Advertisement

ರಾಜರು ತೆರೆದ ಸಂಸ್ಥೆಗಳು ಮತ್ತಷ್ಟು ಬೆಳೆಯಲಿ

09:11 PM Oct 30, 2019 | Lakshmi GovindaRaju |

ಮೈಸೂರು: ಜನ ಸಾಮಾನ್ಯರ ಒಳಿತಿಗಾಗಿಯೇ ಮೈಸೂರು ಸಂಸ್ಥಾನ ಯೋಜನೆಗಳನ್ನು ಜಾರಿ ತರುತ್ತಿತ್ತು. ಇದರಿಂದ ಮೈಸೂರು ಸಂಸ್ಥಾನ ಮಾದರಿ ಸಂಸ್ಥಾನ ಆಗಿತ್ತು. ನಮ್ಮ ಪೂರ್ವಜರಿಗೆ ಗೌರವ ನೀಡಬೇಕಾದರೆ ಅವರ ನೀಡಿರುವ ಕೊಡುಗೆ ರೂಪದ ಸಂಸ್ಥೆಗಳನ್ನು ಉಳಿಸಿಕೊಳ್ಳಬೇಕಿದೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು.

Advertisement

ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರ್‌ ಪೆನ್ಷನರ್ ಕಮ್ಯುನ್‌ನ ರಜತ ಮಹೋತ್ಸವದಲ್ಲಿ ಅವರು ಮಾತನಾಡಿದರು. 25 ವರ್ಷಗಳ ಕಾಲ ಯಾವುದೇ ಸಂಸ್ಥೆಯನ್ನು ಉಳಿಸಿ, ಬೆಳೆಸುವುದು ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ನಿವೃತ್ತರ ಸಂಸ್ಥೆ 25 ವರ್ಷ ಪೂರೈಸಿರುವುದು ಸಂತಸದ ಸಂಗತಿ. ಯಾವುದೇ ಸಂಸ್ಥೆ ಕಟ್ಟಿದವರನ್ನು ಸ್ಮರಿಸುವುದು ಆದ್ಯ ಕರ್ತವ್ಯ ಎಂದರು.

ಮಾದರಿ ಸಂಸ್ಥಾನ: ಮೈಸೂರಿನಲ್ಲಿ 100 ವರ್ಷ ಪೂರೈಸಿದ,ಅದಕ್ಕಿಂತ ಹೆಚ್ಚು ವರ್ಷ ತುಂಬಿರುವ ಅನೇಕ ಸಂಸ್ಥೆಗಳಿವೆ. ಎಸ್‌ಬಿಎಂ, ಮೈಸೂರು ವಿಶ್ವವಿದ್ಯಾಲಯ, ಭಾರತೀಯ ವಿಜ್ಞಾನ ಸಂಸ್ಥೆ, ಮೈಸೂರು ಸಿಲ್ಕ್ ಕಾರ್ಖಾನೆ, ಮೈಸೂರು ಸೋಪು ಕಾರ್ಖಾನೆ, ಕೃಷ್ಣರಾಜಸಾಗರ ಹೀಗೆ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿ ಜನ ಹಿತ ಕಾಪಾಡಲಾಗಿದೆ. ಸಾರ್ವಜನಿಕರ ಹಿತಕಾಯುವ ರೀತಿಯಲ್ಲಿ ಯೋಜನೆ ಜಾರಿಗೊಳಿಸಿ ಮತ್ತೆ ಮಾದರಿ ಮೈಸೂರು ಸಂಸ್ಥಾನ ಜಾರಿಗೊಳಿಸಬೇಕು ಎಂದು ಹೇಳಿದರು.

ನಂ.1 ಗುರಿ: ಎಸ್‌ಬಿಐನ ಉಪ ಪ್ರಧಾನ ವ್ಯವಸ್ಥಾಪಕ ಎಂ.ಅರುಣಗಿರಿ ಮಾತನಾಡಿ, ಭಾರತೀಯ ಸ್ಟೇಟ್‌ ಬ್ಯಾಂಕನ್ನು ಜಾಗತಿಕ ಮಟ್ಟದಲ್ಲಿ ನಂಬರ್‌ ಒನ್‌ ಪಟ್ಟಿಯಲ್ಲಿ ತರಬೇಕೆಂಬ ಪ್ರಯತ್ನ ನಡೆಯುತ್ತಿದೆ ಎಂದು ಹೇಳೀದರು.

ಸಲಹೆ, ಮಾರ್ಗದರ್ಶನ: ಬ್ಯಾಂಕ್‌ನಿಂದ ನಿವೃತ್ತಿಯಾದ ಅಧಿಕಾರಿಗಳು ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ನಿಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ಸರಿದಾರಿಯಲ್ಲಿ ನಡೆಸುತ್ತಿದ್ದೀರಿ, ನಿಮ್ಮ ಸಲಹೆ ಮಾರ್ಗದರ್ಶನ ಹೀಗೆ ಮುಂದುವರಿಯಲಿ ಎಂದು ಮನವಿ ಮಾಡಿದರು.

Advertisement

ಎಸ್‌ಬಿಐ ಆ್ಯಪ್‌: ಆನ್‌ಲೈನ್‌ ಬ್ಯಾಂಕಿಂಗ್‌ ಮತ್ತು ಆನ್‌ಲೈನ್‌ ಹಣಕಾಸು ವ್ಯವಹಾರಕ್ಕೆ ಎಸ್‌ಬಿಐ ಯೊನೊ ಎಂಬ ಆ್ಯಪ್‌ ಬಿಡುಗಡೆಗೊಳಿಸಿದೆ. ಇದನ್ನು ಡೌನ್‌ಲೋಡ್‌ ಮಾಡಿಕೊಂಡು ಇದರ ಸದುಪಯೋಗಪಡೆದುಕೊಳ್ಳಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ಟೇಟ್‌ ಬ್ಯಾಂಕ್‌ ನಿವೃತ್ತರ ಸಂಘದ ಅಧ್ಯಕ್ಷ ಡಾ.ಎ.ಅನಂತಕೃಷ್ಣರಾವ್‌, ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಪೆನÒನರ್ ಕಮ್ಯುನ್‌ ಅಧ್ಯಕ್ಷ ಕಾ.ನಾ.ಶ್ರೀನಿವಾಸ ರಾವ್‌ ಮತ್ತಿತರರು ಉಪಸ್ಥಿತರಿದ್ದರು.

20 ಲಕ್ಷ ರೂ.ನಿಂದ ಎಸ್‌ಬಿಎಂ ಆರಂಭ: ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಮತ್ತು ಸರ್‌ ಎಂ.ವಿಶ್ವೇಶ್ವರಯ್ಯ ಪ್ರಯತ್ನ ಫ‌ಲವಾಗಿ ಎಸ್‌ಬಿಎಂ-ಎಸ್‌ಬಿಐ ರೂಪುಗೊಂಡಿತು. 20 ಲಕ್ಷ ರೂ.ನಿಂದ ಆರಂಭವಾದ ಬ್ಯಾಂಕಿನ ವ್ಯವಹಾರ ಇಂದು ಲಕ್ಷಾಂತರ ಕೋಟಿ ರೂ. ವ್ಯವಹಾರ ನಡೆಸುತ್ತಿದೆ. ಇತ್ತೀಚಿಗೆ ಎಸ್‌ಬಿಎಂ ಅನ್ನು ಎಸ್‌ಬಿಐನೊಂದಿಗೆ ವಿಲೀನಕರಣಗೊಳಿಸಲಾಯಿತು.

ಮೈಸೂರಿನಲ್ಲಿ 108 ಎಸ್‌ಬಿಎಂಗಳನ್ನು ವಿಲೀನಗೊಳಿಸಲಾಗಿದೆ. ದೇಶಾದ್ಯಂತ‌ ಈ ಪ್ರಕ್ರಿಯೆಯಿಂದ ದೊಡ್ಡಮಟ್ಟದಲ್ಲಿ ಹಣಕಾಸು ವ್ಯವಹಾರ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಟಾಪ್‌ ವಿಶ್ವ ಬ್ಯಾಂಕ್‌ಗಳ ಪೈಕಿ ಎಸ್‌ಬಿಐ 15 ಸ್ಥಾನದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಟಾಪ್‌ ಟೆನ್‌ನೊಳಗೆ ಎಸ್‌ಬಿಐ ಅನ್ನು ತರಬೇಕೆಂದು ಪ್ರಯತ್ನಿಸಲಾಗುತ್ತಿದೆ ಎಂದು ಎಸ್‌ಬಿಐನ ಉಪ ಪ್ರಧಾನ ವ್ಯವಸ್ಥಾಪಕ ಎಂ.ಅರುಣಗಿರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next