Advertisement

ಪೌರಾಣಿಕ ಪಾತ್ರಗಳು ಮಾದರಿಯಾಗಲಿ

12:23 PM Sep 17, 2018 | |

ಬೆಂಗಳೂರು: ಸಾಧನಾ ಮಾರ್ಗದಲ್ಲಿ ಇರುವವರಿಗೆ ಭಾರತೀಯ ಮಹಾಕಾವ್ಯದ ಮೇರು ವ್ಯಕ್ತಿತ್ವಗಳು ಮಾದರಿ ಆಗಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

Advertisement

ಕತ್ತರಿಗುಪ್ಪೆಯ ಪೂರ್ಣಪ್ರಜ್ಞ ಧ್ಯಾನಪೀಠದ ಸಭಾಂಗಣದಲ್ಲಿ ಮಾಧ್ವ ಯುವ ಪ್ರತಿಷ್ಠಾನ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ರಾಮಾಯಣ- ಮಹಾಭಾರತ ಕಾಲದಲ್ಲಿ ರಾಜನೀತಿ, ಪ್ರಜಾನೀತಿ ಸರ್ವಜನಪ್ರಿಯವಾಗಿತ್ತು. ಆದರೆ, ಇಂದು ಸಾಂಸ್ಕೃತಿಕ, ಧಾರ್ಮಿಕ ವಲಯಗಳಿಗೆ ರಾಜಾಶ್ರಯ ಅತಿ ಕಡಿಮೆಯಾಗಿದೆ. ಇಂಥ ಸಂದರ್ಭದಲ್ಲಿ ನಮ್ಮ ಸಮಾಜದ ಸಾಧಕರನ್ನು ಗುರುತಿಸುವುದು, ಗೌರವಿಸುವುದು ನಮ್ಮ ಹೆಮ್ಮೆಯಾಗಬೇಕು ಎಂದು ಹೇಳಿದರು.

ಈ ನಿಟ್ಟಿನಲ್ಲಿ ಮಾಧ್ವ ಯುವ ಪ್ರತಿಷ್ಠಾನ ನಮ್ಮ ಸಂಸ್ಕೃತಿ ಪಾಲನೆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ ಎಂದು ಶ್ಲಾ ಸಿದರು. ಜತೆಗೆ,ಯುವ ಸಮುದಾಯದ ಜಿಜ್ಞಾಸೆಯನ್ನು ಆನ್‌ ಲೈನ್‌ ಮೂಲಕ ಪರಿಹರಿಸಿ ಧರ್ಮ-ಸಂಸ್ಕೃತಿ ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತಿರುವುದು ಮಾದರಿ ಕಾರ್ಯ ಎಂದರು.

ಕಾರ್ಯಕ್ರಮದಲ್ಲಿ ವಿದ್ವಾಂಸ ಕೇಶವಾಚಾರ್ಯ, ಪತ್ರಕರ್ತ ಎ.ಆರ್‌ ರಘುರಾಮ್‌, ಸಮೀರ ರಾವ್‌ ಮೂಗೂರು, ಕದ್ರಿ ಶ್ರೀ ಕೃಷ್ಣ, ಧಾರ್ಮಿಕ  ಗ್ರಂಥ ಪ್ರಕಾಶಕ ವಿಜಯ ವಿಕ್ರಮ ದಾಸ,  ಮಹಿಳಾ ಸಂಘಟಕಿ ಪದ್ಮಜಾ ಅವರಿಗೆ ಮಾಧ್ವ ಯುವ ಪ್ರತಿಷ್ಠಾನದಿಂದ “ಮಾಧ್ವರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು, ಪ್ರತಿಷ್ಠಾನದ ಅಧ್ಯಕ್ಷ ಅರವಿಂದ ಮದಭಾವಿ, ಮುಖ್ಯ ಸಂಚಾಲಕ ಬಿಂದು ಮಾಧವಾಚಾರ್ಯ ಕೆರೂರು ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next