Advertisement

ಶ್ರದ್ಧಾ ಕೇಂದ್ರಗಳು ಸಹಿಷ್ಣುತೆಯ ಪಾಠ ಶಾಲೆಯಾಗಲಿ

01:35 AM May 14, 2024 | Team Udayavani |

ಬೆಳ್ತಂಗಡಿ: ರಾಜಕೀಯ ಉದ್ದೇಶಕ್ಕಾಗಿ ಯುವಜನರನ್ನು ಪ್ರಚೋದಿಸುವ ಕಾರ್ಯ ಕೆಲವು ಸ್ವಾರ್ಥ ರಾಜಕಾರಣಿಗಳಿಂದ ಆಗುತ್ತಿದೆ. ಅಂಥವರಿಂದ ಹಿಂದೂ, ಮುಸಲ್ಮಾನ ಯುವಜನರನ್ನು ರಕ್ಷಿಸುವ ಕೆಲಸ ಆಗಬೇಕು. ಧರ್ಮದ ಅನುಷ್ಠಾನ ಮತ್ತು ಪರ ಧರ್ಮದ ಮೇಲಿನ ಗೌರವ ಪಾಲಿಸೋಣ. ಆ ನಿಟ್ಟಿನಲ್ಲಿ ಎಲ್ಲ ಧರ್ಮಗಳ ಶ್ರದ್ಧಾ ಕೇಂದ್ರಗಳು ಸಹಿಷ್ಣುತೆಯ ಪಾಠ ಶಾಲೆಗಳಾಗಬೇಕು ಎಂದು ಕರ್ನಾಟಕ ವಕ್ಫ್ ಮಂಡಳಿ ನಿಕಟಪೂರ್ವ ರಾಜ್ಯಾಧ್ಯಕ್ಷ ಮೌಲಾನಾ ಶಾಫಿ ಸಅದಿ ಹೇಳಿದರು.

Advertisement

ದಕ್ಷಿಣ ಭಾರತದ ಅಜ್ಮಿರ್‌ ಎಂದೇ ಪ್ರಖ್ಯಾತಿ ಪಡೆದಿರುವ ನಾಡಿನ ಸರ್ವ ಧರ್ಮೀಯ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್‌ನ 2024ನೇ ಸಾಲಿನ ಉರೂಸ್‌ ಪ್ರಯುಕ್ತ ರವಿವಾರ ರಾತ್ರಿ ಸರ್ವ ಧರ್ಮೀಯ ಸೌಹಾರ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತಿಹಾಸವನ್ನು ಇತಿಹಾಸವಾಗಿಯೇ ಹೇಳಿಕೊಡಬೇಕು. ಇತರ ಧರ್ಮವನ್ನು ದೂಷಿಸುವ ವ್ಯವಸ್ಥೆ ಸಮಾಜದ ಬೆಳವಣಿಗೆಗೆ ಧಕ್ಕೆ ತರುತ್ತದೆ. ಕರಾವಳಿ ಜಿಲ್ಲೆ ಶೈಕ್ಷಣಿಕ ಪ್ರಗತಿಯಲ್ಲಿ ಮೇಲು ಸ್ಥರದಲ್ಲಿರುವುದು ಸಂತೋಷ. ಆದರೆ ಕೋಮುವಾದದಲ್ಲೂ ಮುಂದಿರುವುದು ಖೇದಕರ. ದುಷ್ಕೃತ್ಯವನ್ನು ಕೃತ್ಯವಾಗಿ ಕಾಣಬೇಕೇ ಹೊರತು ಅದಕ್ಕೂ ಧರ್ಮದ ಲೇಪ ಸಲ್ಲದು ಎಂದರು.

ಕಾಜೂರು ಉರೂಸ್‌ ಸಮಿತಿ ಅಧ್ಯಕ್ಷ ಕೆ.ಯು.ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು.ಪ್ರಮುಖ ಧಾರ್ಮಿಕ ಸಂದೇಶ ನೀಡಿದ ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಮುರಳಿಕೃಷ್ಣ ಇರ್ವತ್ರಾಯ, ಸಾಮರಸ್ಯ ಮತ್ತು ಭಾವೈಕ್ಯ ಭಾರತದ ಹೆಗ್ಗುರುತು. ಶ್ರೀ ಕ್ಷೇತ್ರ ಧರ್ಮಸ್ಥಳ, ಕಾಜೂರು ಕ್ಷೇತ್ರ, ಕ್ರೈಸ್ತ ಧರ್ಮದ ಡಯಾಸಿಸ್‌, ಬಸದಿ ಇತ್ಯಾದಿಗಳಿಂದ ಕೂಡಿದ ನಮ್ಮ ಬೆಳ್ತಂಗಡಿ ತಾಲೂಕು ಹೆಮ್ಮೆಯ ಕೇಂದ್ರ. ದೇಹ ಅಂದರೆ ಮನುಷ್ಯ -ಮಾನವೀಯತೆ. ದೇಶ ಎಂದರೆ ಭಾರತೀಯತೆ ಎಂಬುದನ್ನು ಅರಿಯೋಣ ಎಂದರು.

ಪ್ರಮುಖ ಸಂದೇಶ ಭಾಷಣಕಾರರಾಗಿದ್ದ ಮೌಲಾನಾ ಅಝೀಝ್ ದಾರಿಮಿ ಶುಭ ಹಾರೈಸಿದರು. ವಕ್ಫ್ ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ದುಲ್‌ ನಾಸಿರ್‌ ಲಕ್ಕಿಸ್ಟಾರ್‌, ಡಾ| ಅಬ್ದುರ್ರಶೀದ್‌ ಝೈನಿ ಸಖಾಫಿ, ಮಿತ್ತಬಾಗಿಲು ಗ್ರಾ.ಪಂ. ಪಿಡಿಒ ಮೋಹನ್‌ ಬಂಗೇರ, ಮೈಮೂನ ಫೌಂಡೇಶನ್‌ ಮುಖ್ಯಸ್ಥ ಆಸಿಫ್‌ ಶುಭ ಕೋರಿದರು.

Advertisement

ಕಾಜೂರು ಕಿಲ್ಲೂರು ಧರ್ಮಗುರುಗಳಾದ ಶಂಶೀರ್‌ ಸಖಾಫಿ, ತೌಸೀಫ್‌ ಸಅದಿ, ಸಹಕಾರಿ ಧುರೀಣ ಲಕ್ಷ್ಮಣ ಗೌಡ ಬಂಗಾಡಿ, ಯು.ಕೆ.ಮುಹಮ್ಮದ್‌ ಹನೀಫ್‌ ಉಜಿರೆ, ನೂರುದ್ದೀನ್‌ ಸಾಲ್ಮರ, ಹನೀಫ್‌ ಮಲ್ಲೂರು, ರಹೀಮ್‌ ಮಲ್ಲೂರು, ಅಬ್ದುಶುಕೂರ್‌ ಉಜಿರೆ, ಕಾಸಿಂ ಮಲ್ಲಿಗೆಮನೆ, ಬಿ.ಎ.ಯೂಸುಫ್‌ ಶರೀಫ್‌, ಇಬ್ರಾಹಿಂ ಮದನಿ, ಕೆ.ಯು.ಉಮರ್‌ ಸಖಾಫಿ, ಎಚ್‌. ಮುಹಮ್ಮದ್‌ ವೇಣೂರು, ಸಮದ್‌ ಸೋಂಪಾಡಿ, ಬಿ.ಎ. ನಝೀರ್‌ ಬೆಳ್ತಂಗಡಿ, ಮುಸ್ತಫ ರೂಬಿ, ಬಶೀರ್‌ ಸವಣೂರು, ಅಬ್ದುಲ್‌ ರಝಾಕ್‌ ಸವಣೂರು, ಸಿರಾಜ್‌ ಬೈಕಂಪಾಡಿ, ಸೈದುದ್ದೀನ್‌, ನಾಸಿರ್‌ ಕುಂಬ್ರ, ಉಮರ್‌ ಮುಸ್ಲಿಯಾರ್‌ ಕೇರಿಮಾರ್‌, ಡಾ| ಆಲ್ಬಿನ್‌, ಕಬೀರ್‌ ಕಾಜೂರು, ಝಕರಿಯಾ ಹಾಜಿ ಆತೂರು ಇತರರು ಉಪಸ್ಥಿತರಿದ್ದರು. ಅಶ್ರಫ್‌ ಆಲಿಕುಂಞಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next