Advertisement

ನೀರು ತುಂಬಿದಾಗ ಡ್ಯಾಂ ಉದ್ಘಾಟನೆಯಾಗಲಿ

01:52 PM Jan 06, 2021 | Team Udayavani |

ಕೋಲಾರ: ಯರಗೋಳ್‌ ಡ್ಯಾಂಗೆ ನೀರು ಬಂದರೆ ಮಾತ್ರ ಉದ್ಘಾಟನೆ ಮಾಡಲುಸಾಧ್ಯ, ಬರೀ ಡ್ಯಾಂಗೆ ಉದ್ಘಾಟನೆ ಬೇಕಾಗಿಲ್ಲ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

Advertisement

ಕೋಲಾರ, ಮಾಲೂರು, ಬಂಗಾರಪೇಟೆ ಹಾಗೂ 143 ಹಳ್ಳಿಗಳಿಗೆ ನೀರು ಪೂರೈಸುವಯೋಜನೆಯಾದ ಯರಗೋಳ್‌ ಡ್ಯಾಂಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದಅವರು , ಜನವರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಮುಖಾಂತರಉದ್ಘಾಟನೆ ಮಾಡಲಾಗುವುದು ಎಂದು ಹಿಂದೆ ತಿಳಿಸಲಾಗಿತ್ತು. ಜಿಲ್ಲೆಯಲ್ಲಿ ಸರಿಯಾದಮಳೆಯಾಗದ ಕಾರಣ ಡ್ಯಾಂಗೆ ನೀರಬಂದಿಲ್ಲ, ನೀರು ಬಂದ ನಂತರವೇ ಉದ್ಘಾಟಿಸ ಲಾಗುವುದು. ಇದರ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದರು.

ನೀರಿನ ಸಮಸ್ಯೆಗೆ ಪರಿಹಾರ:

ಯೋಜನೆಯ ಪೂರ್ಣ ಪ್ರಮಾಣದ ಕೆಲಸ ಮುಗಿದಿದ್ದು, ಇನ್ನೂ ಪಂಪ್‌ ಮೋಟಾರ್‌ ಅಳವಡಿಸುವುದು ಬಾಕಿ ಇದೆ. ಕೆಲಸಬಹುಬೇಗವಾಗಿ ನಡೆಯುತ್ತಾ ಇದೆ.ಅಧಿಕಾರಿಗಳು ಟೆಂಡರ್‌ ಪ್ರಕ್ರಿಯೆ ನಂತರಚುರುಕಾಗಿ ಕೆಲಸ ಮಾಡಿದ್ದಾರೆ. ಎತ್ತಿನಹೊಳೆ ಯೋಜನೆಯಲ್ಲಿ ಮಾಕೊಂìಡಯ್ಯಕೆರೆಗೆ ನೀರು ಬರುತ್ತದೆ. ಆ ಕೆರೆ ತುಂಬಿದನಂತರ ಈ ಡ್ಯಾಂಗೆ ನೀರು ಬರುವುದರಿಂದಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಗಳನ್ನುಪರಿಹರಿಸಲು ಸಾಧ್ಯವಾಗುತ್ತದೆ ಎಂದರು.

ಎಚ್‌ಡಿಕೆ ಗುದ್ದಲಿಪೂಜೆ: ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ ಯರಗೋಳ್‌ ಯೋಜನೆಗೆ ಗುದ್ದಲಿಪೂಜೆ ಮಾಡಿದ್ದರು. ಬಹಳಷ್ಟು ವರ್ಷಗಳ ಕಾಲ ಯೋಜನೆ ನನೆ‌ಗುದಿಗೆ ಬಿದ್ದಿತ್ತು. ಜನಪ್ರತಿನಿಧಿಗಳಒತ್ತಡದಿಂದ ಯೋಜನೆ ಅಂತಿಮ ಹಂತಕ್ಕೆತಲುಪಿದೆ. ಆದರೆ ನೀರು ಇಲ್ಲವಾಗಿದ್ದು,ಮಳೆ ನೀರು ಆಶಯವಾಗಿರುವ ಡ್ಯಾಂಗೆಮುಂದಿನ ದಿನಗಳಲ್ಲಿ ಮಳೆ ಬಂದರೆ ಮಾತ್ರ ನೀರು ಕೊಡಲು ಸಾಧ್ಯವಿದೆ ಎಂದರು.

Advertisement

ಜಿಲ್ಲೆಯ ಮೂರು ಪಟ್ಟಣಗಳು ಸೇರಿದಂತೆ ಕೆಲವು ಹಳ್ಳಿಗಳಿಗೆ ನೀರು ಕೊಡಲು ಮೂರು ಬೃಹತ್‌ ಟ್ಯಾಂಕ್‌ಗಳನ್ನು ಪೂರ್ಣಗೊಳಿಸಲಾಗುವುದು. ಯೋಜನೆಗೆಸಂಬಂಧಿಸಿದಂತೆ ಅನೇಕ ಕಡೆಗಳಲ್ಲಿ ಸಣ್ಣಪುಟ್ಟಕೆಲಸಗಳ ನಡೆಯುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳುತ್ತದೆ. ನೀರುಬಂದ ನಂತರ ಉದ್ಘಾಟನೆ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ರಾಕೇಶ್‌, ಯೋಜನೆಯ ಇಂಜಿನಿಯರ್ ಶ್ರೀನಿವಾಸರೆಡ್ಡಿ ಸೇರಿದಂತೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next