ಚನ್ನಪಟ್ಟಣ: ಯಾವುದೇ ಮಗು ಶಾಲೆಯಿಂದಹೊರ ಉಳಿಯಬಾರದು ಎಂಬ ಉದ್ದೇಶದಿಂದಮಕ್ಕಳಿಗಾಗಿ ಉಚಿತ ಶಿಕ್ಷಣ, ಮಧ್ಯಾಹ್ನದ ಬಿಸಿಊಟ, ಉಚಿತ ಸೈಕಲ್ ವಿತರಣೆ, ಉಚಿತ ಪುಸ್ತಕ,ಬ್ಯಾಗ್ ವಿತರಿಸುವ ಹಲವಾರು ಯೋಜನೆಗಳನ್ನುಸರ್ಕಾರ ಹಮ್ಮಿಕೊಂಡಿದೆ. ಈ ಯೋಜನೆಗಳಪ್ರಯೋಜನೆಯನ್ನು ಪ್ರತಿಯೊಂದು ಮಗುವು ಪಡೆಯಬೇಕು ಎಂದು ಜಿಲ್ಲಾ ಕಾನೂನುಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ವೆಂಕಟಪ್ಪ ತಿಳಿಸಿದರು.
ತಾಲ್ಲೂಕಿನ ವಂದಾರಗುಪ್ಪೆಯ ಸರ್ಕಾರಿಬಾಲಕಿಯರ ಬಾಲಮಂದಿರದಲ್ಲಿ ನಡೆದ ಮಕ್ಕಳಹಬ್ಬ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಮಕ್ಕಳನ್ನು ಪ್ರೀತಿಸಿಗೌರವಿಸಬೇಕು. ಪ್ರಸ್ತುತ ಸಮಾಜದಲ್ಲಿ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದರಿಂದ ಕಾನೂನಿನ ರಕ್ಷಣೆಗಾಗಿ ಸರ್ಕಾರ ವಿಶೇಷನ್ಯಾಯಾಲಯಗಳನ್ನು ಸ್ಥಾಪನೆ ಮಾಡಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ದತಿ ನಿಷೇಧ ಇದ್ದರೂ, ಪೋಷಕರು ಮಕ್ಕಳನ್ನು ತಮ್ಮ ಜೀವನ ನಿರ್ವಹಣೆಗಾಗಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ಅಲ್ಲದೆ ಬಾಲ್ಯ ವಿವಾಹ ಪದ್ಧತಿ ಜಿಲ್ಲೆಯಲ್ಲಿ ಕಾಣುವಂತಾಗಿದೆ. ಹಾಗಾಗಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಅವರ ಭವಿಷ್ಯ ರೂಪಿಸಬೇಕು ಎಂದು ಅವರು ತಿಳಿ ಹೇಳಿದರು.
ಪ್ರಧಾನ ಕಿರಿಯ ಸಿವಿಲ್ ನ್ಯಾಯಾಧೀಶಮಿಲನ ಮಾತನಾಡಿ, ಮಕ್ಕಳು ವಿದ್ಯಾವಂತರಾದರೆಸಾಲದು, ಬುದ್ದಿವಂತರಾಗಬೇಕು. ಓದಿದವರೆಲ್ಲ ಬುದ್ದಿವಂತರಾಗುವುದಿಲ್ಲ. ಕಾನೂನಿನ ಅರಿವು ತಿಳಿದಿರಬೇಕು. ಕೆಟ್ಟದನ್ನು ಪ್ರಶ್ನೆ ಮಾಡಬೇಕು. ಸಮಾಜದಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ತಡೆಯುವ ಮನೋಭಾವವನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಒ ಇಕ್ರಾಮ್, ಬಾಲನ್ಯಾಯ ಮಂಡಳಿ ಸದಸ್ಯ ಪೊ›. ಶಿವಲಿಂಗಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಬಿ.ಎಸ್ ಭಾರತಿದೇವಿ, ಮಕ್ಕಳಕಲ್ಯಾಣ ಸಮಿತಿ ಅಧ್ಯಕ್ಷ ಷಣ್ಮುಗ ಸುಂದರಂ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಕಾಂತ ರಾಜು, ಮಾರುತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಮ್ ಬೊಮ್ಮೆಗೌಡ ಹಾಜರಿದ್ದರು.