ಹೊಸವರ್ಷ ಎಂದಾಗ ಎಲ್ಲರಲ್ಲಿಯೂ ಒಂದು ಹುರುಪು, ನವ ಚೈತನ್ಯ ಹಾಗೂ ಸಂತೋಷದಿಂದ ಎಲ್ಲರ ಮನಸ್ಸು ತುಂಬಿರುತ್ತೆ. ಏನೇ ಹೇಳಿದರು ನಮ್ಮ ಮನಸ್ಸು ಬದಲಾಗಬೇಕು, ನಮ್ಮ ಗುಣದಲ್ಲಿ ಬದಲಾವಣೆಗಳಾಗಬೇಕು.
ಪ್ರತಿವರ್ಷದಂತೆ ಈ ವರ್ಷವು ಕೂಡಾ ಹೊಸದಾಗಿ ಹೊಸ ಸಂಖ್ಯೆಯೂ ಕೂಡುತ್ತಿದೆ. ವಿಭಿನ್ನ ರೀತಿಯಲ್ಲಿ,ಹೊಸ ಶೈಲಿಯಲ್ಲಿ ಜನರು ಹೊಸವರ್ಷ ವನ್ನು ಬರಮಾಡಿಕೊಳ್ಳುತ್ತಾರೆ. ಪಟಾಕಿ ಹಚ್ಚಿ, ಕೇಕ್ ಕತ್ತರಿಸಿ, ಹೊಸ ಬಟ್ಟೆ ಧರಿಸಿ, ಚಂದದ ಉಡುಗೊರೆ ಕೊಟ್ಟು, ಸುಂದರವಾಗಿ ಮನೆಯನ್ನು ಅಲಂಕರಿಸಿ, ಸಂಗೀತ ಹಚ್ಚಿ ರಾತ್ರಿ ಪೂರ್ತಿ ಕುಣಿದು- ಕುಪ್ಪಳಿಸಿ ಸಂಭ್ರಮಿಸುತ್ತಾರೆ.
ಇದೆÇÉಾ ಒಳ್ಳೆಯದು ಪ್ರತೀವರ್ಷವು ಕೂಡ ರೆಸುಲ್ಯೂಷನ್ ಬಗ್ಗೆ ಯೋಚಿಸುವುದು ಒಳ್ಳೆಯ ನಿರ್ಧಾರ. ಪ್ರತೀವರ್ಷ ಬರುವುದಕ್ಕಿಂತ ಮುಂಚೆ ಜನರು ದೇವರೇ ಈ ವರ್ಷ ನನ್ನ ಮನಸ್ಸಲ್ಲಿ ನೆನೆಸಿಕೊಂಡಂತಹ ಅಂದುಕೊಂಡಂತಹ ಎಲ್ಲ ವಿಷಯವೂ ಕೂಡ ಸಮಸ್ಯೆಯು ಬಗೆಹರೆಯಲಿ, ಮನೆಯಲ್ಲಿ ಸುಖ- ಶಾಂತಿ ಮುಂದೊರೆಯಲಿ, ಹಣದ ವೃದ್ಧಿಯಾಗಲಿ ಎಂದು ದೇವರ ಬಳಿ ಬೇಡುತ್ತಾರೆ. ಅದಲ್ಲದೆ ಜನರು ಹೊಸ ವರ್ಷದ ದಿನ ಮಾತ್ರ ಒಳ್ಳೆಯದಾಗಿರಬೇಕು ಆಗ ಮಾತ್ರ ಇಡೀ ವರ್ಷವು ಕೂಡ ಉತ್ತಮದಾಗಿರುತ್ತದೆ ಎಂಬ ಮೂಢನಂಬಿಕೆಯಲ್ಲಿ ಜನ ತೆಲಾಡುತ್ತಾರೆ.
ಇದು ತಪ್ಪು ದೇವರ ಬಳಿ ಬೇಡುವ ಮೊದಲು ನಾವು ಮನಸ್ಸಿನಿಂದ ಒಳ್ಳೆಯವರಾಗಿರಬೇಕು, ಸ್ವಾರ್ಥಿಗಳಾಗದೆ ಮನುಷ್ಯತ್ವದಿಂದ ಇರಬೇಕು. ಮಾತು ಸಿಹಿ ಆಗದಿದ್ದರೂ ಮನಸ್ಸು ಸಿಹಿ ಆಗಿರಬೇಕು. ನಮ್ಮ ಆಲೋಚನೆಗಳು, ದೃಷ್ಟಿಕೋನ, ನಂಬಿಕೆ, ವರ್ತನೆ, ನಾವು ಮಾಡುವಂತಹ ಕಾರ್ಯ, ಇವೆಲ್ಲವೂ ಕೂಡ ಉತ್ತಮವಾಗಿರಬೇಕು, ಸಕಾರಾತ್ಮಕ ಆಲೋಚನೆಗಳಿಂದ ಜನರನ್ನು ಗೆಲ್ಲಬೇಕು ಆಗ ಮಾತ್ರ ನಾವು ಒಂದೊಳ್ಳೆಯ ಮನುಷ್ಯನಾಗುತ್ತಾನೆ.
ಆತ ದೇವರೊಂದಿಗೆ ಏನೇ ಬೇಡದಿದ್ದರೂ ಕೂಡ ಆತನ ಜೀವನ ಕೇಸರಿನಲ್ಲಿರುವ ಕಮಲದಂತೆ ಪರಿಶುದ್ಧವಾಗಿರುತ್ತದೆ. ಅದಕ್ಕಾಗಿ ಹಳೆ ವರ್ಷ ಆಗಲಿ ಹೊಸ ವರ್ಷವಾಗಲಿ ಸಂಖ್ಯೆ ಬದಲಾದರೂ ಕೂಡ ನಮ್ಮ ಮನಸ್ಸು, ನಮ್ಮ ವರ್ತನೆ ಇವೆಲ್ಲವೂ ಕೂಡ ಬದಲಾಗಾದೆ ಒಂದೇ ರೀತಿಯಲ್ಲಿರ ಬೇಕು.
ವಿದ್ಯಾ
ಎಂ.ಜಿ.ಎಂ. ಕಾಲೇಜು ಉಡುಪಿ