ಕಲಬುರಗಿ: ಎರಡನೇ ಹಂತದ ಕೊರೊನಾ ಅಟ್ಟಹಾಸಮೆರೆಯುತ್ತಿದ್ದು, ಬಡವರು ಕಂಗಾಲಾಗಿದ್ದಾರೆ.ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗದೇ ನರಳಾಡುತ್ತಿದ್ದಾರೆ.ಹೀಗಾಗಿ ಸರ್ಕಾರ ತಕ್ಷಣವೇ ನೆರವಿಗೆ ಬರಬೇಕೆಂದುಜಿಲ್ಲಾ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.
ಕೊರೊನಾ ಮಹಾಮಾರಿಯ ಎರಡನೆ ಅಲೆದಿನದಿಂದ ದಿನಕ್ಕೆ ಶರವೇಗದಲ್ಲಿ ಹಬ್ಬುತ್ತಿದ್ದು,ದಿನಾಲು ಸಾವಿರಾರು ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ.ಇತ್ತಕಡೆ ಜಿಲ್ಲಾ ಉಸ್ತುವಾರಿ ಸಚಿವರು ಸುಳಿಯುತ್ತಿಲ್ಲ. ಜತೆಗೆಸರಕಾರವೂ ಎಚ್ಚೆತ್ತುಕೊಳ್ಳುತ್ತಿಲ್ಲ.
ರೆಮ್‌ಡೆಸಿವಿಯರ್ ಔಷಧಎಲ್ಲರಿಗೂ ದೊರೆಯದೇ ದುಬಾರಿ ಹಣಕ್ಕೆ ಕಾಳ ಸಂತೆಯಲ್ಲಿಮಾರಾಟವಾಗುತ್ತಿದೆ. ಕೊರೊನಾ ತಡೆಗಟ್ಟುವಲ್ಲಿ ಬಿಜೆಪಿ ಸರಕಾರಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಜಗದೇವ ಗುತ್ತೇದಾರ್ ಟೀಕಿಸಿದ್ದಾರೆ.
ಜಿಲ್ಲೆ ಮತ್ತು ರಾಜ್ಯದಲ್ಲಿ ಆಕ್ಸಿಜನ್ ಕೊರತೆ, ಬೆಡ್ ಕೊರತೆಇದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ.ಈ ಪರಿಸ್ಥಿತಿಯನ್ನು ಆರೋಗ್ಯ ತುರ್ತು ಪರಿಸ್ಥಿತಿಎಂದು ಸರಕಾರ ಘೋಷಿಸಬೇಕು. ಕೊರೊನಾವåಹಾಮಾರಿಯಿಂದ ತತ್ತರಿಸಿರುವ ಎಲ್ಲ ಬಡಕುಟುಂಬಗಳ ಖಾತೆಗೆ 10,000ರೂ. ಮತ್ತು 15 ಕೆಜಿಅಕ್ಕಿ ಉಚಿತವಾಗಿ ವಿತರಿಸಬೇಕು.
ಬಡವರಿಗಾಗಿ ಚಿಕಿತ್ಸೆನೀಡದ ಖಾಸಗಿ ಆಸ್ಪತ್ರೆಗಳನ್ನು ಸರಕಾರ ಮುಟ್ಟುಗೋಲುಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕೊರೊನಾದಿಂದ ಉಂಟಾಗುತ್ತಿರುವ ಜನರ ಸಾವನ್ನು ಕೇಂದ್ರಸರ್ಕಾರವೂ ಗಂಭೀರವಾಗಿ ಪರಿಗಣಿಸಿಲ್ಲ.
ಯಾರೊಬ್ಬರುಹಸಿವಿನಿಂದ ನರಳಿ ಸಾಯದಂತೆ ಸರಕಾರ ನಿಗಾ ವಹಿಸಬೇಕು.ರೈತರ ಸಾಲ ಮನ್ನಾ ಅಥವಾ ಬಡ್ಡಿ ಮನ್ನಾವನ್ನು ಸರಕಾರಕೂಡಲೇ ಮಾಡಬೇಕ ಎಂದು ಆಗ್ರಹಿಸಿದ್ದಾರೆ.