Advertisement
ಯುವಜನರು ಮತ ಚಲಾಯಿಸಿದ ಬಳಿಕ ವ್ಯಕ್ತಿಯನ್ನು ವೈಭವೀಕರಿಸುವ ಬದಲು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು; ಆಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರಿಯಲು ಸಾಧ್ಯ ಎಂದು ಯುವ ನಾಯಕ ಡಾ| ಕನ್ನಯ್ಯ ಕುಮಾರ್ ಹೇಳಿದರು.
Related Articles
Advertisement
ಬಿಜೆಪಿ ಇರದಿದ್ದರೆ…ಬಿಜೆಪಿ ಇರುವುದರಿಂದಲೇ ಜಾತ್ಯ ತೀತೆಯ ಅರ್ಥ ತಿಳಿಯುವಂತಾಗಿದೆ. ಇಲ್ಲವಾಗಿದ್ದರೆ ಇಂದು ಕೂಡ ದೇಶದಲ್ಲಿ ಹಲವಾರು ಸಮಸ್ಯೆಗಳು ರಾಜಕೀಯ ಪ್ರಶ್ನೆಗಳಾಗುತ್ತಿರಲಿಲ್ಲ. ಈ ಪ್ರಶ್ನೆಗಳಿಂದಾಗಿಯೇ ಜನರು ರಾಜಕೀಯ ವ್ಯಕ್ತಿಗಳ ನೈಜತೆಯನ್ನು ಅರಿಯಲು ಸಾಧ್ಯವಾಗಿದೆ ಎಂದರು. ಡಾ| ಶ್ರೀನಿವಾಸ ಕಕ್ಕಿಲ್ಲಾಯ ಕಾರ್ಯಕ್ರಮ ನಿರ್ವಹಿಸಿದರು. ಡಾ| ವೆಂಕಟಕೃಷ್ಣ ಕಕ್ಕಿಲ್ಲಾಯ ಉಪಸ್ಥಿತರಿದ್ದರು. ಕನ್ನಯ್ಯ ವಿರುದ್ಧ ಘೋಷಣೆ
32 ಮಂದಿ ವಶಕ್ಕೆ
ಮಂಗಳೂರು: ದಿ| ಬಿ.ವಿ. ಕಕ್ಕಿಲ್ಲಾಯ ಅವರ ಜನ್ಮಶತಾಬ್ದ ಸಮಾರಂಭದಲ್ಲಿ ಕನ್ನಯ್ಯ ಕುಮಾರ್ ಭಾಗವಹಿಸುವುದನ್ನು ವಿರೋಧಿಸಿ ಘೋಷಣೆ ಕೂಗಿದ ಹಿಂದೂ ಸಂಘಟನೆಗಳ 32 ಕಾರ್ಯ ಕರ್ತರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು. ಕನ್ನಯ್ಯ ವೇದಿಕೆಗೆ ಆಗಮಿಸು ತ್ತಿದ್ದಂತೆ 2- 3 ಜನ ಕಾರ್ಯಕರ್ತರು ಸಭಾಂಗಣದ ಒಳಗೆ ಪ್ರವೇಶಿಸಿದ್ದರು. ಪೊಲೀಸರು ಅವರನ್ನು ವಶಕ್ಕೆ ಪಡೆದರು. ಇದೇ ವೇಳೆ ಸಭಾಂಗಣದ ಹೊರಗೆ ಜಮಾಯಿಸಿದ್ದ ಕಾರ್ಯಕರ್ತರು ಘೋಷಣೆ ಕೂಗಿದರು. ಪೊಲೀಸರು ಅವರನ್ನೂ ವಶಕ್ಕೆ ಪಡೆದರು.