ಮೂಡುಬಿದಿರೆ: ದೇಶಕ್ಕೆ ಅನ್ನಕೊಡುವ ರೈತ ಸಂಕಷ್ಟದಲ್ಲಿದ್ದಾನೆ. ಕೃಷಿಯುತ್ಪನ್ನಗಳಿಗೆ ಮಾರುಕಟ್ಟೆ ಇಲ್ಲ, ಹೀಗಾಗಿ ಆತ್ಮಹತ್ಯೆ ಪ್ರಕರಣಗಳು ನಿಂತಿಲ್ಲ. ರೈತರ ಕೃಷಿ ಉತ್ಪನ್ನಗಳಿಗೆ ಸರಕಾರ ವೈಜ್ಞಾನಿಕ ರೀತಿಯ ಬೆಲೆ ನಿಗದಿಪಡಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯದ ದಕ್ಷಿಣ ಪ್ರಾಂತ ಸಂಘಟನ ಕಾರ್ಯದರ್ಶಿ ನಾರಾಯಣ ಸ್ವಾಮಿ ಆಗ್ರಹಿಸಿದರು.
ನಡ್ಯೋಡಿ ದೈವಸ್ಥಾನದ ಆವರಣದಲ್ಲಿ ನಡೆದ, ಭಾರತೀಯ ಕಿಸಾನ್ ಸಂಘ ಮಾರ್ಪಾಡಿ-ಕಲ್ಲಬೆಟ್ಟು ಘಟಕದ ವಾರ್ಷಿಕೋತ್ಸವ, ರೈತ ಸಮ್ಮಿಲನ ಮತ್ತು ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು. ಘಟಕದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಭಾ.ಕಿ.ಸಂ. ದ.ಕ. ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ರೈತರನ್ನು ಪಟ್ಟಣದವರು ಅಥವಾ ಹಳ್ಳಿಯವರು ಎಂದು ಪ್ರತ್ಯೇಕಿಸದೆ ಗ್ರಾಮಾಂತರದ ಜತೆಗೆ ಪುರಸಭೆ ವ್ಯಾಪ್ತಿಯಲ್ಲಿರುವ ರೈತರಿಗೂ ಕುಮ್ಕಿ ಹಕ್ಕು ನೀಡಬೇಕೆನ್ನುವ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಎಂಸಿಎಸ್ ಸೊಸೈಟಿಯ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್. ಕಲ್ಲಬೆಟ್ಟು ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕೋಟ್ಯಾನ್, ಉಪಾಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ, ನಡ್ಯೋಡಿ ದೈವಸ್ಥಾನದ ಆಡಳಿತ ಮೊಕ್ತೇಸರ ಎಂ. ವಸಂತ ಶೆಟ್ಟಿ, ಸಮಿತಿ ಅಧ್ಯಕ್ಷ ಕೃಷ್ಣ ಎ. ಕೋಟ್ಯಾನ್, ಕೋಟೆಬಾಗಿಲು ಮಹಮ್ಮಾಯಿ ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಕೋಟೆಗಾರ್, ಕಲ್ಲಬೆಟ್ಟು ಮಹಮ್ಮಾಯಿ ದೇವಸ್ಥಾನದ ಅಧ್ಯಕ್ಷ ರಾಮಚಂದ್ರ, ನಡ್ಯೋಡಿ ಶಾಲಾ ಸಲಹಾ ಸಮಿತಿ ಅಧ್ಯಕ್ಷ ಗಂಗಾಧರ ಬಂಗೇರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭರತೇಶ್, ನಡ್ಯೋಡಿ ಯುವಕ ಮಂಡಲದ ಅಧ್ಯಕ್ಷ ಸತೀಶ್ ಪೂಜಾರಿ, ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ಪಿ. ಶೆಟ್ಟಿ, ಮುಖ್ಯ ಶಿಕ್ಷಕಿ ಉಷಾಲತಾ, ಎಸ್‌ಕೆಡಿಆರ್‌ಡಿಪಿ ಸೇವಾ ಪ್ರತಿನಿಧಿ ಮಮತಾ, ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್, ಮಂಜುಶ್ರೀ ಭಜನ ಮಂದಿರದ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಮಾರ್ಪಾಡಿ ಮಸೀದಿ ಅಧ್ಯಕ್ಷ ಹಾಮ್ಮದ್ ಬಿ.ಕೆ. ಉಪಸ್ಥಿತರಿದ್ದರು. ವಿವಿಧ ಸಾಧಕರನ್ನು ಸಮ್ಮಾನಿಸಲಾಯಿತು. ಪ್ರಸನ್ನ ಹೆಗ್ಡೆ ನಿರೂಪಿಸಿದರು.
ಕಾರ್ಯಕ್ರಮಕ್ಕೆ ಮೊದಲು ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಿಂದ ನಡ್ಯೋಡಿ ದೈವಸ್ಥಾನದ ವರೆಗೆ ರೈತರ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.