ಹೊಸದಿಲ್ಲಿ: ಜಂಟಿ ಖಾತೆ ಮತ್ತು ಗಂಡನ ಎಟಿಎಂ ಕಾರ್ಡ್ ಬಳಕೆಗೆ ಅವಕಾಶ ಕೊಡುವ ಮೂಲಕ ಗೃಹಿಣಿ ಯರನ್ನು ಆರ್ಥಿಕವಾಗಿ ಸಶಕ್ತಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯ ವ್ಯಕ್ತಪಡಿಸಿದೆ.
ಪುರುಷರು ತಮ್ಮ ಪತ್ನಿಯರಿಗೆ ಆರ್ಥಿಕ ಬೆಂಬಲವನ್ನು ನೀಡಬೇಕು.ಇದಕ್ಕಾಗಿ ಜಂಟಿ ಖಾತೆಗಳನ್ನು ತೆರೆಯಬೇಕು ಮತ್ತು ಎಟಿಎಂ ಕಾರ್ಡ್ ಬಳಸಲು ಅವಕಾಶ ಒದಗಿಸಿಕೊಡಬೇಕು ಎಂದು ನ್ಯಾ| ಬಿ.ವಿ.ನಾಗರತ್ನ ಮತ್ತು ನ್ಯಾ| ಅಗಸ್ಟೀನ್ ಜಾರ್ಜ್ ಮಸೀಹ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂ ಓದಿ:Dhananjaya: ಕೆಲವೊಂದನ್ನು ನಾವು ಒಂಟಿಯಾಗಿಯೇ ಫೈಟ್ ಮಾಡಬೇಕು.. ದರ್ಶನ್ ಬಗ್ಗೆ ಡಾಲಿ ಮಾತು
ಮುಸ್ಲಿಂ ಸಮುದಾಯದ ಮಹಿಳೆಗೆ ಜೀವನಾಂಶ ಪಡೆಯುವುದು ಹಕ್ಕು ಎಂದು ಮಹತ್ವದ ತೀರ್ಪು ನೀಡಿದ ಸಂದರ್ಭದಲ್ಲಿ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕುಟುಂಬಗಳಲ್ಲಿ ಗೃಹಿಣಿಯರು ತಮ್ಮದೇ ಆದ ಆದಾಯವನ್ನು ಹೊಂದಿಲ್ಲ.
ಹೀಗಾಗಿ ಅವರನ್ನು ಆರ್ಥಿಕವಾಗಿ ಸಶಕ್ತಗೊಳಿಸಲು ಪುರುಷರು ಯೋಚಿಸಬೇಕು. ಮನೆಯ ಖರ್ಚುಗಳನ್ನಷ್ಟೇ ನಿಭಾಯಿಸದೇ
ಗೃಹಿಣಿಯರ ಆರ್ಥಿಕ ಸ್ಥಿತಿಯನ್ನು ಸಹ ಸುಧಾರಿಸಬೇಕು ಎಂದು ಕೋರ್ಟ್ ಹೇಳಿದೆ. ಏಕೆಂದರೆ ಗೃಹಿಣಿಯರು ದಿನವಿಡೀ ಮನೆಗೆ ಮತ್ತು ಕುಟುಂಬಕ್ಕಾಗಿ ದುಡಿಯುತ್ತಾರೆ ಎಂದು ಪೀಠ ಹೇಳಿದೆ.