Advertisement

ವಿರೋಧ ಪಕ್ಷದವರೂ ಸಲಹೆ ನೀಡಲಿ  : ರಮೇಶ ಜಾರಕಿಹೊಳಿ

03:51 PM May 16, 2021 | Team Udayavani |

ಗೋಕಾಕ: ಕೊರೊನಾ ಎರಡನೆಯ ಲಸಿಕೆ ನೀಡಲು ಸರಕಾರ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದು ವಿರೋಧ ಪಕ್ಷದವರು ಸಲಹೆ ನೀಡುವುದನ್ನು ಬಿಟ್ಟು ಸರಕಾರದ ಕೊರೊನಾ ಕ್ರಮಗಳನ್ನು ಖಂಡಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

Advertisement

ಶನಿವಾರ ನಗರದ ಶಾಸಕರ ಕಾರ್ಯಾಲಯದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ವ್ಯವಸ್ಥಿತವಾಗಿ ತಡೆಗಟ್ಟಲು ಈಗಾಗಲೇ ಅ ಧಿಕಾರಿಗಳಿಗೆ ಸೂಚಿಸಲಾಗಿದ್ದು, ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕೆಂದು ಸರಕಾರಿ ಹಾಗೂ ಖಾಸಗಿ ವೈದ್ಯರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಕೊರೊನಾ ಕರ್ಫ್ಯೂ ವಿಸ್ತರಿಸುವ ಬಗ್ಗೆ ಅವರ ಅಭಿಪ್ರಾಯ ವಿಚಾರಿಸಿದಾಗ, ರಾಜ್ಯದ ಜನತೆಯ ಹಿತದೃಷ್ಟಿಯಿಂದ ಲಾಕಡೌನ್‌ ವಿಸ್ತರಿಸುವುದು ಸೂಕ್ತ ಎಂದ ಅವರು, ಖಾಸಗಿ ಆಸ್ಪತ್ರೆಯವರು ಹೆಚ್ಚಿನ ದರ ಪಡೆಯುತ್ತಿದ್ದಾರೆ ಎಂದು ತಮ್ಮ ಕಾರ್ಯಾಲಯಕ್ಕೆ ದೂರುಗಳು ಬಂದಿವೆ. ಯಾರಿಂದಲೂ ಹೆಚ್ಚಿನ ದರ ವಸೂಲು ಮಾಡದೇ ಸರಕಾರ ನಿಗದಿ ಪಡಿಸಿದ ದರಪಟ್ಟಿಯ ಫಲಕವನ್ನು ಆಸ್ಪತ್ರೆಯಲ್ಲಿ ಹಾಕುವಂತೆ ಸೂಚಿಸಲಾಗಿದೆ ಎಂದು ರಮೇಶ ಜಾರಕಿಹೊಳಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next