Advertisement

ಕಲಾವಿದರಿಗೆ ಸರ್ಕಾರ ಹೆಚ್ಚು ಅವಕಾಶ ಕಲ್ಪಿಸಲಿ

09:58 PM Jan 15, 2022 | Team Udayavani |

ಚಳ್ಳಕೆರೆ: ಗ್ರಾಮೀಣ ಭಾಗಗಳಲ್ಲಿ ಜಾನಪದ ಉತ್ಸವವನ್ನು ನಡೆಸುವ ಮೂಲಕ ಜಾನಪದ ಕಲೆಯನ್ನು ಮತ್ತಷ್ಟು ಪ್ರಸಿದ್ಧಿಗೊಳಿಸುವಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾ ಧಿಕಾರ ಮತ್ತು ನೃತ್ಯನಿಕೇತನ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜನಪದ ಕಲೆಗಳು ಎಂದೂ ಜೀವಂತವೆಂದು ಕಂದಾಯ ಇಲಾಖೆಯ ನಿವೃತ್ತ ಅ ಧಿಕಾರಿ ಟಿ.ಕೆ.ತಿಪ್ಪುರಾವ್‌ ತಿಳಿಸಿದರು.

Advertisement

ಅವರು, ಶುಕ್ರವಾರ ತಳಕು ಹೋಬಳಿಯ ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾನಪದ ಕಲಾಮೇಳ ಮತ್ತು ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂದಿಗೂ ಸಹ ನಾವು ಜಾನಪದ ಕಲಾವಿದರು ಮತ್ತು ಕಲೆಯನ್ನು ಕೇವಲ ಗ್ರಾಮೀಣ ಭಾಗಗಳಲ್ಲಿ ಮಾತ್ರ ಕಾಣಬಹುದು. ಇಂತಹ ಕಲಾವಿದರಿಗೆ ಸರ್ಕಾರ ಇನ್ನೂ ಹೆಚ್ಚಿನ ಅವಕಾಶ ಕಲ್ಪಿಸಿಕೊಡಬೇಕು ಎಂದರು.

ನೃತ್ಯ ನಿಕೇತನ ಸಂಚಾಲಕ ಯು.ಎಸ್‌. ವಿಷ್ಣುಮೂರ್ತಿರಾವ್‌ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸವಿರುವ ನೃತ್ಯ ಕಲೆಯನ್ನು ಸಮಾಜದ ಎಲ್ಲರಿಗೂ ಪರಿಚಯಿಸುವುದಲ್ಲದೆ, ಉತ್ತಮ ಕಾರ್ಯಗಳ ಮೂಲಕ ಸಮಾಜದ ಏಳಿಗೆಗಾಗಿ ಕಾರ್ಯನಿರ್ವಹಿಸಿದವರಿಗೆ ನಮ್ಮ ಸಂಸ್ಥೆ ವತಿಯಿಂದ ಪ್ರತಿವರ್ಷವೂ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡು ಅವರ ಕಾರ್ಯಗಳ ಬಗ್ಗೆ ಜನರಿಗೆ ಪರಿಚಯಿಸಲಾಗುತ್ತಿದೆ ಎಂದರು. ರಾಜ್ಯಮಟ್ಟದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಈ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಕೆ.ಎಸ್‌.ಶ್ರೀಕಾಂತ್‌, ಅಕ್ಷರ ಸಿರಿ ಪ್ರಶಸ್ತಿ ಪಡೆದ ನಸ್ರತ್‌ ವುನ್ನೀಸ್‌, ಲಕ್ಷಿ ¾àದೇವಿ, ಪ್ರಮೀಳಮ್ಮ, ಸುಜಾತ ಅವರನ್ನು ಅಭಿನಂದಿಸಲಾಯಿತು.

ನೃತ್ಯ ನಿಕೇತನ ಪ್ರಾಚಾರ್ಯ ಸುಧಾಮೂರ್ತಿ, ಗಾಯಿತ್ರಿ ದೇವಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ತಿಪ್ಪೇಸ್ವಾಮಿ, ಎಂ.ಎನ್‌. ಮೃತ್ಯುಂಜಯ, ಗ್ರಾಪಂ ಅಧ್ಯಕ್ಷೆ ಪೆದ್ದಕ್ಕ, ಸದಸ್ಯರಾದ ಜ್ಯೋತಿರಾಜಣ್ಣ, ರಮೇಶ್‌, ತಿಪ್ಪೇಸ್ವಾಮಿ, ಮುಖಂಡರಾದ ದಾವಣಗೆರೆ ಬಸಣ್ಣ, ಪಾಪೇಶ್‌ ನಾಯಕ ಭಾಗವಹಿಸಿದ್ದರು. ತುಮಕೂರಿನ ಗಾಯಿತ್ರಿ ದೇವಿ ಗೀತಗಾಯನ, ಬಯಲಾಂಜನೇಯ ತಂಡದಿಂದ ಗಾರುಡಿ ಬೊಂಬೆಗಳ ಕುಣಿತ, ವಾಲ್ಮೀಕಿ ಸಂಘದಿಂದ ಕೀಲುಕುದುರೆ, ಸುಧಾಮೂರ್ತಿ ಅವರಿಂದ ಸುಗಮ ಸಂಗೀತ, ನೃತ್ಯ ನಿಕೇತನದಿಂದ ಭರತನಾಟ್ಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next