ದೇವನಹಳ್ಳಿ: ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರೆ ತಾಪಂ ಹಾಗೂ ಜಿಪಂ ಪಂಚಾಯತ್ ಕಚೇರಿಯಿಂದ ಗ್ರಾಪಂಚಾಯಿತಿಗೆ ಹಣ ಮಂಜೂರಾಗುತ್ತದೆ ಎಂದು ಜಿಪಂ ಸದಸ್ಯ ಲಕ್ಷ್ಮೀನಾರಾಯಣ್ ಹೇಳಿದರು. ತಾಲೂಕಿನ ನಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 2018-19 ನೇ ಸಾಲಿನ ಗ್ರಾಮ ಸಭೆ ಹಾಗೂ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ 24 ಇಲಾಖೆ ಅಧಿಕಾರಿಗಳು ಗ್ರಾ ಮ ಸಭೆಗಳಗೆ ಕಡ್ಡಾಯಗವಾಗಿ ಭಾಗವಹಿಸಿ ಇಲಾಖೆ ಸೌಲತ್ತುಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರೆ ಯೋಜನೆ ಪಡೆಸುಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಗ್ರಾಪಂ ಆಯಾವ್ಯಯ ಹಾಗೂ ಕಾಮಗಾರಿಗಳ ಪಟ್ಟಿಯನ್ನು ಗ್ರಾಮಸ್ಥರ ಎದುರು ಮಂಡಿಸುತ್ತಾರೆ. ಇದರ ಬಗ್ಗೆ ಗ್ರಾಮಸ್ಥರು ಅನುಮಾನ ಇದ್ದರೇ ನಿರ್ಭಿತಿಯಿಂದ ಕೇಳಿ ಚರ್ಚಿಸಬಹುದು ಸಭೆಯಲ್ಲಿ ಚರ್ಚೆಗಳು ನಡೆದರೆ ಗ್ರಾಮ ಸಭೆಗೆ ಒಂದು ಮಹತ್ವ ಇರುತ್ತದೆ ಎಂದರು.
ಸಭೆಯಲ್ಲಿ ನಲ್ಲೂರು ಗ್ರಾಮದಲ್ಲಿ ನೀರಿನ ಸರಬರಾಜು ಬಗ್ಗೆ ಗ್ರಾಮಸ್ಥರು ಧ್ವನಿ ಎತ್ತಿದರು ಹಾಗೂ ಮಲ್ಲೇನಹಳ್ಳಿ ಗ್ರಾಮದ ರಸ್ತೆ ಹಾಳಾಗಿರುವ ಬಗ್ಗೆಯು ಸಹ ಗ್ರಾಮಸ್ಥರು ಸಭೆಯಲ್ಲಿ ತಿಳಿಸಿದಾಗ ಇದಕ್ಕೆ ಜಿಪಂ ಸದಸ್ಯರು ರಸ್ತೆ ನಿರ್ಮಾಣ ಮಾಡುವುದಕ್ಕೆ ನಾವು ಗಮನ ಹರಿಸಿದ್ದೇವೆ ಇದರ ಬಗ್ಗೆ ಜಿಲ್ಲಾ ಪಂಚಾಯತಿಯಲ್ಲಿ ಚರ್ಚಿಸಿ ರಸ್ತೆ ನಿರ್ಮಾಣ ಮಾಡುತ್ತೇವೆ ಹಾಗೂ ನೀರಿನ ಸರಬರಾಜಿನ ಬಗ್ಗೆ ಅಭಿವೃದ್ದಿ ಅಧಿಕಾರಿ 15 ದಿನದಲ್ಲಿ ಸರಿಪಡಿಸುತ್ತೇವೆ ಎಂದರು.
ಸಭೆಯಲ್ಲಿ ಪಶು ಇಲಾಖೆ ಹಾಗೂ ಸಮಾಜ ಕಲ್ಯಾಣ ರೇಷ್ಮೆ ಇಲಾಖೆಯ ಅಧಿಕಾರಿಗಳು ಮಾತನಾಡಿದರು. ನಿವೃತಿ ಯೋಧರಿಗೆ ಹಾಗು ಎಸ್‌ಎಸ್ ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಈ ವೇಳೆ ಗ್ರಾಪಂ ಉಪಾಧ್ಯಕ್ಷ ನವೀನ್,ಸದಸ್ಯರಾದ ಅಶ್ವತಮ್ಮ, ವೆಂಕಟೇಶಯ್ಯ, ಮಹಾದೇವಿ ವೀರಭದ್ರಪ್ಪ, ಸೋಮಶೇಖರ್, ಗಂಗರೆಡ್ಡಿ, ಮಹಾಲಕ್ಷ್ಮೀ ಲಲಿತೇಶ್, ಆಂಜಿನಮ್ಮ ಕೃಷ್ಣಪ್ಪ, ಮಮತಾಕೃಷ್ಣ ಮಂಜುಳಾ ಮಂಜುನಾಥ್, ಕೃಷ್ಣಮೂರ್ತಿ, ಪಿಡಿಒ ಭಾಗ್ಯಮ್ಮ, ಕಾರ್ಯದರ್ಶಿ ರಮೇಶ್ ಮತ್ತಿತರರು ಇದ್ದರು.
ಗ್ರಾಪಂ ವತಿಯಿಂದ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಮಸ್ಥರು ಅಭಿವೃದ್ಧಿ ಕಾಮಗಾರಿ ಮಾಡಿಕೊಳ್ಳಬಹುದು. ಆದರೆ ಸಾರ್ವಜನಿಕರೆ ಮುಂದೆ ಬರುತ್ತಿಲ್ಲ.
-ಸಾವಿತ್ರಮ್ಮ ಕೆಂಪೇಗೌಡ, ಗ್ರಾಪಂ ಅಧ್ಯಕ್ಷೆ