Advertisement

ವೈದ್ಯರು ಮಾನವೀಯತೆ ಮೈಗೂಡಿಸಿಕೊಳ್ಳಲಿ

04:42 PM Aug 22, 2021 | Team Udayavani |

ಬೀದರ: ಶಿಕ್ಷಣ ಎಂದರೆ ಕೇವಲ ಜ್ಞಾನವಲ್ಲ. ಜ್ಞಾನದಜೊತೆಗೆ ಮಾನವೀಯತೆ, ಸಹಕಾರ ಮತ್ತು ಪ್ರೀತಿವಾತ್ಸಲ್ಯ ಇತರರಿಗೆ ತೋರಿಸುವುದಾಗಿದೆ. ಭವಿಷ್ಯದವೈದ್ಯರಾದ ನೀವುಗಳು ಇವುಗಳನ್ನು ಮೈಗೂಡಿಸಿಕೊಂಡುಉತ್ತಮ ಸೇವೆ ಸಲ್ಲಿಸಬೇಕೆಂದು ಕೇಂದ್ರದ ಮಾಜಿ ಸಚಿವಶಿವರಾಜ ಪಾಟೀಲ ಚಾಕೂರಕರ್‌ ಹೇಳಿದರು.

Advertisement

ನಗರದ ಎನ್‌.ಕೆ ಜಾಬಶೆಟ್ಟಿ ಆಯುರ್ವೇದಿಕ್‌ಮೆಡಿಕಲ್‌ ಕಾಲೇಜು ಹಾಗೂ ಸಿದ್ಧಾರೂಢಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ನಗರದ ಸಿದ್ಧಾರೂಢಧರ್ಮಾರ್ಥ ಆಸ್ಪತ್ರೆಯಲ್ಲಿ ನಡೆದ ಪದವಿ ಮುಗಿಸಿದವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯರು ಎಂದರೆ ದೇವರಿಗೆ ಸಮಾನ ಎಂಬಮಾತಿದೆ. ಆ ನಿಟ್ಟಿನಲ್ಲಿ ಇಂದಿನ ವೈದ್ಯರು ಬದುಕಲುಪ್ರಯತ್ನ ಮಾಡಬೇಕು. ಕಾಲೇಜಿನ ಶಿಸ್ತುಬದ್ಧವಾತಾವರಣ, ಬಹುತೇಕ ಮಹಿಳೆಯರು ಹೆಚ್ಚು ಪದವಿಪಡೆದಿರುವುದು ಸಂತಸ ತಂದಿದೆ. ವೈದ್ಯರು ಎಂದರೆತ್ಯಾಗಮೂರ್ತಿಗಳು. ರೋಗಿಯ ಜೀವ ಕಾಪಾಡುವಲ್ಲಿಅವರ ಪಾತ್ರ ಪ್ರಮುಖವಾಗಿದೆ ಎಂದರು.ಕೇಂದ್ರ ನವೀಕರಿಸಬಹುದಾದ ಇಂಧನ ಮೂಲಹಾಗೂ ರಾಸಾಯನಿಕ ರಸಗೊಬ್ಬರ ಖಾತೆಯ ರಾಜ್ಯಸಚಿವ ಭಗವಂತ ಖೂಬಾ ಮಾತನಾಡಿ, ಆಯುರ್ವೇದಪದ್ಧತಿಯನ್ನು ವಿಶ್ವಕ್ಕೆ ಪರಿಚಯಿಸಿದ್ದು ಭಾರತ ದೇಶ.ಪ್ರಧಾನಿ ಮೋದಿಯವರ ಯೋಜನೆಯಾದ ಜನೌಷ ಧಿಕೇಂದ್ರದ ಮೂಲಕ ರೋಗಿಗಳಿಗೆ ಕಡಿಮೆ ದರದಲ್ಲಿಔಷಧ ವಿತರಣೆ ಮಾಡಲಾಗುತ್ತಿದೆ ಎಂದರು.

ಪ್ರಾಚಾರ್ಯ ಡಾ| ಎ.ಆರ್‌.ವಿ ಮೂರ್ತಿ ಮಾತನಾಡಿ,ರೋಗಿಯ ನೋವು ಅರ್ಥಮಾಡಿಕೊಂಡವನೇನಿಜವಾದ ವೈದ್ಯ. ರೋಗಿಗೆ ಭಯಪಡಿಸದೆ ಸೂಕ್ತಚಿಕಿತ್ಸೆ ನೀಡಿ ಧೈರ್ಯ ತುಂಬಬೇಕು. ವೈದ್ಯರಾದವರುಸಂಪೂರ್ಣ ಜ್ಞಾನ ಪಡೆಯಬೇಕು. ರೋಗಿಗಳಿಗೆಧನಾತ್ಮಕ ವಿಚಾರ ಕುರಿತು ತಿಳಿಸಿ, ರೋಗ ಗುಣಮುಖಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಇದುವೇನಿಜವಾದ ವೈದ್ಯರ ಕರ್ತವ್ಯ ಎಂದು ಹೇಳಿದರು.

ಇದೇ ವೇಳೆ ವಿದ್ಯಾರ್ಥಿಗಳಿಗೆ ಪದವಿ ಪ್ರದಾನಮಾಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಡಾ|ಚನ್ನಬಸಪ್ಪ ಹಾಲಹಳ್ಳಿ, ಬಸವರಾಜ ಜಾಬಶೆಟ್ಟಿ,ಪ್ರಭುಶೆಟ್ಟಿ ಮುದ್ದಾ, ಡಾ| ವಿ.ಎಸ್‌. ಪಾಟೀಲ, ಬಿ.ಜಿ.ಶೆಟಕಾರ, ಡಾ| ಚಂದ್ರಕಾಂತ ಹಳ್ಳಿ, ಡಾ| ಬ್ರಹ್ಮಾನಂದಸ್ವಾಮಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next