Advertisement

ಭಕ್ತರು ಸಂಯಮ ಕಾಪಾಡಲಿ

01:46 PM Dec 19, 2017 | |

ಬೆಳಗಾವಿ: ಶ್ರೀ ಅಯ್ಯಪ್ಪ ಮಾಲಾಧಾರಿಗಳು ಜೀವನದಲ್ಲಿ ಶಿಸ್ತು, ಸಂಯಮ ಕಾಪಾಡಿಕೊಳ್ಳಬೇಕು ಎಂದು ಹಿರಿಯ ನಟ ಶಿವರಾಂ ಗುರುಸ್ವಾಮಿ ಸಲಹೆ ನೀಡಿದರು. ನಗರದ ಮಹಾದ್ವಾರ ರಸ್ತೆಯಲ್ಲಿರುವ ಸಂಭಾಜಿ ಉದ್ಯಾನವನದಲ್ಲಿ ಸೋಮವಾರ ನಡೆದ ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ಜಿಲ್ಲಾ ಘಟಕ ಉದ್ಘಾಟನೆ, ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಹಾಗೂ
ಅನ್ನಪ್ರಸಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಅಯ್ಯಪ್ಪ ಸ್ವಾಮಿಯನ್ನು ಒಲಿದುಕೊಳ್ಳಲು ಪ್ರತಿಯೊಬ್ಬರೂ ಸ್ವತ್ಛತೆ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ನಿರ್ಮಲವಾದ ಮನಸ್ಸಿನಿಂದ ವೃತ ಆಚರಿಸಿ ಅಯ್ಯಪ್ಪನನನ್ನು ನೆನೆಸಿಕೊಂಡರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಎಂದರು.

Advertisement

ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಸ್ವಚ್ಛತಾ ಅಭಿಯಾನ ನಡೆಸಬೇಕು. ಅಯ್ಯಪ್ಪನನ್ನು ಒಲಿಸಿಕೊಳ್ಳಲು ತಮಗೆ ಕೈಲಾದಷ್ಟು ಅನ್ನದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಹಸಿದವರಿಗೆ ಅನ್ನ ನೀಡಿ ಪುಣ್ಯ ಪಡೆದುಕೊಳ್ಳಬೇಕು. ಅನ್ನದಾನ ಎಲ್ಲ ದಾನಕ್ಕಿಂತಲೂ ಶ್ರೇಷ್ಟ ದಾನವಾಗಿದೆ ಎಂದರು. ಅಯ್ಯಪ್ಪ ಮಾಲಾಧಾರಿಗಳು ವೃತ ಪಾಲಿಸುವಾಗ ಕೈಗೊಳ್ಳಬೇಕಾದ ನಿಯಮಗಳು, ಶುದ್ಧ ಮನಸ್ಸಿನಿಂದ ಭಜನೆ ಮಾಡುವುದು, ವೃತ ಕೈಗೊಂಡಾಗ ಪಾಲಿಸುವಾಗ ಹೇಗೆ ಕಟ್ಟುನಿಟ್ಟಾಗಿ ಇರುತ್ತೆವೆಯೋ ಅದೇ ರೀತಿ ನಮ್ಮ ಮುಂದಿನ ಜೀವನದಲ್ಲೂ ಈ ಮನೋಭಾವ ರೂಢಿಸಿಕೊಂಡು ಸುಖೀ ಜೀವನ ನಡೆಸಬೇಕು. ಈ ಸಂಘ ನಿರಂತರವಾಗಿ ಸಮಾಜ ಸೇವೆ ಮಾಡುತ್ತ ಮುಂದುವರಿಯಬೇಕು. ಸಂಘಟನೆ ಮೂಲಕ ಸಮಾಜದ ಪ್ರತಿಯೊಬ್ಬರನ್ನೂ ಜಾಗೃತರನ್ನಾಗಿ ಮಾಡಿ ಸಮಾಜ ಪರಿವರ್ತನೆಗೆ ಕೈ ಜೋಡಿಸಬೇಕು. ಸಂಘಟನೆ ಮೂಲಕ ಸ್ವಚ್ಛತೆ, ಆರೋಗ್ಯ ಸುಧಾರಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಬಿಜೆಪಿ ಮುಖಂಡ ಅನಿಲ ಬೆನಕೆ ಮಾತನಾಡಿ, ಬೆಳಗಾವಿ ಎಲ್ಲ ಜಾತಿ, ಭಾಷೆಗಳ ನೆಲೆ ಬೀಡಾಗಿದೆ. ಇದು ಬಹು ಸಂಸ್ಕೃತಿಯ
ಪ್ರದೇಶವಾಗಿದ್ದರಿಂದ ಇಲ್ಲಿ ಉತ್ಸವಗಳಲ್ಲಿಯೂ  ಹೊಸ ಮೆರಗು ಕಾಣುತ್ತೇವೆ. ಇಲ್ಲಿ ಜಾತಿ, ಭಾಷೆ ಭೇದ ಮಾಡದೇ ಎಲ್ಲರನ್ನೂ ಕೈ ಹಿಡಿದು ನಡೆಸಿಕೊಂಡು ಹೋಗಬೇಕಾಗಿದೆ. ಮಾಲಾಧಾರಿಗಳು ವೃತದಲ್ಲಿ ಪಾಲಿಸಿದ ಶಿಸ್ತು, ಪ್ರಾಮಾಣಿಕತೆ ಹೀಗೆಯೇ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌. ಎನ್‌. ಕೃಷ್ಣಯ್ಯ, ಉಪಾಧ್ಯಕ್ಷ ದತ್ತಾತ್ರೇಯ ಶಿಂತ್ರೆ, ಸಂಘಟನಾ ಕಾರ್ಯದರ್ಶಿ ಶಿವಾನಂದ ಬಾರ್ಕಿ, ಕೃಷ್ಣಾ ಗುರುಸ್ವಾಮಿ, ಬೆಳಗಾವಿಯ ದೇವದಾಸ ಶೆಟ್ಟಿ ಗುರುಸ್ವಾಮಿ, ಸುರೇಂದ್ರ ಗುರುಸ್ವಾಮಿ, ವೆಂಕಟೇಶ ಗುರುಸ್ವಾಮಿ, ಅಶೋಕ ಖೋತ, ಶಿವಶಂಕರ ಗುರುಸ್ವಾಮಿ, ಜಿಲ್ಲಾಧ್ಯಕ್ಷ ಮಹಾಂತೇಶ ರಣಗಟ್ಟಿಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next