Advertisement
ಕವಿ, ಸಾಹಿತಿ, ಕಾದಂಬರಿಕಾರರು ಜಾತಿ, ಮತ, ಧರ್ಮ, ಸಮುದಾಯ ಮೀರಿದವರು. ಅವರಿಗೆ ಯಾವುದೇ ಗಡಿಯ ಎಲ್ಲೆ ಇಲ್ಲ. ಈಚೆಗೆ ಪ್ರಸಿದ್ಧ ಸಾಹಿತಿಯೊಬ್ಬರನ್ನು ನಮ್ಮ ಸಮುದಾಯದವರು ಎಂಬು ಬಹು ದೊಡ್ಡದಾಗಿ ಬಿಂಬಿಸುವ ಪ್ರಯತ್ನ ನಡೆಯಿತು. ತಾತ್ವಿಕತೆಯ ಕತೃìಗಳನ್ನು ಜಾತಿ,ಸಮುದಾಯ, ಧರ್ಮಕ್ಕೆ ಸೀಮಿತಗೊಳಿಸುವ ಕ್ರಿಯೆ ಸರಿಯಲ್ಲ. ಸಾಮಾಜಿಕ ಸ್ಥಿತಿಗತಿ, ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುವ ಕವಿ, ಸಾಹಿತಿ ತಾವು ಹುಟ್ಟಿ ಬಂದ ಜಾತಿಗೆ ಜವಾಬ್ದಾರಲ್ಲ. ಯಾರೂ ಸಹ ಇದೇ ಜಾತಿ, ಧರ್ಮ, ಸಮುದಾಯದಲ್ಲಿ ಜನಿಸಬೇಕು ಎಂದು ಅರ್ಜಿ ಹಾಕಿರುವುದಿಲ್ಲ ಎಂದರು.
ಬೆಂಬಲಿಸುವ ಪ್ರತೀಕ ಎಂದು ತಿಳಿಸಿದರು. ಪ್ರಾಸ್ತಾವಿಕ ನುಡಿಗಳಾಡಿದ ಸನಾವುಲ್ಲಾ ನವಿಲೇಹಾಳ್, ಸಂತೆಬೆನ್ನೂರು ಫೈಜಟ್ರಾಜ್ ಬದುಕಿನ ಅನುಭವವನ್ನು ಕವಿತೆ, ಕಥೆಗಳ ಮೂಲಕ ಅಚ್ಚುಕಟ್ಟಾಗಿ ಕಟ್ಟಿಕೊಡುತ್ತಿದ್ದಾರೆ. “ನಾವಾಗುವುದು ಒಲವಂತೆ’ ಎನ್ನುವ ಮೂಲಕ ಒಲಿವಿನ ಪರಿಚಯ ಮಾಡಿಕೊಟ್ಟಿದ್ದಾರೆ. “ಕೇಳದೆ ನಿಮಗಾಗಿ’ ಕವನ ಸಂಕಲನಕ್ಕೆ ರಾಜ್ಯ ಮಟ್ಟದ ಮುಸ್ಲಿಂ ಸಾಹಿತ್ಯ ಪರಿಷತ್ತಿನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
Related Articles
Advertisement
ಪ್ರೀತಿಯೆಂಬುದು ಬದುಕಿನ ಆಕ್ಸಿಜನ್ಇತ್ತೀಚಿನ ದಿನಗಳಲ್ಲಿ ವೇದಿಕೆ ಮತ್ತು ಆಪ್ತತೆ ಕಳೆದು ಹೋಗುತ್ತಿದೆ. ಆತ್ಮರತಿ, ಗುಂಪುಗಾರಿಕೆಯ ವಾತಾವರಣದ ನಡುವೆ ಆಪ್ತತೆಯ ವಲಯ ಸ್ಥಾಪನೆ ಮಾಡಕೊಳ್ಳಬೇಕಾಗಿದೆ. ಮನುಷ್ಯರಾಗಿ ಬಾಳಲು, ಬದುಕಲು ಪ್ರೀತಿ ಅಗತ್ಯ. ಪ್ರತಿಯೊಬ್ಬರ ಬದುಕಿನಲ್ಲಿ ಪ್ರೀತಿ, ಆಪ್ಯಾಯತೆ ಬೇಕೇ ಬೇಕು. ಪ್ರೀತಿ ಎಂಬುದು ಜೀವನದ ಆಮ್ಲಜನಕ. ಆದರೆ ಅದೇ ಪ್ರೀತಿಯನ್ನು ಮಡಿವಂತಿಕೆ ನೆಪದಲ್ಲಿ ಸಾಮಾಜಿಕವಾಗಿ ನಿಷೇಧಿ ತ ಕ್ರಿಯೆ ಎಂದು ಬ್ರ್ಯಾಂಡ್ ಮಾಡಲಾಗುತ್ತಿದೆ ಎಂದು ಸಾಹಿತಿ ಮಲ್ಲಿಕಾರ್ಜುನ ತೂಲಹಳ್ಳಿ ವಿಷಾದಿಸಿದರು.