Advertisement

ಅಂಗನವಾಡಿ ನೌಕರರ ಬೇಡಿಕೆ ಶೀಘ್ರ ಈಡೇರಲಿ: ಸುನಂದಾ

03:12 PM Jun 25, 2022 | Shwetha M |

ವಿಜಯಪುರ: ಸರ್ಕಾರ ಅಂಗನವಾಡಿ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಟ 21 ಸಾವಿರ ರೂ. ಹಾಗೂ ಸಹಾಯಕಿಯರಿಗೆ 10 ಸಾವಿರ ರೂ. ವೇತನ ನೀಡಬೇಕು ಎಂದು ಸಿಐಟಿಯು ಜಿಲ್ಲಾಧ್ಯಕ್ಷೆ ಸುನಂದಾ ನಾಯಕ ಆಗ್ರಹಿಸಿದರು.

Advertisement

ನಗರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ವಿಜಯಪುರ ತಾಲೂಕಿನ 4ನೇ ಸಮ್ಮೇಳನದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಶೀಘ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯೂಟಿ ಜಾರಿಗೊಳಿಸುವುದಕ್ಕಾಗಿ ಅಂಗನವಾಡಿ ನೌಕರರ ಸೇವಾ ನಿಯಮಾವಳಿಗಾಗಿ ಮಿನಿ ಕೇಂದ್ರಗಳನ್ನು ಪೂರ್ಣ ಕೇಂದ್ರವನ್ನಾಗಿ ರೂಪಿಸುವಂತೆ ಆಗ್ರಹಿಸಿದರು.

ಸಮಾರಂಭಕ್ಕೆ ಚಾಲನೆ ನೀಡಿದ ಅಂಗನವಾಡಿ ನೌಕರರ ಸಂಘಟನೆ ರಾಜ್ಯಾಧ್ಯಕ್ಷೆ ಶಾಂತಾ ಘಂಟೆ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸುವುದು ಅಂಗನವಾಡಿ ಕಾರ್ಯಕರ್ತೆಯರಿಗೆ ನೇರವಾಗಿ ಮೇಲ್ವಿಚಾರಕಿ ಹುದ್ದೆ ಮುಂಬಡ್ತಿ ನೀಡಬೇಕು. ಇದಕ್ಕಾಗಿ ಜುಲೈ 26ರಿಂದ 28ರವರೆಗೆ ನವದೆಹಲಿಯಲ್ಲಿ ಹಮ್ಮಿಕೊಂಡಿರುವ ಹೋರಾಟಕ್ಕೆ ವಿಜಯಪುರ ತಾಲೂಕಿನಿಂದ 70 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭಿಮಶಿ ಕಲಾದಗಿ, ಸಂಘಟನೆಯ ಭಾರತಿ ವಾಲಿ, ಅಶ್ವಿ‌ನಿ ತಳವಾರ, ಶೋಭಾ ಕಬಾಡೆ, ದಾನಮ್ಮ ಗುಗ್ಗರಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ಜನವಾದಿ ಮಹಿಳಾ ಸಂಘದ ಅಧ್ಯಕ್ಷೆ ಸುರೇಖಾ ರಜಪೂತ ಇದ್ದರು. ಕಾರ್ಯದರ್ಶಿ ಪೂರ್ಣಿಮಾ ಹಲಗಣಿ, ಖಜಾಂಚಿ ಜಯಶ್ರೀ ಪೂಜಾರಿ, ಗೌರವಾಧ್ಯಕ್ಷೆ ಶೈಲಾ ಕಟ್ಟಿ, ಎಸ್‌. ಎಂ. ಜಮಾದಾರ, ರಾಜೇಶ್ವರಿ ಸಂಖದ, ಗೀತಾ ನಾಯಕ, ವಗ್ಗಾಣವರ, ದೀಪಾ ಚವ್ಹಾಣ, ಸುಮಿತ್ರಾ ಗುಮಾಸ್ತೆ, ಪ್ರೇಮಾ ಚೌಧರಿ, ಅಮೃತ ಕುಲಕರ್ಣಿ, ಶಶಿಕಲಾ ಬಿರಾದಾರ, ಮಹಾದೇವಿ ಚಿಮ್ಮಲಗಿ, ಸಂಗೀತಾ ಲೊಕರೆ, ಸುಲೋಚನಾ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next