Advertisement

ಪುರಸಭೆ ಮೂಲಭೂತ ಸೌಲಭ್ಯ ಕಲ್ಪಿಸಲಿ: ರೈತಸಂಘ

03:15 PM Dec 08, 2020 | Suhan S |

ಬಂಗಾರಪೇಟೆ: ಇತ್ತೀಚಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಹೊರರಾಜ್ಯಗಳ ಪರಿಸ್ಥಿತಿ ನೋಡಿದರೆ ಮುಂದಿನ ದಿನಗಳಲ್ಲಿ ನಮ್ಮ ನಗರಕ್ಕೂ ಇದೇ ಪರಿಸ್ಥಿತಿ ಬರುತ್ತದೆ ಎಂಬ ಭವಿಷ್ಯ ಕಣ್ಣುಮುಂದೆ ಕಾಣುತ್ತಿರುವುದರಿಂದ ಪಟ್ಟಣದಲ್ಲಿ ಪುರಸಭೆ ಎಚ್ಚರವಹಿಸಿ ಅಗತ್ಯ ಕ್ರಮಕೈಗೊಳ್ಳಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷಕೆ.ನಾರಾಯಣಗೌಡ ಹೇಳಿದರು.

Advertisement

ರೈತ ಸಂಘದಿಂದ ಪುರಸಭೆ ಮುಂದೆ ಹೋರಾಟಮಾಡಿ ಮಾತನಾಡಿದ ಅವರು, ಪಟ್ಟಣದಲ್ಲಿ ಒತ್ತುವರಿ ಆಗಿರುವ ಕೆರೆ, ರಾಜಕಾಲುವೆತೆರವುಗೊಳಿಸಿ ನಿವೇಶನ ರಹಿತ ಬಡವರಿಗೆಕೂಡಲೇ ನಿವೇಶನ ಮಂಜೂರು ಮಾಡಬೇಕು,ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಸೂಕ್ತ ಅಧಿಕಾರಿಗಳಿಂದ ತನಿಖೆ ನಡೆಸಬೇಕೆಂದರು.

ನಗರಾದ್ಯಂತ ಸಾವಿರಾರು ಬಡವರು ನಿವೇಶನಗಳಿಲ್ಲದೆ, ಗುಡಿಸಲುಗಳಲ್ಲಿ ವಾಸಮಾಡುತ್ತಿದ್ದಾರೆ. ಕೆಲವು ದಲ್ಲಾಳಿಗಳು ಬಡವರ ಬಳಿ ನಿವೇಶನ ಕೊಡಿಸುತ್ತೇವೆಂದು ಸಾವಿರದಿಂದ ಲಕ್ಷದ ರೂ.ಗಳವರೆಗೂ ಹಣ ಪಡೆದು ವಂಚನೆ ಮಾಡುತ್ತಿದ್ದಾರೆಂದರು. ರೈತ ಸಂಘದ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಜಮೀರ್‌ಪಾಷಾ, ನಗರ ಅಭಿವೃದ್ಧಿಗೆಹೆಚ್ಚಿನ ಆದ್ಯತೆ ನೀಡಿ ದಲ್ಲಾಳಿ ಮುಕ್ತ ಮಾಡ ಬೇಕೆಂದರು. ಪುರಸಭೆ ಹಾಲಿ ಸದಸ್ಯ ಕೆ.ಚಂದ್ರಾರೆಡ್ಡಿ ಮಾತನಾಡಿ, ಎಲ್ಲಾ ಆರೋಪಗಳ ಬಗ್ಗೆ ತನಿಖೆ ಮಾಡಿ ಕ್ರಮಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐತಾಂಡಹಳ್ಳಿ ಮುನ್ನಾ, ಜಿಲ್ಲಾ ಉಪಾಧ್ಯಕ್ಷ ಸ್ವಸ್ತಿಕ್‌ ಶಿವು, ತಾಲೂಕು ಅಧ್ಯಕ್ಷ ಐತಂಡಹಳ್ಳಿ ಮಂಜು ನಾಥ್‌, ಹಸಿರು ಸೇನೆ ಅಧ್ಯಕ್ಷ ಚಾಂದ್‌ಪಾಷಾ, ಈಕಂಬಳ್ಳಿ ಮಂಜುನಾಥ್‌, ಜಾವೀದ್‌, ಕಿರಣ್‌, ನವಾಜ್‌ಪಾಷಾ, ಗೌಸ್‌ಪಾಷಾ ಇದ್ದರು.

ಉತ್ಪನ್ನ ತಯಾರಿಸಿ ಮಾರುಕಟ್ಟೆ ಕಂಡುಕೊಳ್ಳಿ: ಡಾ.ರೂಪಾ :

Advertisement

ಚಿಂತಾಮಣಿ: ಪ್ರತಿಯೊಬ್ಬ ಮಹಿಳೆಯಲ್ಲಿಯೂ ತನ್ನದೇ ಆದ ವಿವಿಧ ರೀತಿಯ ಕೌಶಲ್ಯ ಇರಲಿದ್ದು ವಿವಿಧ ಪದಾರ್ಥಗಳನ್ನು ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕಆರ್ಥಿಕ ಅಭಿವೃದ್ಧಿ ಹೊಂದಬೇಕೆಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಡಾ. ಎಲ್‌.ರೂಪಾ ಕಿವಿ ಮಾತು ಹೇಳಿದರು.

ತಾಲೂಕಿನ ಕಾಗತಿ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ(ಆತ್ಮ) ಸಂಯುಕ್ತಾಶ್ರಯದಲ್ಲಿ ಹಮ್ಮಿ ಕೊಂಡಿದ್ದ ಆತ್ಮಾ ಗುಂಪುಗಳಿಗೆಕೌಶಲ್ಯ ವರ್ಧನೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಗುಂಪು ಅಥವಾ ಸ್ವಸಹಾಯ ಸಂಘ ರಚನೆ ಮಾಡಿಕೊಂಡು ರುಚಿಕರವಾದ ಪದಾರ್ಥ ತಯಾರಿಸಿ ತಮ್ಮ ಗುಂಪಿಗೆನಿರ್ದಿಷ್ಟವಾದ ಹೆಸರನ್ನು ನೋಂದಾಯಿಸಿಕೊಂಡು ಆ ಹೆಸರಿನ ಮೂಲಕತಯಾರಿಸಿದ ಪದಾರ್ಥಗಳನ್ನು ಮಾರುಕಟ್ಟೆಗಳಲ್ಲಿ ಮಾರಾಟ ಮಾಡಬೇಕು. ಆಗ ಗ್ರಾಹಕರು, ಮತ್ತೂಮ್ಮೆ ತಮ್ಮ ಬ್ರಾಂಡಿನ ಹೆಸರನ್ನು ಕೇಳಿ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಕುರಬೂರು ರೇಷ್ಮೆ ಕೃಷಿ ವಿವಿ ವಿಜ್ಞಾನಿ ಡಾ.ಭಾವನಾ ಅವರಿಂದ ಸಿಹಿ ಪದಾರ್ಥಗಳ ತರಬೇತಿ ನೀಡಲಾಯತು. ಎಫ್ಪಿಒ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ್‌, ಡಾ.ಪರಮೇಶ್ವರ್‌, ಉಪ ಕೃಷಿ ನಿರ್ದೇಶಕಿ ಡಾ. ಅನುರೂಪ ಕುರಬೂರು, ಕೃಷಿ ನಿರ್ದೇಶಕ ಡಾ.ಶ್ರೀನಿವಾಸ್‌, ಡಾ.ಪುಷ್ಪಾ, ಚೇತನಾ, ಡಾ.ಕೇಶವರೆಡ್ಡಿ, ಚೇತನ್‌, ಸತೀಶ್‌,ಕೃಷಿ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next