Advertisement

ಕೆರೆ ಪುನರುಜ್ಜೀವನ ಸಂಕಲ್ಪವಾಗಲಿ

12:07 PM Jul 02, 2018 | |

ಬೆಂಗಳೂರು: ಕೆರೆಗಳ ಪುನರುಜ್ಜೀವನ ಈ ಶತಮಾನದ ಸಂಕಲ್ಪವಾಗಬೇಕು ಎಂದು ಕೇಂದ್ರದ ರಾಸಾಯನಿಕ ಮತ್ತು
ರಸಗೊಬ್ಬರ ಸಚಿವ ಅನಂತಕುಮಾರ್‌ ಹೇಳಿದ್ದಾರೆ.

Advertisement

ಅದಮ್ಯ ಚೇತನ ಸಂಸ್ಥೆಯಿಂದ ಭಾನುವಾರ ಕೆಂಪಾಂಬುಧಿ ಕೆರೆ ಆವರಣದಲ್ಲಿ ಹಮ್ಮಿಕೊಂಡಿದ್ದ 131ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಬೆಂಗಳೂರಿನಲ್ಲಿದ್ದ ಕೆರೆಗಳನ್ನು ಗಮನಿಸಿದಾಗ ಬೇಸರವಾಗುತ್ತಿತ್ತು.

ಈಗ ಅವುಗಳ ಪುನರುಜ್ಜೀವನಕ್ಕೆ ಆಡಳಿತ ಯಂತ್ರದೊಂದಿಗೆ ವಿವಿಧ ಸಂಸ್ಥೆಗಳು ಶ್ರಮಿಸುತ್ತಿರುವುದನ್ನು ಗಮನಿಸಿದರೆ ಸಂತಸವಾಗುತ್ತದೆ. ಕೆರೆಗಳ ಪುನರುಜ್ಜೀವನ ಈ ಶತಮಾನದ ಸಂಕಲ್ಪವಾಗಬೇಕು ಎಂದು ಹೇಳಿದರು.

ಕಳೆದ ಒಂದು ಶತಮಾನದಿಂದ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದೇ ಸಾಧನೆ ಎನಿಸಿದೆ. ನಗರದಲ್ಲಿರುವ
ಕೆರೆಗಳ ಒತ್ತುವರಿ ತೆರವು ಮಾಡಿ, ಮತ್ತೆ ಅವುಗಳ ಗತವೈಭವ ಮರುಕಳುಹಿಸುವಂತೆ ಮಾಡುವುದು ಈ ಶತಮಾನದ ಸಾಧನೆ ಮತ್ತು ಗುರಿಯಾಗಬೇಕು. ಈ ನಿಟ್ಟಿನಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ಶಾಸಕ ಉದಯ ಗರುಡಾಚಾರ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕ ರವಿ ಸುಬ್ರಹ್ಮಣ್ಯ, ಅದಮ್ಯ
ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್‌, ಪರಿಸರ ತಜ್ಞ ಆ.ನ.ಯಲ್ಲಪ್ಪ ರೆಡ್ಡಿ, ನಟಿ ಶ್ರುತಿ ಮತ್ತಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next