Advertisement

‘ಕೃಷಿ ಪಾಠಕ್ಕೆ ಹಿರಿಯರು ಮಾರ್ಗದರ್ಶನ ನೀಡಲಿ’

03:27 AM Jul 09, 2019 | sudhir |

ಪಾವಂಜೆ: ಕೃಷಿ ಬದುಕನ್ನು ತಿಳಿಹೇಳಲು ಅದನ್ನು ಪಾಠವಾಗಿ ಮಾರ್ಪಡಿಸಿ, ಹಿರಿಯರು ಗದ್ದೆಗೆ ಇಳಿದು ವಿದ್ಯಾರ್ಥಿ ಗಳಲ್ಲಿ ಅರಿವು ಮೂಡಿಸಬೇಕು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್‌ ಹೇಳಿದರು.

Advertisement

ಪಾವಂಜೆಯ ಅಗೋಳಿ ಮಂಜಣ ಜಾನಪದ ಕೇಂದ್ರ, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಸುರತ್ಕಲ್ನ ಗೋವಿಂದದಾಸ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕದ ಸಂಯೋಜನೆಯಲ್ಲಿ ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನ ರೇಡಿಯೋ ಸಾರಂಗ್‌ ಇವುಗಳ ಸಂಯುಕ್ತಾಶ್ರಯದಲ್ಲಿ ಜು. 7ರಂದು ‘ತುಳು ಸಿರಿ ತುದೆ ಬರಿ’ ಯುವಕರಿ ಗೊಂದು ಕೃಷಿ ಪಾಠ ಕಾರ್ಯಕ್ರಮಕ್ಕೆ ಪಾವಂಜೆಯ ನಿನಾದ ರಂಗ ಮಂದಿರದ ಆವರಣದ ರಾಮಪ್ಪ ಪೂಜಾರಿ ಕಟ್ಟಪುಣಿಯ ನಂದಿನಿ ತಟದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಕುಡ್ಲ ತುಳು ಕೂಟದ ಅಧ್ಯಕ್ಷ ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್‌ ಅವರು ಭೂಮಿ ಪೂಜೆ ನೆರವೇರಿಸಿದರು.

ಎಂ.ಆರ್‌.ಪಿ.ಎಲ್ನ ಹಿರಿಯ ಪ್ರಬಂಧಕಿ ವೀಣಾ ಟಿ. ಶೆಟ್ಟಿ, ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಶಿವಶಂಕರ ಭಟ್, ನಿನಾದ ಚಾರಿಟೆಬಲ್ ಟ್ರಸ್ಟ್‌ನ ಕಡಂಬೋಡಿ ಮಹಾಬಲ ಪೂಜಾರಿ, ಹಳೆಯಂಗಡಿ ಗ್ರಾ. ಪಂ. ಅಧ್ಯಕ್ಷೆ ಜಲಜಾ, ಮೂಡಾದ ಮಾಜಿ ಸದಸ್ಯ ಎಚ್. ವಸಂತ ಬೆರ್ನಾರ್ಡ್‌, ಕಾರ್ಯಕ್ರಮ ಸಂಯೋಜಕ ಕೆ.ಕೆ.ಪೇಜಾವರ, ವಿಜಯ ಕುಮಾರ್‌ ಕುಬೆವೂರು, ಸಂಚಾಲಕ ಯಶೋಧರ ಸಾಲ್ಯಾನ್‌ ಮತ್ತು ಭಾಸ್ಕರ ಸಾಲ್ಯಾನ್‌, ಯೋಜನಾಧಿಕಾರಿಗಳಾದ ಪ್ರತೀಕ್ಷಾ ಮತ್ತು ಪೂರ್ಣಿಮಾ ಗೋಖಲೆ, ಸಂಪನ್ಮೂಲ ವ್ಯಕ್ತಿಗಳಾದ ಪ್ರೊ| ಅರ್ಪಿತಾ ಶೆಟ್ಟಿ ಪಕ್ಷಿಕೆರೆ, ಚಂದ್ರಶೇಖರ ನಾನಿಲ್, ಡಾ| ಗಣೇಶ್‌ ಅಮೀನ್‌ ಸ‌ಂಕಮಾರ್‌ , ಜಯಂತಿ ಸಂಕಮಾರ್‌ಮತ್ತಿತರರು ಉಪಸ್ಥಿತರಿದ್ದರು.

ಮಾಜಿ ಸಚಿವ ಅಭಯಚಂದ್ರ ಜೈನ್‌ ನೇಜಿ ತುಂಬಿದ ಬುಟ್ಟಿಯನ್ನು ಡಾ| ಗಣೇಶ್‌ ಅಮೀನ್‌ ಸಂಕಮಾರ್‌ ರವರ ತಲೆಗೇರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ನೇಜಿ ನೆಡುವ ವಿಧಾನ ಹಾಗೂ ತುಳು ಪಾಡ್ದನದ ಬಗ್ಗೆ ಮಾಹಿತಿ, ವಿಕಲ ಚೇತನ ದುರ್ಗಾದಾಸ್‌ ಅಮೀನ್‌ ಸಂಕಮಾರ್‌ರವರ ಹುಟ್ಟು ಹಬ್ಬವನ್ನು ತುಳು ಸಂಪ್ರದಾಯದಂತೆ ಆಚರಿಸಲಾಯಿತು. ಹಿರಿಯ ಕೃಷಿಕರಾದ ವಸಂತಿ ದೇವಾಡಿಗರನ್ನು ಸಮ್ಮಾನಿಸಲಾಯಿತು. ಚಂದ್ರಶೇಖರ ನಾನಿಲ್ ಮತ್ತು ಜಯಶ್ರೀ ನಾನಿಲ್ ದಂಪತಿಯನ್ನು ಗೌರವಿಸಲಾಯಿತು.

ಸಮ್ಮಾನ

Udayavani is now on Telegram. Click here to join our channel and stay updated with the latest news.

Next