ವಿಜಯಪುರ: ನಾನಲ್ಲ, ನನ್ನಿಂದಲ್ಲ, ಎಲ್ಲವೂ ಪರಮಾತ್ಮನಿಂದ ಅಗಿರುವುದು. ನಾವೆಲ್ಲರೂ ಭಕ್ತಿ ಭಾವದಿಂದ ಸನ್ಮಾರ್ಗದಲ್ಲಿ ನಡೆಯುವ ಮೂಲಕ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು ಎಂದು ಮನಗೂಳಿಯ ಸೂಫಿ ಸಂತ ಡಾ| ಎಫ್.ಎಚ್. ಇನಾಮದಾರ ಅಭಿಪ್ರಾಯಪಟ್ಟರು.
ನಗರದ ಹೊರ ವಲಯದಲ್ಲಿರುವ ಸೇವಾಲಾಲ್ ತಾಂಡಾದಲ್ಲಿ ಮಾನವನ ನಡೆ ಸನ್ಮಾರ್ಗದಡೆ ಎಂಬ ಅಧ್ಯಾತ್ಮಿಕ ಚಿಂತನಾ ಗೋಷ್ಠಿಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ನಡೆಯಲು ಮುಖ್ಯ ಬೇಕಾದದ್ದು . ಪ್ರತಿ ಮನೆ ಮಂತ್ರಾಲಯ ಆಗಬೇಕಿದ್ದರೆ ಮೊದಲು ಮನಸ್ಸು ಮೃದುವಾಗಬೇಕು. ಅಗತ್ಯಕ್ಕಿಂತ ಹೆಚ್ಚಿನ ಹಣ ಗಳಿಸುವ ಹಾಗೂ ದುರ್ಮಾರ್ಗದಲ್ಲಿ ಸಂಪತ್ತು ಸಗ್ರಹಿಸಿ ಇಡುವ ಮನಸ್ಥಿತಿ ಬದಲಾಗಬೇಕಿದೆ ಎಂದರು.
ಹಣದ ಹಪಾಹಪಿತನ ಮಾನವನು ವಾಮಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತದೆ. ಹೀಗಾಗಿ ಸತ್ಸಂಗದಲ್ಲಿ ಭಾಗವಹಿಸಿ, ಸತ್ಯವಂತರ ಸಂಘದ ಸಹವಾಸ ಮಾಡಿದಲ್ಲಿ ಸನ್ಮಾರ್ಗ ದೊರೆಯುತ್ತದೆ. ಅಂಥ ಸಂದರ್ಭದಲ್ಲಿ ದೇವನೇ ಸತ್ಯದ ದಾರಿ ತೋರಿ ಸನ್ಮಾರ್ಗದಲ್ಲಿ ಕರೆದೊಯ್ಯುತ್ತಾನೆ ಎಂದು ಭಗವಂತ ನೀನೆ ಆಶ್ರಯ ತೋರಿ ಸನ್ಮಾರ್ಗದಲ್ಲಿ ನಡೆಸು ಎಂದು ಪರಮಾತ್ಮನನ್ನು ಪ್ರಾರ್ಥಿಸಿದಲ್ಲಿ ಸತ್ಯದ ಬದುಕು ನಿಮ್ಮದಾಗಲಿದೆಎಂದರು.
ಕಸಾಪ ವಿಜಯಪುರ ತಾಲೂಕಾಧ್ಯಕ್ಷ ಯು.ಎನ್. ಕುಂಟೋಜಿ ಮಾತನಾಡಿ, ಸರ್ವಧರ್ಮಗಳ ಸಂದೇಶ ಮಾನವ ಕಲ್ಯಾಣಕ್ಕಾಗಿವೆ. ನಮ್ಮ ನುಡಿ-ನಡೆ ಒಂದೇ ಆಗಿದ್ದಾಗ ಮಾತ್ರವೇ ನಮ್ಮತನಕ್ಕೆ ಬೆಲೆ ಬರುತ್ತದೆ. ಸಂಸ್ಕಾರ ಸದ್ವಿಚಾರಗಳಿಂದ ಪುಣ್ಯ ಪ್ರಾಪ್ತಿ ದೊರೆಯುತ್ತದೆ. ಸಂತರಿಗೆ ಪರಮಾತ್ಮನ ಹೊರೆತು ಯಾರ ಭಯ ಇರುವುದಿಲ್ಲ. ಅವರಿಗೆ ಇಹ ಪರದ ದುಃಖವು ಇರುವುದಿಲ್ಲ. ನಮ್ಮ ತಪ್ಪುಗಳನ್ನು ಮನ್ನಿಸಿ ಕತ್ತಲೆಯಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವವನು ಗುರು ಆಗಿದ್ದಾನೆ. ಮಕ್ಕಳಿಗೆ ಒಳ್ಳೆ ಸಂಸ್ಕಾರ ನೀತಿ ಮಾತುಗಳು ಸಂತರ ಮೌಲ್ವಿಕ ವಿಚಾರಗಳನ್ನು ಬಿತ್ತರಿಸಿದಾಗ ಸತøಜೆಗಳಾಗಿ ರೂಪುಗೊಳ್ಳುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಪೂಜಪ್ಪ ಪೂಜಾರಿ, ಕೃಷ್ಣಾ ರಾಠೊಡ, ಸೇವು ರಾಠೊಡ, ಎಂ.ಆರ್. ರಾಠೊಡ, ವಾಲು ರಾಠೊಡ, ಗಂಗಾರಾಮ ರಾಠೊಡ, ಚಂದು ರಾಠೊಡ, ಇಸಾಕ್ ಅಹ್ಮದ್ ದಖನಿ, ಪ್ರಿಯಾಂಕಾ ಆನಂದ ರಾಠೊಡ, ಸಲ್ಮಾ ಬಾಬಾಜಾನ ಖಾನ್ ಅವರನ್ನು ಸನ್ಮಾನಿಸಲಾಯಿತು. ಸಮಿವುಲ್ಲಾ, ಮೊಹಮ್ಮದ ರವೂಫ್ ಇನಾಮದಾರ ವೇದಿಕೆಯಲ್ಲಿದ್ದರು. ಎಂ.ಎ. ಲಿಂಗಸೂರ, ಡಾ| ಜಿ.ಶ್ರೀನಿವಾಸಲು, ಮೊಹಮ್ಮದ್ ಶಫೀ ಮಹಾಬರಿ, ಸದಾಕತ ಮುಲ್ಲಾ, ನಜೀರ ಬೀಳಗಿ, ಬಾಬಾಜಾನ ಖಾನ್, ಗುಲಾಬ ರಾಠೊಡ, ಸುರೇಶ, ಪಾಂಡು, ಮೇಘು ರಾಠೊಡ, ಆನಂದ ರಾಠೊಡ, ಡಾ| ಆಸೀಫ್ ಮೊಕಾಶಿ, ರಜಾಕ್ ಸೈಯದ್, ಸೋಮಶೇಖರ ಕುರ್ಲೆ, ಮಲ್ಲಯ್ಯಸ್ವಾಮಿ ಹಿರೇಮಠ, ಅರುಣ ವಿಭೂತೆ, ರಾಮ ಮಾತೋಳೆ ಇದ್ದರು.