರಣೆಯನ್ನು ಶನಿವಾರ ದ.ಕ. ಜಿಲ್ಲಾ ಶಶಸ್ತ್ರ ಮೀಸಲುಪಡೆ ಕಚೇರಿಯ ಆವರಣದಲ್ಲಿ ಆಚರಿಸಲಾಯಿತು.

Advertisement

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಎಸ್‌. ಮಾತನಾಡಿ, ಸರಕಾರ ಮತ್ತು ದೇಶದ ವ್ಯವಸ್ಥೆಯಲ್ಲಿ ಪೊಲೀಸ್‌ ವ್ಯವಸ್ಥೆ ಆಧಾರ ಸ್ತಂಭವಾಗಿದೆ. ಉಳಿದ ದಿನಾಚರಣೆಯ ರೀತಿಯಲ್ಲಿಯೇ ಪೊಲೀಸ್‌ ಹುತಾತ್ಮರ ದಿನಾಚರಣೆಗೂ ಪ್ರಥಮ ಆಧ್ಯತೆಯಿದೆ. ಜಿಲ್ಲೆಯಲ್ಲಿ ಸಾಕಷ್ಟು ಸವಾಲುಗಳಿವೆ. ಅಮಾಯಕರು ಮತ್ತು ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ನೀಡುವ ಕೆಲಸವನ್ನು ಪೊಲೀಸರು ಮಾಡಬೇಕು ಎಂದರು.

ದೇಶಸೇವೆಗಾಗಿ ಪ್ರಾಣತ್ಯಾಗ
ಇಲ್ಲಿಯವರೆಗೆ ಒಟ್ಟಾರೆಯಾಗಿ 34 ಸಾವಿರದ 418 ಮಂದಿ ಪೊಲೀಸ್‌ ಸಿಬಂದಿಗಳು ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಾಣತ್ಯಾಗ ಮಾಡಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೆ 383 ಮಂದಿ ಪೊಲೀಸರು ದೇಶಸೇವೆಗಾಗಿ ತಮ್ಮ ಪ್ರಾಣ ಮುಡಿಪಾಗಿಟ್ಟಿದ್ದಾರೆ ಎಂದರು.

ಮಂಗಳೂರು ಪಶ್ಚಿಮ ವಲಯ ಪೊಲೀಸ್‌ ಮಹಾನಿರೀಕ್ಷಕ ಹೇಮಂತ್‌ ನಿಂಬಾಳ್ಕರ್‌, ಮಂಗಳೂರು ನಗರ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

ಹುತಾತ್ಮರಾದ ಎಲ್ಲ ಪೊಲೀಸರ ಹೆಸರು ಹೇಳಿ ನಮನ ಸಲ್ಲಿಸಲಾಯಿತು. ಇನ್‌ಸ್ಪೆಕ್ಟರ್‌ ನೇತೃತ್ವದ ಪೊಲೀಸ್‌ ಮೀಸಲು ಪಡೆ ಮತ್ತು ಸಶಸ್ತ್ರ ಮೀಸಲು ಪಡೆಯಿಂದ ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸ್‌ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು. ಟ್ರಾಫಿಕ್‌ ಎಎಸ್‌ಐ ಹರಿಶ್ಚಂದ್ರ ಬೈಕಂಪಾಡಿ ನಿರೂಪಿಸಿದರು.

Advertisement

ಪ್ರತೀ ವರ್ಷ ನಮನ
1959ರಲ್ಲಿ ಚೀನಾ ಗಡಿ ಕಾಯುವ ಸಮಯದಲ್ಲಿ 10 ಮಂದಿ ಪೊಲೀಸರು ಪ್ರಾಣ ಅರ್ಪಿಸಿದಾಗಿನಿಂದ ಹುತಾತ್ಮ ಪೊಲೀಸರಿಗೆ ಪ್ರತೀ ವರ್ಷ ಅ.21ರಂದು ನಮನ ಸಲ್ಲಿಸುತ್ತೇವೆ. 
ಸುಧೀರ್‌ ಕುಮಾರ್‌ ರೆಡ್ಡಿ
  ಪೊಲೀಸ್‌ ಅಧೀಕ್ಷಕ 

Advertisement

Udayavani is now on Telegram. Click here to join our channel and stay updated with the latest news.

Next