Advertisement
ಜತೆಗೆ, ಪ್ರಶ್ನೆ ಪತ್ರಿಕೆ ಸೋರಿಕೆ ಜಾರ್ಖಂಡ್‌ನ ಹಜಾರಿಬಾಘ ಮತ್ತು ಬಿಹಾರದ ಪಾಟ್ನಾಗೆ ಮಾತ್ರ ಸೀಮಿತವಾಗಿದೆ. ಸೋರಿಕೆಯು ವ್ಯಾಪಕವಾಗಿಲ್ಲ. ಹೀಗಾಗಿ 2024ರ ನೀಟ್-ಯುಜಿ ಪರೀಕ್ಷೆಯನ್ನು ರದ್ದುಗೊಳಿಸುವುದಿಲ್ಲ ಎಂದೂ ತಿಳಿಸಿದೆ. ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ| ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು, ರಾಷ್ಟ್ರೀಯ ಪರೀûಾ ಸಂಸ್ಥೆ (NTA) ಪದೇ ಪದೆ ತನ್ನ ನಿಲುವುಗಳನ್ನು ಬದಲಿಸುವುದನ್ನು ನಿಲ್ಲಿಸಬೇಕು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಹೇಳಿದೆ.
Related Articles
ನೀಟ್ ಪ್ರಶ್ನೆಪತ್ರಿಕೆಗಳನ್ನು ಇ-ರಿಕ್ಷಾಗಳಲ್ಲಿ ಸಾಗಿಸಲಾಗಿದೆ ಎಂಬ ಸುದ್ದಿಯ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇ-ರಿಕ್ಷಾಗಳು, ಖಾಸಗಿ ಕೊರಿಯರ್ ಕಂಪನಿಗಳ ಮೂಲಕ ಪ್ರಶ್ನೆಪತ್ರಿಕೆ ಸಾಗಾಟ ಮಾಡಿರುವುದು ಅವುಗಳ ಭದ್ರತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡುತ್ತದೆ. ಹೀಗಾಗಿ, ಪ್ರಶ್ನೆಪತ್ರಿಕೆಗಳ ಸಾಗಾಟದ ವಿಚಾರದಲ್ಲಿ ಇನ್ನು ಮುಂದೆ ಸಮರ್ಪಕ ಭದ್ರತಾ ಕ್ರಮ ಕೈಗೊಳ್ಳಬೇಕು ಎಂದೂ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
Advertisement
ಸುಪ್ರೀಂ ನಿರ್ದೇಶನಗಳೇನು?ನೀಟ್-ಯುಜಿ ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪುನಾರಚನೆ ಮಾಡಬೇಕು. ಭದ್ರತೆಯಲ್ಲಿ ಸುಧಾರಣೆ, ದತ್ತಾಂಶ ಸಂರಕ್ಷಣಾ ಕ್ರಮಗಳು, ನಿಯಮಿತ ಆಡಿಟ್‌ಗಳು, ಪರೀಕ್ಷಾ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ, ವಿದ್ಯಾರ್ಥಿಗಳ ಕುಂದುಕೊರತೆ ನಿವಾರಣೆಗೆ ಕ್ರಮ, ಪ್ರಶ್ನೆಪತ್ರಿಕೆಗಳ ಸಾಗಾಟಕ್ಕೆ ಸಮರ್ಪಕ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಹಲವು ಸೂಚನೆಗಳನ್ನು ಸುಪ್ರೀಂ ಕೋರ್ಟ್ ನೀಡಿದೆ. ನೀಟ್‌ಗೆ ಮುನ್ನ ವೈದ್ಯ ಶಿಕ್ಷಣ ವ್ಯವಹಾರವಾಗಿತ್ತು: ನಡ್ಡಾ
ಹೊಸದಿಲ್ಲಿ: ನೀಟ್ ಪರೀಕ್ಷೆಯನ್ನು ಪರಿಚಯಿಸುವು ದಕ್ಕೂ ಮುನ್ನ ವೈದ್ಯಕೀಯ ಶಿಕ್ಷಣ ವ್ಯವಹಾರವಾಗಿತ್ತು. ಪಿಜಿ ಸೀಟುಗಳನ್ನು 8 ರಿಂದ 13 ಕೋಟಿ ರೂ.ಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಶುಕ್ರವಾರ ಹೇಳಿ ದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ವಿವಾದದ ನಡುವೆಯೇ ನಡ್ಡಾರ ಈ ಹೇಳಿಕೆ ಮಹತ್ವ ಪಡೆದಿದೆ. ನೀಟ್ ಕುರಿತು ಡಿಎಂಕೆ ರಾಜ್ಯಸಭಾ ಸದಸ್ಯ ಎಂ ಮೊಹಮ್ಮದ್ ಅಬ್ದುÇÉಾ ಮಂಡಿಸಿದ ಖಾಸಗಿ ಸದಸ್ಯರ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ನಡ್ಡಾ, ತಾವು ಮೊದಲ ಬಾರಿ ಆರೋಗ್ಯ ಸಚಿವರಾಗಿದ್ದಾಗ ನೀಟ್ ಜಾರಿಯಾಯ್ತು. ಅದಕ್ಕೂ ಮೊದಲು ವೈದ್ಯಕೀಯ ಶಿಕ್ಷಣದಲ್ಲಿ ಭ್ರಷ್ಟಾಚಾರ ತುಂಬಿತ್ತು ಎಂದಿದ್ದಾರೆ.