Advertisement

“ಕೃಷಿ ಅನುಭವ ಯುವ ತಲೆಮಾರಿಗೆ ಪ್ರೇರಣೆ ನೀಡಲಿ’

12:23 AM Jun 10, 2019 | sudhir |

ಏತಡ್ಕ: ಸಾಧಕ ಹಿರಿಯ ಕೃಷಿಕರನ್ನು ಸಮ್ಮಾನಿಸುವ ಕಾರ್ಯಕ್ರಮ ಅನುಕರಣೀಯ. ಅವರ ಅನುಭವ ಯುವ ತಲೆಮಾರಿಗೆ ಪ್ರೇರಣೆ ನೀಡಲಿ ಎಂಬುದಾಗಿ ಕೇರಳ ರಾಜ್ಯ ಗ್ರಂಥಾಲಯ ಕೌನ್ಸಿಲ್‌ ಸದಸ್ಯ ಇ.ಜನಾರ್ದನನ್‌ ಹೇಳಿದರು.

Advertisement

ಅವರು ವಿಶ್ವ ಪರಿಸರ ದಿನದಂದು ಏತಡ್ಕದ ಕುಂಬಾxಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ವತಿಯಿಂದ ಹಿರಿಯ ಕೃಷಿಕರಾದ ನಾಂದ್ರೋಡು ಮಹಾಲಿಂಗೇಶ್ವರ ಭಟ್‌ ಅವರನ್ನು ಅವರ ಸ್ವಗೃಹದಲ್ಲಿ ಸಮ್ಮಾನಿಸಿ ಮಾತನಾಡಿದರು.

ಕಾರ್ಯಕಾರಿ ಸಮಿತಿ ಸದಸ್ಯ ಡಾ| ವೇಣುಗೋಪಾಲ್‌ ಕಳೆಯತ್ತೋಡಿ ಅವರುಅಭಿನಂದನ ಭಾಷಣ ಮಾಡಿ ಸಮ್ಮಾನಿತರ ಸಾಧನೆಗಳನ್ನು ಪರಿಚಯಿಸಿದರು.

ಸ್ಥಳೀಯ ವಾರ್ಡ್‌ ಸದಸ್ಯೆ ಎಲಿಜಬೆತ್‌ ಕ್ರಾಸ್ತ, ಹಿರಿಯ ಕೃಷಿಕ ಪತ್ತಡ್ಕ ಗಣಪತಿ ಭಟ್‌, ಎ.ವಿ.ಭಟ್‌ ಅಜ್ಜಿಮೂಲೆ ಶುಭಾಶಂಸನೆಗೈದರು. ಸಮ್ಮಾನಿತರ ಪರವಾಗಿ ಅವರ ಸಹೋದರನ ಮಗ ಗಿರೀಶ್‌ ನಾಂದ್ರೋಡು ಉತ್ತರಿಸಿ ಕೃತಜ್ಞತೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್‌ ಮಾತನಾಡಿ ಗ್ರಂಥಾಲಯದ ವೈವಿಧ್ಯಮಯ ಚಟುವಟಿಕೆಗಳ ವಿವರ ನೀಡಿದರು. ಸಮ್ಮಾನಿತರನ್ನು ಅಭಿವಂದಿಸಿದರು.

Advertisement

ವೈಷ್ಣವಿ, ಅತ್ರೇಯಿ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷ ವೈ.ಕೆ.ಗಣಪತಿ ಭಟ್‌ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಭಟ್‌ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಗಣರಾಜ ಕೆ. ಸಮ್ಮಾನ ಪತ್ರ ವಾಚಿಸಿದರು. ಇನ್ನೋರ್ವ ಸದಸ್ಯ ಸುಧೀರ್‌ ಕೃಷ್ಣ ಪಿ.ಎಲ್‌. ವಂದಿಸಿದರು.

ಅಕ್ಕಿ ಗಿರಣಿ ವಿಕ್ಷಣೆ
ಸಭಾ ಕಾರ್ಯಕ್ರಮದ ಪೂರ್ವ ಭಾವಿಯಾಗಿ ಮಹಾಲಿಂಗೇಶ್ವರ ಭಟ್‌ ಅವರ ಅಕ್ಕಿ ಗಿರಣಿ ಮತ್ತು ಅವರು ಆವಿಷ್ಕಾರ ಮಾಡಿದ ಕೃಷಿ ಯಂತ್ರೋಪಕರಣಗಳನ್ನು ವೀಕ್ಷಿಸಲಾ ಯಿತು. ವಿವಿಧ ಸಂದೇಹಗಳಿಗೆ ಅವರು ಸಮರ್ಪಕ ಉತ್ತರಗಳನ್ನು ನೀಡಿದರು. ಕೃಷಿ ನಮ್ಮ ಸಂಸ್ಕೃತಿ. ಕೃಷಿ ಇಲ್ಲದೆ ಜೀವನವಿಲ್ಲ ಎಂಬುದನ್ನು ಸ್ವಾನುಭವದೊಂದಿಗೆ ಅತಿಥಿಗಳು ಅವರು ನಿರೂಪಿಸಿದರು.

ಗಿಡಗಳನ್ನು ಬೆಳೆಸಿ ಪರಿಸರ ಪ್ರೇಮಿಗಳಾಗುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next