Advertisement

ಅಧ್ಯಾಪಕರಿಂದ ಸಂವಿಧಾನದ ಆಶಯ ಈಡೇರಲಿ 

12:45 AM May 08, 2022 | Team Udayavani |

ಮಂಗಳೂರು: ಸಂವಿಧಾನದ ಆಶಯಗಳು ಅಧ್ಯಾಪಕರ ಮೂಲಕ ಈಡೇರಬೇಕಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಹೇಳಿದ್ದಾರೆ.

Advertisement

ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯಶಾಸ್ತ್ರ ಅಧ್ಯಾಪಕರ ಸಂಘ (ಮುಕ್ತಾ), ವ್ಯವಸ್ಥಾಪನ ಶಾಸ್ತ್ರ ಅಧ್ಯಾಪಕರ ಸಂಘ, ಮಂಗಳೂರು ವಿ.ವಿ. ವಾಣಿಜ್ಯಶಾಸ್ತ್ರ ಹಾಗೂ ವ್ಯವ ಸ್ಥಾಪನ ಶಾಸ್ತ್ರ ಸ್ನಾತಕೋತ್ತರ ವಿಭಾಗಗಳ ಸಹಯೋಗದೊಂದಿಗೆ ಆಯೋಜಿಸಲಾದ ಎರಡು ದಿನಗಳ 13ನೇ ರಾಜ್ಯ ಮಟ್ಟದ ವಾಣಿಜ್ಯ ಮತ್ತು ವ್ಯವಸ್ಥಾಪನ ಶಾಸ್ತ್ರ ಅಧ್ಯಾಪಕರ ಸಮಾವೇಶವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಭಾವೈಕ್ಯ, ಸಾಮ ರಸ್ಯದ ತಣ್ತೀಗಳನ್ನು ಒಳಗೊಂಡಿರುವ ಜೀವನದ ಶಿಕ್ಷಣ ಕಲಿಸುವುದು ಅಗತ್ಯ. ನೂತನ ಶಿಕ್ಷಣ ನೀತಿ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದರೆ ಅಧ್ಯಾ ಪಕರ ಪಾತ್ರ ಮುಖ್ಯ. ಅಧ್ಯಾಪಕರು ವೇತನ ಪರಿಷ್ಕರಣೆಗಾಗಿ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣ ವಾಗಬಾರದು ಎಂದರು.

ಬಡತನ ದೂರವಾಗಲಿ
ರಾಜ್ಯ ವಾಣಿಜ್ಯ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಕೆ. ಉಲ್ಲಾಸ್‌ ಕಾಮತ್‌ ಅವರು ದಿಕ್ಸೂಚಿ ಭಾಷಣ ಮಾಡಿ, ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ರೂಪಿಸುವ ಶಿಕ್ಷಕರ ಆರ್ಥಿಕ ಸ್ಥಿತಿ ಇನ್ನೂ ಬದಲಾಗಿಲ್ಲ. ಶಿಕ್ಷಕರು ಕೂಡ ಶ್ರೀಮಂತರಾಗಬೇಕು ಎಂದು ಹೇಳಿದರು.

ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ, ಬೆಳಗಾವಿಯ ರಾಣಿ ಚೆನ್ನಮ್ಮ ವಿ.ವಿ. ಕುಲಪತಿ ಪ್ರೊ| ಎಂ. ರಾಮಚಂದ್ರ ಗೌಡ, ಎಫ್ಟಿಸಿಸಿಎಂಕೆ ಅಧ್ಯಕ್ಷ ಚಂದ್ರಶೇಖರ್‌ ಆರ್‌. ಗುಡಸಿ, ಕಾರ್ಯದರ್ಶಿ ಡಾ| ಸಿ.ವಿ. ಕೊಪ್ಪದ್‌, ಸಮಾವೇಶದ ವೈಸ್‌ ಚೇರ್‌ಮನ್‌ ಡಾ| ಪರಮೇಶ್ವರ, ಕಾರ್ಯದರ್ಶಿ ಪ್ರೊ| ಲೂಯಿಸ್‌ ಮನೋಜ್‌, ಕೋಶಾಧಿಕಾರಿ ಪ್ರೊ| ಸ್ಮಿತಾ ಎಂ. ಉಪಸ್ಥಿತರಿದ್ದರು.

Advertisement

“ಮುಕ್ತಾ’ ಅಧ್ಯಕ್ಷ ಪ್ರೊ| ಪಾರ್ಶ್ವ ನಾಥ ಅಜ್ರಿ ಸ್ವಾಗತಿಸಿದರು. ಸಮಾ ವೇಶ ಚೇರ್‌ಮನ್‌ ಪ್ರೊ| ಬಾಲಕೃಷ್ಣ ಪೈ ಪ್ರಸ್ತಾವನೆಗೈದರು. ಎಫ್ಟಿಸಿಸಿಎಂಕೆ ಕೋಶಾಧಿಕಾರಿ ಡಾ| ಎಂ. ಜಯಪ್ಪ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಜ್ಯೋತಿ ಶೆಟ್ಟಿ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next