ಬೇಲೂರು: ಸರ್ಕಾರ ಕೃಷಿ ಇಲಾಖೆಮೂಲಕ ನೀಡುವ ಸೌಲಭ್ಯಗಳನ್ನು ಸಣ್ಣ ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್.ತಮ್ಮಣ್ಣಗೌಡ ತಿಳಿಸಿದರು.
ತಾಲೂಕಿನ ಅರೇಹಳ್ಳಿ ರೈತ ಸಂಪರ್ಕಕೇಂದ್ರದಲ್ಲಿ ಟಾರ್ಪಲ್ ವಿತರಿಸಿ ಮಾತನಾಡಿದ ಅವರು, ಸರ್ಕಾರ ರೈತರು ಬೆಳೆಯುವ ಆಹಾರ ಪದಾರ್ಥಗಳನ್ನು ಮಳೆಯಿಂದ ರಕ್ಷಣೆ ಮಾಡಲುಟಾರ್ಪಲ್‌ನೀಡುತ್ತಿರುವುದು ಶ್ಲಾಘನೀಯಕಾರ್ಯ ಎಂದು ಹೇಳಿದರು.
ಅರೇಹಳ್ಳಿ ವ್ಯಾಪ್ತಿಯ ಚೀಕನಹಳ್ಳಿ, ನಾಗೇನಹಳ್ಳಿ, ದಬ್ಬೆ, ತೊಳಲು ಈ ಭಾಗದ ಒಟ್ಟು 50 ಫಲಾನುಭವಿಗಳಿಗೆ ಟಾರ್ಪಲ್ ವಿತರಿಸಲಾಗಿದೆ, ಅಲ್ಲದೆ, ತಮ್ಮ ತಾಪಂ ಕ್ಷೇತ್ರ ವ್ಯಾಪ್ತಿಯ ದಬ್ಬೆ ಹಾಗೂ ಹುನುಗನಹಳ್ಳಿ ಗ್ರಾಪಂ ವ್ಯಾಪ್ತಿಗೆಸೇರಿದ ರೈತರು, ಸರ್ಕಾರದ ಸೌಲಭ್ಯ ಪಡೆಯಲು 33 ಕಿ.ಮೀ. ದೂರದ ಅರೇಹಳ್ಳಿ ರೈತ ಸಂಪರ್ಕ ಕೇಂದ್ರಕ್ಕೆ ಹೋಗಬೇಕು. ಹೀಗಾಗಿ ಈ ಭಾಗದ ರೈತರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.
ತಮ್ಮ ತಾಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಹಾಗೂ ಬಡ ರೈತರು ಹೆಚ್ಚಾಗಿದ್ದಾರೆ. ಇದರಿಂದ ರೈತ ಸಂಪರ್ಕ ಉಪಕೇಂದ್ರವನ್ನು ತೊಳಲು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ತೆರೆಯುವಂತೆ ಈಗಾಗಲೇ ಶಾಸಕರು, ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ರೈತ ಸಂಪರ್ಕ ಕೇಂದ್ರದ ಅಧಿಕಾರಿ ಪ್ರಕಾಶ್ ಮಾತನಾಡಿ, ರೈತರುಕಡ್ಡಾ ವಾಗಿ ಬೆಳೆ ಸಮೀಕ್ಷೆ ಮಾಡಿಸಬೇಕು ಹಾಗೂ ಕೃಷಿ ಇಲಾಖೆಯಿಂದ ರೈತರಿಗೆ ಹಲವು ಯೋಜನೆಗಳು ಜಾರಿಗೆ ಬಂದಿದ್ದು, ಈಗಾಗಲೇ ಚಾರ್ಜರ್ ಸ್ಪ್ರೆಯರ್,ಪೈಪ್, ಜಟ್‌ಗಳು ಸಿಗುತ್ತವೆ. ರೈತರು ಮೂಲ ದಾಖಲಾತಿಯೊಂದಿಗೆ ಇಲಾಖೆಗೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯುವಂತೆ ಮನವಿ ಮಾಡಿದರು.
ಅನುಘಟ್ಟ ಕ್ಷೇತ್ರದ ತಾಪಂ ಸದಸ್ಯ ಶಶಿಕುಮಾರ್, ರೈತ ಮಹಿಳೆ ಜ್ಯೋತಿ, ಗ್ರಾಮಸ್ಥರು ಹಾಜರಿದ್ದರು.