Advertisement
ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರಉದ್ಯೋಗ, ಸಾಮಾಜಿಕ ರಕ್ಷಣೆ, ಸಾಮಾಜಿಕ ಸಂವಾದ ಮತ್ತು ಮೂಲಭೂತ ತತ್ತÌಗಳು ಹಾಗೂ ಕೆಲಸದಲ್ಲಿ ಹಕ್ಕುಗಳ ಮೂಲಕ ಎಲ್ಲರಿಗೂ ನ್ಯಾಯಯುತ ಫಲಿತಾಂಶಗಳನ್ನು ಈ ಆಚರಣೆ ಖಾತರಿಪಡಿಸುತ್ತದೆ. ಪ್ರತೀ ಸಮಾಜದಲ್ಲಿಯೂ ಏಕತೆ, ಸಾಮರಸ್ಯ, ಸೌಹಾರ್ದತೆ, ಮಾನವ ಹಕ್ಕುಗಳ ನ್ಯಾಯವಿದ್ದರೆ ಅಭಿವೃದ್ಧಿ ಸುಲಭ ಸಾಧ್ಯ.
ಜಗತ್ತಿನಾದ್ಯಂತ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಲೇ ಸಾಗಿದೆ. ದೇಶದ ಪ್ರಜೆಗಳಿಗೆ ಉದ್ಯೋಗ, ಶಿಕ್ಷಣ, ಆರ್ಥಿಕ, ರಾಜಕೀಯ ಅವಕಾಶಗಳು ಜಾತಿ-ಮತ ಭೇದಗಳಿಲ್ಲದೆ ಸಮಾನವಾಗಿ ಹಂಚಿಕೆಯಾಗಬೇಕು. ಅವಕಾಶ ವಂಚಿತರನ್ನು, ಅಂಚಿಗೆ ತಳ್ಳಲ್ಪಟ್ಟವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಇನ್ನಷ್ಟು ಹೆಚ್ಚಿನ ಪ್ರಯತ್ನಗಳಾಗಬೇಕು. ಜಾಗತಿಕ ಒಗ್ಗಟ್ಟಿನ ಶಕ್ತಿಯನ್ನು ಎತ್ತಿ ಹಿಡಿಯುವುದೇ ವಿಶ್ವ ಸಾಮಾಜಿಕ ನ್ಯಾಯ ದಿನದ ಮೂಲ ಧ್ಯೇಯವಾಗಿದೆ. ಪರಸ್ಪರ ಸಹಕಾರ
ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಉದ್ಯೋಗ, ಸಾಮಾಜಿಕ ಭದ್ರತೆ, ಲಿಂಗ ಸಮಾನತೆ ಮತ್ತು ಸಾಮಾಜಿಕ ಸಮಾನತೆಯ ಎಲ್ಲ ಹಕ್ಕುಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸುವುದು ವಿಶ್ವದ ಮುಂದಿರುವ ಬಹುಮುಖ್ಯ ಸವಾಲಾಗಿದೆ. ಈ ಸವಾಲನ್ನು ಎದುರಿಸುವ ನಿಟ್ಟಿನಲ್ಲಿ ಎಲ್ಲ ರಾಷ್ಟ್ರಗಳು ಪರಸ್ಪರ ಕೈಜೋಡಿಸಿ ಶ್ರಮಿಸಬೇಕಿದೆ.