ಮದ್ದೂರು: ರಾಜ್ಯಾದ್ಯಂತ ನಿರೀಕ್ಷೆಗೂ ಮೀರಿದ ಮಳೆಯಾಗಿದ್ದು, ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕೆರೆಕಟ್ಟೆಗಳೂ ತುಂಬಿರುವುದು ಸಮ ಧಾನದ ಸಂಗತಿ ಎಂದು ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಹೇಳಿದರು.
ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಮಾರ್ಗಮಧ್ಯೆ ಮದ್ದೂರು ಪಟ್ಟ ಣದ ಶಿವ ಪುರ ದಲ್ಲಿ ಸ್ಥಳೀಯ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಹಾನಿಯಿಂದ ಉಂಟಾಗಿ ರುವ ನಷ್ಟ ಪರಿಹಾರ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ 800 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿರುವ ಸಂಬಂಧ ತಮ್ಮ ಗಮನಕ್ಕೆ ಬಂದಿದೆ. ಈಗಾಗಲೇ ಶಾಸಕದ್ವಯರಾದ ಮಧು ಜಿ.ಮಾದೇ ಗೌಡ, ದಿನೇಶ್ ಗೂಳೀ ಗೌಡ ಮನವಿ ಸಲ್ಲಿಸಿದ್ದು, ಈ ಸಂಬಂಧ ಸಿಎಂ ಜತೆ ಚರ್ಚಿಸಿ ಅನುದಾನ ಬಿಡುಗಡೆ ಸಂಬಂಧ ಮನವಿ ಮಾಡುವುದಾಗಿ ಹೇಳಿದರು. ಪ್ರಧಾನಿ ಮೋದಿ 8 ವರ್ಷದಿಂದ ದೇಶ ಮುನ್ನೆಡೆಸುತ್ತಿರುವುದು ಸೌಭಾಗ್ಯ. ಅವರಿಗೆ ತಾಯಿ ಚಾಮುಂಡೇಶ್ವರಿ ಆಯುಷ್ಯ ಆರೋಗ್ಯ, ಶಕ್ತಿ ಜತೆಗೆ ದೇಶ ವನ್ನು ಉತ್ತುಂಗಕ್ಕೆ ಕೊಂಡೊ ಯ್ಯಲು ಶಕ್ತಿ ನೀಡಲೆಂದು ಹಾರೈಸಿದರು.
ತಮ್ಮ 72ನೇ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಅವರ ಅಧಿಕಾರದ ಅವಧಿಯು ದ್ಧಕ್ಕೂ ದೇಶ ವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜತೆಗೆ ನರೇಂದ್ರ ಮೋದಿ ಅವರ ತಾಯಿಯಂತೆ ಶತಾ ಯುಷಿಗಳಾಗುವ ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಮನ್‌ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಅಮರ್‌ಬಾಬು, ತಾಪಂ ಮಾಜಿ ಸದಸ್ಯ ಕೆ.ಆರ್. ಮಹೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಜೋಗೀಗೌಡ, ಮುಖಂಡರಾದ ಅಭಿಷೇಕ್, ಲೋಕೇಶ್ ಇತರರಿದ್ದರು.