Advertisement
ನಗರದ ಲಾಹೋಟಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘ ಮತ್ತು ಗುಲಬರ್ಗಾ ದಾಲ್ ಮಿಲ್ಲರ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉತ್ತರ ಕರ್ನಾಟಕ ಎಪಿಎಂಸಿ ವರ್ತಕರ ಹಾಗೂ ರೈತರ “ಭಾವಾಂತರ ಯೋಜನೆ ಸಮಾವೇಶ’ದಲ್ಲಿ ಮುಖ್ಯ ಅತಿಥಿಯಾಗಿ ಅವರುಮಾತನಾಡಿದರು.
Related Articles
Advertisement
ಭಾವಾಂತರ ಯೋಜನೆ ಶೀಘ್ರ ಜಾರಿ: ಬೆಂಬಲ ಬೆಲೆ ಮತ್ತು ಮಾರುಕಟ್ಟೆಯಲ್ಲಿ ಮಾರಾಟವಾಗುವ ನಡುವಿನ ವ್ಯತ್ಯಾಸದ ಹಣ ರೈತರ ಬ್ಯಾಂಕ್ ಖಾತೆಗೆ ತುಂಬುವ ಕೇಂದ್ರ ಸರ್ಕಾರದ ಭಾವಾಂತರ ಯೋಜನೆ ರಾಜ್ಯದಲ್ಲಿ ಶೀಘ್ರದಲ್ಲೇ ಅನುಷ್ಠಾನಕ್ಕೆತರಲಾಗುವುದು ಎಂದರು. ಕೇಂದ್ರದಿಂದ ಹೊಸ ಫಾರ್ಮುಲಾ: ಕೇಂದ್ರ ಸರ್ಕಾರ ಎಲ್ಲ ಯೋಜನೆಗಳ ಹೊರತಾಗಿ ಕೃಷಿ ಉತ್ಪನ್ನಗಳ ಖರೀದಿಗೆ ಹೊಸ ಫಾರ್ಮುಲಾ ತಂದಿದ್ದು, ಉತ್ಪನ್ನಗಳನ್ನು ಸರ್ಕಾರ 40ರಷ್ಟು ಖರೀದಿಸಿದರೆ, ವರ್ತಕರು ಶೇ.60ರಷ್ಟು ಉತ್ಪನ್ನಗಳನ್ನು ಖರೀದಿಸಬೇಕೆಂಬುವುದಾಗಿದೆ. ಇದರ ಪ್ರಕಾರ ವರ್ತಕರು ಖರೀದಿಸುವ ಉತ್ಪನ್ನಗಳಿಗೆ ಶೇ.15ರಷ್ಟು ಕಮಿಷನ್ ಸರ್ಕಾರದಿಂದಲೇ ಸಿಗುತ್ತದೆ. ಇದಕ್ಕೆ ಯಾವುದೇ ಷರತ್ತುಗಳು ಇರುವುದಿಲ್ಲ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಮಾತನಾಡಿ, ನೇರ ಮಾರುಕಟ್ಟೆಯಿಂದ ರೈತರು ಮತ್ತು ವರ್ತಕರಿಗೂ ಅನ್ಯಾಯವಾಗುತ್ತಿದೆ. ರೈತರ ಎಲ್ಲ ಉತ್ಪನ್ನಗಳು ಮಾರುಕಟ್ಟೆಗೆ ನೇರ ಸರಬರಾಜು ಆಗಬೇಕಿದ್ದು,
ಯಾವುದೇ ಉತ್ಪನ್ನ ಮಾರುಕಟ್ಟೆ ಮೂಲಕವೇ ಮಾರಾಟವಾಗಬೇಕು. ಆಗ ಮಾತ್ರ ರೈತರ ಉತ್ಪನ್ನದ ಬಗ್ಗೆ ಸರಿಯಾದ ಲೆಕ್ಕ ಸಿಗುತ್ತದೆ ಎಂದರು. ಆಮದಿಗೆ ಕಡಿವಾಣ ಹಾಕಬೇಕು: ವಿದೇಶಗಳಿಂದ ಬೇಳೆ ಕಾಳು ಆಮದು ಮಾಡಿಕೊಳ್ಳುತ್ತಿರುವುದು ರೈತರ ಸಮಸ್ಯೆಯ ಮೂಲ ಎಂದು ರೈತ ಮುಖಂಡ ಮಾರುತಿ ಮಾನ್ಪಡೆ ಹೇಳಿದರು. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಗೌರವ ಅಧ್ಯಕ್ಷ ಬಸವರಾಜ ಜವಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸುಗೂರ್, ಎಪಿಎಂಸಿ ಕಾರ್ಯದರ್ಶಿ ಎಂ.ಎಸ್.ರಾಜಶ್ರೀ, ಶರಣ ಬಸಪ್ಪ ಪಪ್ಪಾ, ಬಸವರಾಜ ಇಂಗಿನ್, ಸೋಮನಾಥ ಜೈನ್, ಚಿದಂಬರ ಪಾಟೀಲ್, ಶಿವಕುಮಾರ ಘಂಟಿ, ಸಿದ್ದರಾಮಪ್ಪ ಪಾಟೀಲ್, ಬಿ.ಬಿ. ಶೆಟಗಾರ, ಎಸ್.ಎಸ್. ಪಾಟೀಲ ಹಾಗೂ ಕಲಬುರಗಿ, ರಾಯಚೂರು, ಗದಗ, ಬೀದರ್, ಯಾದಗಿರಿ, ಕೊಪ್ಪಳ ಜಿಲ್ಲೆಗಳ ರೈತರು ಹಾಗೂ ವರ್ತಕರು ಪಾಲ್ಗೊಂಡಿದ್ದರು. ದೂರದ ಬೆಟ್ಟ ಕಣ್ಣಿಗೆ ಚೆಂದ ಭಾವಾಂತರ ಯೋಜನೆ ಎನ್ನುವುದು ದೂರದ ಬೆಟ್ಟವಿದ್ದಂತೆ. ಅದು ಕಣ್ಣಿಗೆ ಚೆಂದ ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ ಹೇಳಿದರು. ಭಾವಾಂತರ ಯೋಜನೆ ಜಾರಿಗೆ ತರಬೇಕೆಂದೇ ಒತ್ತಾಯಿಸಲು ನಡೆದ ಸಮಾವೇಶದಲ್ಲಿ ಭಾವಾಂತರ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಅವರು, ಮಧ್ಯಪ್ರದೇಶದಲ್ಲಿ ಶೇ.25ರಷ್ಟು ರೈತರಿಂದ ಮಾತ್ರ ಉತ್ಪನ್ನ
ಖರೀದಿಸಲಾಗಿದೆ. ಬೆಂಬಲ ಬೆಂಬಲ ಯೋಜನೆ ಮತ್ತು ಭಾವಾಂತರ ಯೋಜನೆಗೆ ಹೋಲಿಕೆ ಆಗೋದಿಲ್ಲ. ಈ ಯೋಜನೆ ಬಗ್ಗೆ ಸೂಕ್ತ ಅಧ್ಯಯನ ಮಾಡಬೇಕಿದೆ ಎಂದರು.