ಮೈಸೂರು: ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಆರ್ಥಿಕ ಶಿಸ್ತನ್ನು ರೂಪಿಸಿಕೊಳ್ಳುವ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಮನವಿ ಮಾಡಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದ್ಯ ಇಡೀ ದೇಶವೇ ಸಂಕಷ್ಟಲ್ಲಿದ್ದು, ಸಿಎ ಯಡಿಯೂರಪ್ಪ ಅವರೇ ಮುಂದೆನಿಂತು ಮೊದಲು ಸಂಪುಟದಿಂದಲೇ ಆರ್ಥಿಕ ಶಿಸ್ತು ತರಬೇಕು.
ಸರ್ಕಾರಿ ನೌಕರರು, ಅಧಿಕಾರಿಗಳ ಆರ್ಥಿಕ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಈ ಬಾರಿಯ 2 ಲಕ್ಷದ 33 ಸಾವಿರ ಕೋಟಿ ಬಜೆಟ್‌ನಲ್ಲಿ ಶೇ.21ರಷ್ಟು (50 ಸಾವಿರ ಕೋಟಿ ರೂ.) ಹಣ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವೇತನ ಹಾಗೂ ಖರ್ಚುವೆಚ್ಚಕ್ಕೆ ಹಾಗೂ ಶೇ.9ರಷ್ಟು (20 ಸಾವಿರ ಕೋಟಿ ರೂ.) ಪಿಂಚಣಿ ನೀಡುವುದಕ್ಕೆಯೇ ಖರ್ಚಾಗುತ್ತಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕಿದೆ.
ಭಾರತೀಯ ಆರ್ಥಿಕ ವ್ಯವಸ್ಥೆ ಸರಿದೂಗಿಸಲು ತ್ಯಾಗದ ಅವಶ್ಯವಿದೆ. ಉಳ್ಳವರು ಅಗತ್ಯಕ್ಕೆ ಬೇಕಿರುವಷ್ಟು ವೇತನ, ಪಿಂಚಣಿ ಪಡೆದುಕೊಂಡು ತ್ಯಾಗಕ್ಕೆ ಸಿದಟಛಿರಾಗಬೇಕಿದೆ. 135 ಕೋಟಿ ಜನರಲ್ಲಿ ಈ ತ್ಯಾಗದ ಭಾವನೆ ಮೂಡಬೇಕು. ಗಾಂಧೀಜಿ ತತ್ವವಾದ ಸರಳತೆಗೆ ಹೊಂದಿಕೊಳ್ಳಬೇಕು ಎಂದು ಹೇಳಿದರು. ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ವಾಕ್ಸಮರ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಸಮಧಾನ ಬಹಿರಂಗವಾಗಿ ಬೇಡ ಅಂತರಂಗದಲ್ಲಿ ಇರಲಿ.
ನಿಮ್ಮ ಅಸಮಾಧಾನ ಏನೆ ಇದ್ದರೂ ಪಕ್ಷದ ವೇದಿಕೆಯಲ್ಲಿರಲಿ. ಪಕ್ಷದಲ್ಲಿ ರಾಮದಾಸ್ ಹಿರಿಯರಿದ್ದಾರೆ. ಈ ಬಗ್ಗೆ ಜಿಲ್ಲಾ ಮಂತ್ರಿಗಳು ಎಲ್ಲರ ಬಳಿ ಚರ್ಚಿಸಿ ನಿಮ್ಮ ಸಮಸ್ಯೆ ಬಗಹರಿಸಿಕೊಳ್ಳಿ. ಸುಮ್ಮನೆ ಬಹಿರಂಗವಾಗಿ ವಾಕ್ಸಮರ ಬೇಡ ಎಂದು ಸಲಹೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಡಿ.ಮಹೇದ್ರ, ಮುಖಂಡರಾದ ರೇವಣ್ಣ, ಮಹೇಶ ಇದ್ದರು.
ಮೈಮುಲ್‌ನಲ್ಲಿ ಅಕ್ರಮ ನೇಮಕಾತಿ ಆರೋಪ ಇದೆ. ಈ ಬಗ್ಗೆ ಗಂಭೀರವಾಗಿ ತನಿಖೆ ಮಾಡಲಿ. ಅಲ್ಲಿ ಏನಾಗಿದೆ ಅನ್ನೋದು ಎಲ್ಲರಿಗೂ ಗೊತ್ತಾಗಲಿ. ಶಾಸಕ ಸಾ.ರಾ.ಮಹೇಶ್ ಆರೋಪವನ್ನು ಹಾಗೆಯೇ ಬಿಡಬಾರದು.
-ಎಚ್.ವಿಶ್ವನಾಥ್,ಮಾಜಿ ಸಚಿವ