Advertisement

ಮೀನುಗಾರರ ಹಿತ ಕಾಯುವ ಅವಕಾಶ ಕಲ್ಪಿಸಿಕೊಡಿ: ಪ್ರಮೋದ್‌ ಮಧ್ವರಾಜ್‌

09:06 PM Apr 03, 2019 | Team Udayavani |

ಕುಂದಾಪುರ: ಕಳೆದ 5 ವರ್ಷಗಳಲ್ಲಿ ಆಡಳಿದಲ್ಲಿರುವ ಎನ್‌ಡಿಎ ಸರಕಾರದಿಂದಾಗಿ ದೇಶದ ಆರ್ಥಿಕತೆ ಅಧೋಗತಿಗೆ ತಲುಪಿದ್ದು,
ದೇಶದ ಆರ್ಥಿಕತೆ ಸುಧಾರಣೆಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷವನ್ನು ಬೆಂಬಲಿಸಿ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ಮೀನುಗಾರರ ಹಿತಕಾಯುವ ಅವಕಾಶ ಕಲ್ಪಿಸಿಕೊಡಿ ಎಂದು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರು ಹೇಳಿದರು.

Advertisement

ಅವರು ಬುಧವಾರ ಕುಂದಾಪುರದ ನೆಹರೂ ಮೈದಾನದಲ್ಲಿ ನಡೆದ ಮಹಿಳಾ ಮೀನುಗಾರರ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.

ಸಮಾವೇಶದಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡೀಸ್‌, ಅವರ ಪತ್ನಿ ಬ್ಲೋಸಂ ಫೆರ್ನಾಂಡೀಸ್‌, ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ, ಇಂಟಕ್‌ ರಾಜ್ಯಾಧ್ಯಕ್ಷ ರಾಕೇಶ್‌ ಮಲ್ಲಿ, ಮುಖಂಡರಾದ ಮಾಣಿ ಗೋಪಾಲ, ಶಂಕರ್‌ ಕುಂದರ್‌, ಮದನ್‌ ಕುಮಾರ್‌, ಹಿರಿಯಣ್ಣ, ಜ್ಯೋತಿ ಪುತ್ರನ್‌, ಶಾಲಿನಿ ಶೆಟ್ಟಿ, ಹುಸೇನ್‌ ಹೈಕಾಡಿ, ಕಿಶೋರ್‌ ಕುಮಾರ್‌, ಮೀನುಗಾರರ ಸಂಘದ ರತ್ನಾ, ಶ್ರೀಕಾಂತ ಅಡಿಗ, ಸಬ್ಲಾಡಿ ಮಂಜಯ್ಯ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ಪ್ರದೀಪ್‌ ಕುಮಾರ್‌ ಶೆಟ್ಟಿ ಗುಡಿಬೆಟ್ಟು, ಸಂದೇಶ್‌ ಭಟ್‌, ಹರಿಪ್ರಸಾದ್‌ ಶೆಟ್ಟಿ, ಪ್ರಕಾಶ್‌ ಶೆಟ್ಟಿ ತೆಕ್ಕಟ್ಟೆ, ಅನಿತಾ ಶೆಟ್ಟಿ, ದೇವಾನಂದ ಶೆಟ್ಟಿ, ರಾಜು ಪೂಜಾರಿ, ಮೋಗವೀರ ಮಹಾಸಭಾದ ಕೆ.ಕೆ. ಕಾಂಚನ್‌, ಮನ್ಸೂರು ಇಬ್ರಾಹಿಂ, ದಿನೇಶ್‌ ಪುತ್ರನ್‌, ಕಾಂಗ್ರೆಸ್‌ ಐಟಿ ಸೆಲ್‌ನ ಚಂದ್ರಶೇಖರ್‌ ಶೆಟ್ಟಿ, ಮನೋಜ್‌, ಚಂದ್ರ ಅಮೀನ್‌, ಇಚ್ಚಿತಾರ್ಥ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

ಜನಸ್ತೋಮ
ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕುಂದಾಪುರದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ್ದು, ಸಭೆಯಲ್ಲಿ ಶಿರೂರು, ಬೈಂದೂರು, ಮರವಂತೆ, ಕೊಡೇರಿ, ಗಂಗೊಳ್ಳಿ, ಕೋಟ, ಕೋಡಿ ಸಹಿತ ಎಲ್ಲೆಡೆಗಳಿಂದ ಮೀನುಗಾರರು ಆಗಮಿಸಿದ್ದರು.
ಕಾಂಗ್ರೆಸ್‌ ಮುಖಂಡ ಎಂ.ಎ. ಗಫೂರ್‌ ಸ್ವಾಗತಿಸಿದರು. ಮಾಜಿ ಶಾಸಕ ಯು.ಆರ್‌. ಸಭಾಪತಿ ಕಾರ್ಯಕ್ರಮ ನಿರ್ವಹಿಸಿದರು.

ಬಿಗಿ ಬಂದೋಬಸ್ತ್
ಸಿಎಂ ಸಮಾವೇಶಕ್ಕೆ ಭಾರೀ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿಗಳಾದ ಬಿ.ಪಿ. ದಿನೇಶ್‌ ಕುಮಾರ್‌, ಟಿ.ಆರ್‌. ಜೈಶಂಕರ್‌, ವೃತ್ತ ನಿರೀಕ್ಷಕ ಮಂಜಪ್ಪ ಹಾಗೂ ಎಸ್‌ಐಗಳು, ಪೊಲೀಸ್‌ ಸಿಬಂದಿ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next