Advertisement

ಸರ್ಕಾರ ಮಕ್ಕಳ ಭಾಗ್ಯವನ್ನೂ ನೀಡಲಿ!; ಸದನದಲ್ಲಿ ಹಾಸ್ಯಭರಿತ ಚರ್ಚೆ 

03:30 PM Jul 03, 2018 | Team Udayavani |

ಬೆಂಗಳೂರು: ವಿಧಾನಸಭಾ ಕಲಾಪದಲ್ಲಿ ಮಂಗಳವಾರ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆಯ ಕುರಿತಾಗಿ ಸ್ವಾರಸ್ಯಕರ ಹಾಸ್ಯಭರಿತ ಚರ್ಚೆ ನಡೆಯಿತು. 

Advertisement

ಕಡೂರಿನ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್‌ ಮಾತನಾಡಿ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲ , ಇದಕ್ಕೆ ಕಾರಣ ಒಬ್ಬರಿಗೆ ಒಂದೇ ಮಗು. ಆ ಮಗು ಕಲಿತಾದ ಬಳಿಕ ಮತ್ತೆ ಮಕ್ಕಳಿಲ್ಲ ಎಂದರು. 

ಈ ವೇಳೆ ಸ್ಪೀಕರ್‌ ರಮೇಶ್‌ ಕುಮಾರ್‌ ಮಾತನಾಡಿ ಕುಟುಂಬ ನಿಯಂತ್ರಣ ಯೋಜನೆಯೂ ಬೇಕು ಮಕ್ಕಳೂ ಬೇಕು ಅಂದ್ರೆ ಹೇಗಯ್ಯ ಅಂದರು.ಈ ವೇಳೆ ಸದನ ನಗೆ ಗಡಲಲ್ಲಿ ತೇಲಿತು. 

ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ಸಿ.ಟಿ.ರವಿ ಈ ಸಮ್ಮಿಶ್ರ ಸರ್ಕಾರ ಮಕ್ಕಳ ಭಾಗ್ಯ ಯೋಜನೆಯನ್ನೂ ಕರುಣಿಸಲಿ ಎಂದರು. ಆಗ ಸದನದಲ್ಲಿದ್ದ ಕಾಂಗ್ರೆಸ್‌ ಸದಸ್ಯರು ಕೇಂದ್ರ ಸರ್ಕಾರಕ್ಕೆ ಹೇಳಿ ಎಂದು ತಿರುಗೇಟು ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next