Advertisement

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

01:49 AM Apr 27, 2024 | Team Udayavani |

ವಾಷಿಂಗ್ಟನ್‌: ಭಾರತದ ವೀಸಾ ಪರಿಸ್ಥಿತಿಯ ಬಗ್ಗೆ ಆ ದೇಶದ ಸರಕಾರವೇ ವಿವರಣೆ ನೀಡಲು ಸಾಧ್ಯ ಎಂದು ಅಮೆರಿಕ ಹೇಳಿದೆ. ಜತೆಗೆ ಮುಕ್ತ ಪತ್ರಿಕೋದ್ಯಮ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಪ್ರತಿಪಾದಿಸಿದೆ. ಆಸ್ಟ್ರೇಲಿಯನ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಶನ್‌ (ಎಬಿಸಿ)ಯ ದಕ್ಷಿಣ ಏಷ್ಯಾ ಬ್ಯೂರೋ ಮುಖ್ಯಸ್ಥೆ ಅವನಿ ಡಯಾಸ್‌ ಅವರಿಗೆ ಚುನಾವಣೆ ಬಗ್ಗೆ ವರದಿ ಮಾಡಲು ಭಾರತ ಸರಕಾರ ವೀಸಾ ವಿಸ್ತರಣೆಗೆ ನಿರಾಕರಿಸಿತ್ತು. “ತಮ್ಮ ವರದಿ ಯಿಂದ ಕ್ರುದ್ಧಗೊಂಡಿರುವ ಭಾರತ ಸರಕಾರ ವೀಸಾ ಅವಧಿ ವಿಸ್ತರಿಸಲು ಒಪ್ಪಿರಲಿಲ್ಲ. ಆಸ್ಟ್ರೇಲಿಯಾ ಸರಕಾರದ ಮಧ್ಯಪ್ರವೇಶದ ಬಳಿಕ 2 ತಿಂಗಳ ಕಾಲ ವೀಸಾ ವಿಸ್ತರಣೆ ಮಾಡಲಾಯಿತು’ ಎಂದು ಪತ್ರಕರ್ತೆ ಡಯಾಸ್‌ ಇತ್ತೀಚೆಗೆ ಹೇಳಿಕೊಂಡಿದ್ದರು.

Advertisement

ಭಾರತ ಮೂಲದವನ ಗುಂಡಿಕ್ಕಿ ಕೊಂದ ಅಮೆರಿಕ ಪೊಲೀಸರು!
ಅಮೆರಿಕದ ಸ್ಯಾನ್‌ ಆ್ಯಂಟನಿಯೋ ನಿವಾಸಿಯಾಗಿದ್ದ ಭಾರತದ ಉತ್ತರ ಪ್ರದೇಶ ಮೂಲದ ವ್ಯಕ್ತಿ ಸಚಿನ್‌ ಸಾಹೋ (42) ಎಂಬವರನ್ನು ಅಮೆರಿಕ ಪೊಲೀಸರು ಗುಂಡಿಟ್ಟು ಕೊಂದಿರುವುದು ವರದಿಯಾಗಿದೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಸಾಹೋನನ್ನು ಎ.21ರಂದು ಪೊಲೀಸರು ಬೆನ್ನಟ್ಟಿದ್ದು, ಆತನ ನಿವಾಸಕ್ಕೆ ತರಳಿ ಹುಡುಕಾಡಿದ್ದಾರೆ. ಈ ವೇಳೆ ಪೊಲೀಸರಿಂದ ಪರಾರಿಯಾಗುವ ಭರದಲ್ಲಿ ಸಾಹೋ ತನ್ನ ಫ್ಲ್ಯಾಟ್‌ನ ನಿವಾಸಿ ಮೇಲೆಯೇ ಕಾರು ಹರಿಸಿದ್ದಾನೆ. ಅಲ್ಲದೇ ಅಡ್ಡಗಟ್ಟಿದ ಪೊಲೀಸರಿಗೂ ಢಿಕ್ಕಿ ಹೊಡೆದಿದ್ದರಿಂದ ಮತ್ತೂಬ್ಬ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದ ಸಾಹೋ ಮೃತಪಟ್ಟಿದ್ದಾನೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next