ಮಾಣಿ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆರು ಗ್ರಾಮಗಳಿಗೆ ಜಲಪೂರಣದ ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ನ. 8ರಂದು ನೇತ್ರಾವತಿ ನದಿ ಕಡೇಶ್ವಾಲ್ಯ ನೀರೆತ್ತುವ ಸ್ಥಾವರ ದಲ್ಲಿ ಟೇಪ್ ಕತ್ತರಿಸಿ, ಪಂಪ್ ಚಾಲನೆ ಹಾಗೂ ನಾಮಫಲಕ ಅನಾವರಣ ಮಾಡುವ ಮೂಲಕ ಉದ್ಘಾಟಿಸಿದರು.
ಸುಮಾರು 19.18 ಕೋಟಿ ರೂ. ವೆಚ್ಚದಲ್ಲಿ ಪೂರ್ಣ ಗೊಂಡಿರುವ ಯೋಜನೆಯ ಪ್ರಯೋಜನ ಜನಸಾಮಾನ್ಯ ರಿಗೆ ಸಿಗುವಂತಾಗಬೇಕು. ಯೋಜನೆಯನ್ನು ಇನ್ನಷ್ಟು ವಿಸ್ತರಿಸಿ ಆಸುಪಾಸಿನಿ ಜನರಿಗೂ ಪೂರೈಸಲು ಸಾಧ್ಯ. ಗ್ರಾಮೀಣ ಅಭಿವೃದ್ಧಿ ಯೋಜನೆ ಪೂರ್ಣಗೊಳಿಸಿ ಬಡ ವರ ಪರವಾಗಿ ಸರಕಾರ ಕೆಲಸ ಮಾಡುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸದಸ್ಯೆಯರಾದ ಮಂಜುಳಾ ಮಾಧವ ಮಾವೆ, ಕಮಲಾಕ್ಷಿ ಕೆ. ಪೂಜಾರಿ, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್ ಅಲಿ, ಸದಸ್ಯೆಯರಾದ ಗೀತಾ ಚಂದ್ರಶೇಖರ್, ಮಂಜುಳಾ ಕುಶಲ ಎಂ., ಲಕ್ಷ್ಮೀ ಗೋಪಾಲ ಆಚಾರ್ಯ, ಕಡೇಶ್ವಾಲ್ಯ ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲಾ ಶೆಟ್ಟಿ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾ, ಮಾಣಿ ಗ್ರಾ.ಪಂ. ಅಧ್ಯಕ್ಷೆ ಮಮತಾ ಎಸ್. ಶೆಟ್ಟಿ, ಅನಂತಾಡಿ ಗ್ರಾ.ಪಂ. ಅಧ್ಯಕ್ಷ ಸನತ್ ಕುಮಾರ್ ರೈ, ನೆಟ್ಲಮುಟ್ನೂರು ಗ್ರಾ.ಪಂ. ಅಧ್ಯಕ್ಷೆ ವಿಜಯಾ, ಬರಿಮಾರು ಗ್ರಾ.ಪಂ. ಅಧ್ಯಕ್ಷ ವಸಂತ ಪೂಜಾರಿ, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ ಪ್ರಮುಖರಾದ ಕೆ. ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿ.ಕೆ.ಭಟ್, ಪುಷ್ಪರಾಜ ಚೌಟ, ಗಣೇಶ್ ರೈ ಮಾಣಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.
ತಹಶೀಲ್ದಾರ್ ರಶ್ಮಿ ಎಸ್.ಆರ್., ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾ.ನಿ. ಎಂಜಿನಿಯರ್ ಜಿ. ನರೇಂದ್ರ ಬಾಬು, ಬಂಟ್ವಾಳ ಉಪವಿಭಾಗದ ಕಾ.ನಿ. ಎಂಜಿನಿಯರ್ ಮಹೇಶ್, ಕಿರಿಯ ಎಂಜಿನಿಯರ್ ಕೃಷ್ಣ ಮಾನಪ್ಪ, ರವಿಚಂದ್ರ ಎ., ನಾಗೇಶ್, ಜಗದೀಶಚಂದ್ರ ನಿಂಬಾಳ್ಕರ್, ಪದ್ಮರಾಜ್ ಎನ್. ಗೌಡ, ಗುತ್ತಿಗೆದಾರ ಅನಿಲ್ ಶೆಟ್ಟಿ ಉಪಸ್ಥಿತರಿದ್ದರು.
ನೀರಿನ ಸಮಸ್ಯೆ ನೀಗಿದೆ
ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಯೋಜನೆಯ ಮಾಹಿತಿ ನೀಡಿ, 6 ಗ್ರಾಮಗಳ 25 ಸಾವಿರಕ್ಕೂ ಹೆಚ್ಚು ಮಂದಿಗೆ, 51 ಜನವಸತಿ ಕೇಂದ್ರಗಳಿಗೆ ನೀರು ಸರಬರಾಜು ಆಗಲಿದೆ. ಯೋಜನೆಗೆ ಆರಂಭದಲ್ಲಿ 16 ಕೋ. ರೂ.ಅನುದಾನ ಮಂಜೂರಾಗಿದ್ದು , ಪ್ರಗತಿ ಹಂತದಲ್ಲಿ ಹೆಚ್ಚುವರಿ 2 ಕೋ. ರೂ. ಅನು ದಾನ ನೀಡಲಾಗಿದೆ. ನದಿ ಸ್ಥಾವರದಿಂದ ಹರಿದು ಬರುವ ನೀರು ಪೆರಾಜೆ ಗ್ರಾಮದ ಗಡಿಯಾರ ಸನಿಹದ ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧಗೊಂಡ ಬಳಿಕ ಜನರಿಗೆ ತಲುಪುವುದು. ಇದರಿಂದ ಈ ಪ್ರದೇಶದ ದೊಡ್ಡ ಸಂಖ್ಯೆಯ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿದಂತಾಗಿದೆ ಎಂದು ತಿಳಿಸಿದರು.