Advertisement

ಜನತಾ ಪ್ರಜಾಪ್ರಭುತ್ವ ಸ್ಥಾಪನೆಯಾಗಲಿ

02:21 PM Nov 25, 2021 | Team Udayavani |

ದೇವದುರ್ಗ: ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ತಾರತಮ್ಯ, ಬಡತನ ನಿವಾರಣೆ ದೂರವಾಗಲು ದೇಶದಲ್ಲಿ ಜನತಾ ಪ್ರಜಾಪ್ರಭುತ್ವ ರಂಗ ಸ್ಥಾಪನೆ ಆಗಬೇಕು ಎಂದು ಸಿಪಿಐಎಂ ಸಂಘಟನೆ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಹೇಳಿದರು.

Advertisement

ತಾಲೂಕಿನ ಜಾಲಹಳ್ಳಿ ಗ್ರಾಮದ ಪೊಲೀಸ್‌ ಠಾಣೆ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ರಾಯಚೂರು ಜಿಲ್ಲಾ 13ನೇ ಸಿಪಿಐಎಂ ಸಮ್ಮೇಳನ ಬಹಿರಂಗ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರಿಗೆ, ಕೂಲಿ ಕಾರ್ಮಿಕರಿಗೆ, ಯುವಕರಿಗೆ ಉದ್ಯೋಗ ಶುಭ ದಿನ ತರುತ್ತೇವೆ ಎಂದು ಅಧಿಕಾರಕ್ಕೆ ಬಂದು ಏಳು ವರ್ಷವಾದರೂ ಸುಳ್ಳಿನ ಭರವಸೆಯಲ್ಲೇ ಕಾಲಹರಣ ಮಾಡಲಾಗುತ್ತಿದೆ. ಹಸಿವು, ಅಪೌಷ್ಟಿಕತೆಯಿಂದ ಐದು ಸೆಕೆಂಡ್‌ಗೆ 12 ಜನರು ಸಾವನ್ನಪುತ್ತಿದ್ದಾರೆ. ಕೇಂದ್ರ ಸರಕಾರಕ್ಕೆ 35ರಿಂದ 40 ಲಕ್ಷ ಕೋಟಿ, ರಾಜ್ಯ ಸರಕಾರಕ್ಕೆ 2 ಲಕ್ಷ ಕೋಟಿ ರೂ. ಜನರಿಂದ ತೆರಿಗೆ ಸಂಗ್ರಹವಾಗುತ್ತಿದೆ. ಆದರೂ ದೇಶದಲ್ಲಿ ಹಸಿವು, ಅಪೌಷ್ಟಿಕತೆ, ಬಡತನ ನಿವಾರಣೆ ಆಗುತ್ತಿಲ್ಲ ಎಂದು ದೂರಿದರು.

107 ದೇಶಗಳಲ್ಲಿ ಅಪೌಷ್ಟಿಕತೆ ಹೆಚ್ಚಿದ್ದು, ಅದರಲ್ಲಿ ಭಾರತ್‌ 101ನೇ ಸ್ಥಾನದಲ್ಲಿದೆ. ಬಿಸಿಯೂಟ, ಅಸಂಘಟಿತರು, ಕೂಲಿ ಕಾರ್ಮಿಕರಿಗೆ ದಿನಕ್ಕೆ 750 ರೂ. ವೇತನ ಸೌಲಭ್ಯ ಜಾರಿಗೆ ತರಬೇಕು. ರೈತರು ಬೆಳೆದ ಬೆಳೆಗಳಿಗೆ ವೆಚ್ಚ ಭರಿಸದಷ್ಟು ಬೆಂಬಲ ಬೆಲೆ ನೀಡಬೇಕು. ಖರೀದಿ ಕೇಂದ್ರಗಳು ಆರಂಭಿಸಬೇಕು. ಈ ದೇಶದ ಬೆನ್ನಲು ರೈತರು ಎಂಬುವುದು ಮಾತಿಗೆ ಸಿಮೀತವಾಗದಂತೆ ಅವರ ಕಷ್ಟ ನಷ್ಟಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಸ್ಪಂದಿಸಬೇಕು. ಜನತಾ ಪ್ರಜಾಪ್ರಭುತ್ವ ರಂಗ ದೇಶದಲ್ಲಿ ಸ್ಥಾಪನೆಗೊಂಡಾಗ ಮಾತ್ರ ದೇಶದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು.

ಜನರಿಂದ ಬರುವಂತ ತೆರಿಗೆ ಹಣದಲ್ಲಿ ಬಡವರ ಹಸಿವು ನೀಗಿಸಲು ಸಾಧ್ಯವಾಗುತ್ತಿಲ್ಲ. ಅಪೌಷ್ಟಿಕತೆಯಿಂದ ಸಾವಿನ ಸಂಖ್ಯೆ ದೇಶದಲ್ಲಿ ಹೆಚ್ಚಿದೆ ಎಂದು ಕಳವಳ ವ್ಯಕ್ತಪಡಿಸಿದರು. ಭ್ರಷ್ಟಾಚಾರ ದೇಶ ಮುಕ್ತಿ ಮಾಡುತ್ತೇನೆ. ಕಪ್ಪು ಹಣ ತಂದು ಬಡವರ ಬ್ಯಾಂಕ್‌ ಖಾತೆಗೆ ಹಣ ಹಾಕುತ್ತೇನೆ ಎಂದು ಹೇಳಿದ ಮೋದಿ ಸರಕಾರ ಮಾತು ತಪ್ಪಿದೆ ಎಂದು ದೂರಿದರು.

Advertisement

ಸಮ್ಮೇಳನ ಮೆರವಣಿಗೆ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಿಂದ ರಂಗನಾಥ ದೇವಸ್ಥಾನ, ಮಹರ್ಷಿ ವಾಲ್ಮೀಕಿ ವೃತ್ತ, ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ ಮಾರ್ಗವಾಗಿ ಡೊಳ್ಳು ಕುಣಿತ, ಘೋಷಣೆಗಳು ಕೂಗುತ್ತ ವೇದಿಕೆ ಕಾರ್ಯಕ್ರಮದವರೆಗೆ ಮೆರವಣಿಗೆ ಜರುಗಿತು. ಈ ಸಂದರ್ಭದಲ್ಲಿ ನಿತ್ಯನಂದ ಸಾಮಿ, ಎಚ್‌.ಪದ್ಮಾ, ಕರಿಯಪ್ಪ ಅಚ್ಚಾಳ್ಳಿ, ಶೇಕ್ಷಾಖಾದ್ರಿ, ಗಿರಿಯಪ್ಪ ಪೂಜಾರಿ, ನರಸಣ್ಣ ನಾಯಕ, ಶಬ್ಬೀರ ಜಾಲಹಳ್ಳಿ, ಡಿ.ಎಸ್‌. ಶರಣಬಸವ, ಮಹಾಲಿಂಗ ದೊಡ್ಡಮನಿ, ಶೇಖಮ್ಮ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next