Advertisement

ಮೊಬೈಲ್‌ ಯುಗದಲ್ಲಿ ಸಾಹಿತ್ಯ ಅಭಿರುಚಿ ಮರೆಯಾಗದಿರಲಿ

09:41 PM Jan 07, 2020 | mahesh |

ಇಂದಿನ ಶೆಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಬೆಳೆಸುವುದು ಕಷ್ಟವಾಗಿದೆ. ಜಾಗತೀಕರಣವಾಗಿ ಹೆಮ್ಮರವಾಗಿ ಬೆಳೆಯುತ್ತಿರುವ ಈ ಇಂಟರ್ನೆಟ್‌ ಯುಗದಲ್ಲಿ ಸಾಹಿತ್ಯ ಕಲಿಕೆ ಕ್ಷಿಣಿಸುತ್ತಿದ್ದು, ನಿರಂತರ ಕಲಿಕಾಭ್ಯಾಸ ಮರೆಯಾಗುತ್ತಿದೆ. ಇಂದಿನ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವುದು ಅವಶ್ಯವಾಗಿದ್ದು, ಸಾಹಿತ್ಯ ಓದು ಶಿಕ್ಷಣಕ್ಕೆ ಪೂರಕ ಎಂಬುದನ್ನು ಮನಗಾಣಿಸಬೇಕಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕವಾಗಿ ಸಾಹಿತ್ಯವನ್ನು ಅಳವಡಿಸಿರುವುದರಿಂದ ಆಗುವ ಉಪಯುಕ್ತತತೆಗಳನ್ನು ಇಲ್ಲಿ ನೀಡಲಾಗಿದೆ.

Advertisement

ಬೌದ್ಧಿಕ ಶಕ್ತಿ ವೃದ್ಧಿ
ಇಂದಿನ ವಿದ್ಯಾರ್ಥಿಗಳಲ್ಲಿ ಚಿಂತನಾಶಕ್ತಿ ಕಡಿಮೆಯಾಗುತ್ತಿದ್ದು, ಕ್ರಿಯಾಶೀಲತೆ ಕುಂದುತ್ತಿದೆ. ಅದಕ್ಕೆ ಮುಖ್ಯ ಕಾರಣ ಓದುವಿನ ಕೊರತೆ. ಸಾಹಿತ್ಯ ಓದುವಿನ ಅಭಿರುಚಿಯಿಂದ ವಿದ್ಯಾರ್ಥಿಗಳ ಬೌದ್ಧಿಕ ಚಿಂತನ ಮಟ್ಟ ಹೆಚ್ಚಲಿದ್ದು, ನಾನಾ ಆಯಾಮಗಳಲ್ಲಿ ವಿಷಯವಸ್ತುಗಳನ್ನು ಅವಲೋಕಿಸುವ ಚಾಣಕ್ಷತನವು ಇದರಿಂದ ವೃದ್ಧಿಯಾಗುತ್ತದೆ.

ಸೃಜನಶೀಲತೆ ಹೆಚ್ಚುತ್ತದೆ
ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೃಜನಶೀಲತೆ ಪ್ರಮುಖ ಭಾಗವಾಗಿದ್ದು, ಶೈಕ್ಷಣಿಕವಾಗಿ ಯಶಸ್ಸು ಕಾಣಲು ಈ ಕೌಶಲ ಅಗತ್ಯವಾಗಿದೆ. ಸಾಹಿತ್ಯಾಧಾರಿತ ಪುಸ್ತಕಗಳನ್ನು ಓದುವುದರಿಂದ ವಿದ್ಯಾರ್ಥಿಗಳಲ್ಲಿ ಸೃಜನಶಕ್ತಿ ಹೆಚ್ಚಲಿದ್ದು, ಯೋಚನಾ ಲಹರಿಯೂ ವೃದ್ಧಿಸುತ್ತದೆ.

ಭಾಷೆಯ ಮೇಲೆ ಹಿಡಿತ
ಹೆಚ್ಚೆಚ್ಚು ಸಾಹಿತ್ಯ ಆಧರಿತ ಪುಸ್ತಕಗಳನ್ನು ಓದುವುದರಿಂದ ಭಾಷೆಯ ಮೇಲೆ ಹಿಡಿತ ಸಾಧಿಸಬಹುದಾಗಿದ್ದು, ಬರವಣಿಗೆಯ ಜ್ಞಾನವನ್ನು ಪಡೆದುಕೊಳ್ಳಬಹುದು. ಜತೆಗೆ ವಿದ್ಯಾರ್ಥಿಯಾಗಿದ್ದಾಗಲೇ ಕಥೆ, ಕಾದಂಬರಿ, ಕವನ ಸಂಕಲನಗಳನ್ನು ಓದುವ ಮತ್ತು ಬರೆಯುವ ಹವ್ಯಾಸ ರೂಢಿಸಿಕೊಂಡರೆ ಶೈಕ್ಷಣಿಕ ಮುಂದಿನ ವಿದ್ಯಾಭ್ಯಾಸಕ್ಕೂ ಸಹಾಯವಾಗಲಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈಯುವುದಕ್ಕೆ ಈ ಹವ್ಯಾಸ ನಿಮ್ಮನ್ನು ಪ್ರೇರೆಪಿಸುತ್ತದೆ.

ಸ್ಪರ್ಧಾತ್ಮಾಕ ಪರೀಕ್ಷೆಗಳಿಗೂ ಸಾಹಿತ್ಯ ಬೇಕು
ದೇಶದ ಉನ್ನತ ಹುದ್ದೆ ಎಂದು ಉತ್ಪ್ರೇಕ್ಷಿಸುವ ಐಎಸ್‌ಎಸ್‌, ಕೆಎಸ್‌ಎಸ್‌ ಎಂಬಿತ್ಯಾದಿ ಪರೀಕ್ಷೆಗಳಲ್ಲೂ ಸಾಹಿತ್ಯ ಕುರಿತಾದ ಅಧ್ಯಯನವಿದ್ದು, ಇಂದಿನಿಂದಲ್ಲೇ ಸಾಹಿತ್ಯವನ್ನು ಓದುವ ಅಭ್ಯಾಸ ರೂಢಿಸಿಕೊಂಡರೆ ಮುಂದಿನ ದಿನಗಳಲ್ಲಿ ಉಪಯುಕ್ತ ವಾಗಲಿದೆ. ಜತೆಗೆ ಸ್ಪರ್ಧಾತ್ಮಾಕ ಪರೀಕ್ಷೆಗಳಲ್ಲಿ ಸಾಹಿತ್ಯಕ್ಕೆ ಸಂಬಂಧ ಪ್ರಶ್ನೆಗಳನ್ನು ಸುಲಭವಾಗಿ ಎದುರಿಸಬಹುದಾಗಿದೆ.

Advertisement

ಮಾನಸಿಕ ನೆಮ್ಮದಿ ಪಡೆಯಲು ಸಾದ್ಯ
ಓದು ಜೀವನಕ್ಕೆ ಬಹಳ ಮುಖ್ಯ. ಅದರಲ್ಲೂ ಸಾಹಿತ್ಯದ ಓದು ಮನಸ್ಸಿಗೆ ಹಿತವನ್ನು ನೀಡವುದರೊಂದಿಗೆ ಆಹ್ಲಾದಕಾರ ಮನೋಭಾವವನ್ನು ಹೊಂದಲು ನೆರವು ನೀಡುತ್ತದೆ. ಜತೆಗೆ ಬದುಕಿನ ನಾನಾ ಜಂಜಾಟಗಳಿಂದ ಬೆಸತ್ತಾಗ ಪುಸ್ತಕದ ಹಾಳೆಗಳನ್ನು ಒಮ್ಮೆ ತಿರುವಿ ಹಾಕಿದ್ದರೆ ಸಾಕು ನಮ್ಮನ್ನು ಕಾಡುತ್ತಿದ್ದ ಚಿಂತೆಗಳು ಮಾಯವಾಗಿ ಮಾನಸಿಕ ನೆಮ್ಮದಿ ಸಿಗುತ್ತದೆ. ಅಂತಹ ಮಾಂತ್ರಿಕತೆ ಸಾಹಿತ್ಯಕ್ಕಿದ್ದು, ನಮ್ಮ ಆಲೋಚನಾ ಕ್ರಮವನ್ನು ಬಲಗೊಳಿಸುತ್ತದೆ.

ಇತಿಹಾಸವನ್ನು ತಿಳಿಸುತ್ತದೆ
ಸಾಹಿತ್ಯ ಕ್ಷೇತ್ರದ ವ್ಯಾಪ್ತಿ ವಿಶಾಲವಾದುದು. ಏಕತೆಯಲ್ಲಿ ವಿವಿಧತೆಯನ್ನು ಪ್ರತಿಬಿಂಬಿಸುವ ಈ ಕ್ಷೇತ್ರ ಪ್ರಬಂಧ, ಕಥೆ, ಕಾದಂಬರಿ, ಹನಿಗವನ, ಹಾಸ್ಯ ಕಥೆ ಹೀಗೆ ಹಲವು ವೈವಿಧ್ಯತೆಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡಿದೆ. ಜತೆಗೆ ಸಾಹಿತ್ಯ ಪುಸ್ತಕಗಳಲ್ಲಿ ಗತಕಾಲದ ಘಟನೆಗಳನ್ನು, ಚರಿತ್ರೆಗಳನ್ನು ಉಲ್ಲೇಖ ಮಾಡಿದ್ದು, ನಮ್ಮ ದೇಶದ ಇತಿಹಾಸವನ್ನು ತಿಳಿಯಲು ಇದು ಸಹಾಯ ಮಾಡುತ್ತದೆ.

- ಸುಶ್ಮಿತಾ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next