Advertisement

ಧ್ರುವ ಮತ್ತೆ ನಂ.1 ಸಂಸದರಾಗಲಿ

09:40 PM Jul 31, 2019 | Team Udayavani |

ಚಾಮರಾಜನಗರ: ಮಾಜಿ ಸಂಸದ ಆರ್‌. ಧ್ರುವನಾರಾಯಣ ಮತ್ತೆ ಸಂಸದರಾಗಿ ರಾಜ್ಯ, ದೇಶದಲ್ಲಿ ನಂಬರ್‌ಒನ್‌ ಸಂಸದರಾಗುತ್ತಾರೆ ಎಂದು ನಗರದ ನಳಂದ ಬೌದ್ಧ ವಿಶ್ವವಿದ್ಯಾನಿಲಯದ ಬೋಧಿದತ್ತ ಬಂತೇಜಿ ಹೇಳಿದರು.

Advertisement

ನಗರದ ಶಿವಕುಮಾರಸ್ವಾಮಿ ಭವನದಲ್ಲಿ ಆರ್‌.ಧ್ರುವನಾರಾಯಣ ಅಭಿಮಾನಿ ಬಳಗ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಕೊಯಮ್ಮತ್ತೂರು ಅರವಿಂದ ಕಣ್ಣಾಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಆರ್‌.ಧ್ರುವನಾರಾಯಣ ಅವರ 58ನೇ ಜನ್ಮದಿನದ ಪ್ರಯುಕ್ತ ಬೃಹತ್‌ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಕೇಂದ್ರೀಯ ವಿದ್ಯಾಲಯದಲ್ಲಿ 58 ಸಸಿಗಳನ್ನು ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಂದು ಪುಣ್ಯದ ಕೆಲಸ: ಮಾಜಿ ಸಂಸದ ಧ್ರುವನಾರಾಯಣ ಅವರ 58ನೇ ವರ್ಷದ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳ ಬಳಗ ದಾನ ಕಾರ್ಯಕ್ರಮಗಳ ಮೂಲಕ ಆಚರಣೆ ಮಾಡುತ್ತಿರುವುದು ಮಾದರಿಯಾಗಿದೆ. ದಾನದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ. ಕಣ್ಣಿನ ತಪಾಸಣೆ ಶಿಬಿರ, ಸಸಿ ನೆಡುವ ಕಾರ್ಯಕ್ರಮ ಒಂದು ಪುಣ್ಯದ ಕೆಲಸ ಎಂದು ಪ್ರಶಂಸಿದಿರು.

ಜನರ ಕಷ್ಟಗಳಿಗೆ ಸ್ಪಂದಿಸಿದ ಧ್ರುವ: ಸರಳ, ಸಜ್ಜನಿಕೆಯ ಆರ್‌.ಧ್ರುವನಾರಾಯಣ ಅವರ ಹತ್ತಿರ ಯಾರೇ ವ್ಯಕ್ತಿ ಬರಲಿ ಅವರಿಗೆ ಸ್ಪಂದಿಸುತ್ತಿದ್ದರು. ಬೆಳಗ್ಗೆಯಿಂದ ರಾತ್ರಿ 11 ಗಂಟೆಯ ತನಕ ಕ್ಷೇತ್ರದ ಅಭಿವೃದ್ಧಿ, ಜನರ ಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದರು. ಅವರು ಮುಂದಿನ ದಿನಗಳಲ್ಲಿ ಮತ್ತೆ ಗೆದ್ದು ಸಂಸದರಾಗಿ, ಕೇಂದ್ರ ಸಚಿವರಾಗಿ ಜಿಲ್ಲೆ ಅಭಿವೃದ್ಧಿ ಪಡಿಸಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೋಲು- ಗೆಲುವು ಸಮಾನವಾಗಿ ಸ್ವೀಕರಿಸಿ: ಹರವೆ ವಿರಕ್ತಮಠದ ಸರ್ಪಭೂಷಣ ಸ್ವಾಮೀಜಿ ಮಾತನಾಡಿ, ಎಂ.ರಾಜಶೇಖರಮೂರ್ತಿ ಶಿಷ್ಯರಾಗಿ ಬೆಳೆದ ಆರ್‌.ಧ್ರುವನಾರಾಯಣ ಅವರು 2 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದರೂ ಕೂಡ ಚುನಾವಣೆಯಲ್ಲಿ ಕ್ಷೇತ್ರ ಅವರ ಕೈ ತಪ್ಪಿದೆ. ಆದರೆ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಅವರನ್ನು ನೆನೆಯುವಂತೆ ಮಾಡಿದೆ. ರಾಜಕಾರಣದಲ್ಲಿ ಸೋಲು- ಗೆಲುವವನ್ನು ಸಮಾನವಾಗಿ ಸ್ವೀಕರಿಸಬೇಕಿದೆ ಎಂದರು.

Advertisement

ಧ್ರುವ ಸೋತ್ತಿದ್ದು ಜನರ ಸೋಲು: ಲೇಖಕ ವಡ್ಡಗೆರೆ ಚಿನ್ನಸ್ವಾಮಿ ಮಾತನಾಡಿ, ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಕ್ಷೇತ್ರದ ಅಭಿವೃದ್ಧಿಯಲ್ಲಿ ದೇಶದಲ್ಲಿ 4 ನೇ ಸ್ಥಾನ ಪಡೆದು ರಾಜ್ಯದಲ್ಲಿ ನಂಬರ್‌ ಒನ್‌ ಆಗಿದ್ದ ಧ್ರುವನಾರಾಯಣ ಅವರ ಸೋಲು ಕ್ಷೇತ್ರದ ಅಭಿವೃದ್ಧಿಯ ಸೋಲು, ಜನರ ಸೋಲೇ ಹೊರತು ಅವರ ಸೋಲಲ್ಲ ಎಂದರು.

ಜಿಲ್ಲೆಯ ಅಭಿವೃದ್ಧಿ ಈಗ ಮರೀಚಿಕೆ: ಧ್ರುವ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿಯನ್ನು ಜನರಿಗೆ ಮನವರಿಕೆ ಮಾಡದೇ ಇರುವುದು ಅವರ ಸೋಲಿಗೆ ಕಾರಣವಾಗಿದೆ. ಎಚ್‌.ಎಸ್‌.ಮಹದೇವಪ್ರಸಾದ್‌ ಹಾಗೂ ಧ್ರುವನಾರಾಯಣ್‌ ನಂತರ ಜಿಲ್ಲೆಯಲ್ಲಿ ಇಡೀ ಜಿಲ್ಲೆ ಅಭಿವೃದ್ಧಿ ಕನಸು ಕಾಣುವ ರಾಜಕಾರಣಿ ಇಲ್ಲ ಎಂದು ವಿಷಾದಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ.ಮರಿಸ್ವಾಮಿ, ಸಿಎಸ್‌ಐ ಚರ್ಚ್‌ ವಲಯ ಅಧ್ಯಕ್ಷೆ ಉಷಾ ಕ್ಲೆಮೆನ್ಸಿಯಾ, ಎ.ರಹಮತ್‌ ಮಸೀದಿಯ ಮೌಲ್ವಿ ಮೌಲಾನ ಸಮೀವುಲ್ಲಾ, ಮಾಜಿ ಶಾಸಕ ಎಸ್‌. ಬಾಲರಾಜ್‌ ಮಾತನಾಡಿದರು. ಜಿ.ಪಂ.ಅಧ್ಯಕ್ಷೆ ಶಿವಮ್ಮಕೃಷ್ಣ, ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌, ಸದಸ್ಯರಾದ ಕೆ.ಪಿ.ಸದಾಶಿವಮೂರ್ತಿ, ಕೆರೆಹಳ್ಳಿನವೀನ್‌, ಚೆನ್ನಪ್ಪ, ಉಮಾವತಿ ಸಿದ್ದರಾಜು, ಮಾಜಿ ಉಪಾಧ್ಯಕ್ಷ ಯೋಗೇಶ್‌, ತಾ.ಪಂ.ಮಾಜಿ ಅಧ್ಯಕ್ಷ ಎಚ್‌.ವಿ.ಚಂದ್ರು, ಕಾಂಗ್ರೆಸ್‌ ಮುಖಂಡರಾದ ಗಣೇಶ್‌ಪ್ರಸಾದ್‌, ಎಸ್‌.ಸೋಮನಾಯಕ,

ಶಿವಕುಮಾರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಮಹಮ್ಮದ್‌ಅಸರ್‌, ಗುರುಸ್ವಾಮಿ, ಚೂಡಾ ಮಾಜಿ ಅಧ್ಯಕ್ಷರಾದ ಸುಹೇಲ್‌ಖಾನ್‌, ಸೈಯದ್‌ರಫೀ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಿ.ಕೆ.ರವಿಕುಮಾರ್‌, ಆಲ್ದೂರುರಾಜಶೇಖರ್‌, ಅಭಿಮಾನಿ ಬಳಗದ ಅಧ್ಯಕ್ಷ ಕಾಗಲವಾಡಿಚಂದ್ರು, ಪ್ರಧಾನ ಕಾರ್ಯದರ್ಶಿ ಹೊಮ್ಮನಾಗನಾಯಕ, ಡಿ.ಪಿ.ಪ್ರಕಾಶ್‌ ಇತರರು ಇದ್ದರು.

44 ಜನರಿಂದ ಸ್ವಯಂ ಪ್ರೇರಿತ ರಕ್ತದಾನ: ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ನಳಂದ ಬೌದ್ಧ ವಿಶ್ವವಿದ್ಯಾಲಯದ ಬೋಧಿದತ್ತ ಬಂತೇಜಿ ಸೇರಿದಂತೆ 44 ಮಂದಿ ರಕ್ತದಾನ ಮಾಡಿದರು. ಕಣ್ಣಿನ ತಪಾಸಣೆ ಶಿಬಿರದಲ್ಲಿ 700 ಮಂದಿ ಭಾಗವಹಿಸಿದ್ದು, 120 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದು, ಅವರಿಗೆಲ್ಲ ಕೊಯಮತ್ತೂರಿನ ಅರವಿಂದ ಕಣ್ಣಾಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ.

58 ಸಸಿ ನೆಟ್ಟರು: ವೇದಿಕೆ ಸಮಾರಂಭಕ್ಕೂ ಮುನ್ನ ಮಾದಾಪುರದಲ್ಲಿರುವ ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ಆರ್‌.ಧ್ರುವನಾರಾಯಣ್‌ ಅವರ 58ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ 58 ಸಸಿಗಳನ್ನು ನೆಡಲಾಯಿತು. ಇದೇ ಸಂದರ್ಭದಲ್ಲಿ ಪರಿಸರಪ್ರೇಮಿ ಸಿ.ಎ.ವೆಂಕಟೇಶ್‌ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next