ಅಯೋಧ್ಯೆ: “ಅಯೋಧ್ಯೆಯಲ್ಲಿ ರಾಮ ಮಂದಿರ ಸಾಕಾರ ಗೊಳಿಸುವ ಧೈರ್ಯ ಪ್ರಧಾನಿ ನರೇಂದ್ರ ಮೋದಿಯವರಿಗಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಮಂದಿರ ನಿರ್ಮಿಸಲು ಕೇಂದ್ರ ಸರಕಾರವು ಕೂಡಲೇ ಸುಗ್ರೀವಾಜ್ಞೆಯನ್ನು ಹೊರಡಿಸ ಬೇಕು’ಹೀಗೆಂದು ಹೇಳಿರುವುದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ.
ರವಿವಾರ ಉತ್ತರಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿದ ಅವರು, ತಾತ್ಕಾಲಿಕವಾಗಿ ನಿರ್ಮಿಸಲಾದ ರಾಮ್‌ಲಲ್ಲಾ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತ ನಾಡಿದರು. ಅವರೊಂದಿಗೆ ಪುತ್ರ ಆದಿತ್ಯ ಠಾಕ್ರೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾದ ಶಿವಸೇನೆಯ 18 ಸಂಸ ದರೂ ಇದ್ದರು.
ಚುನಾವಣೆಯ ಬಳಿಕ ಅಯೋಧ್ಯೆಗೆ ಭೇಟಿ ನೀಡುವುದಾಗಿ ಕಳೆದ ನವೆಂಬರ್‌ನಲ್ಲೇ ನುಡಿದಿದ್ದ ಠಾಕ್ರೆ, ಅದ ರಂತೆ ರವಿವಾರ ದೇಗುಲಕ್ಕೆ ಭೇಟಿ ನೀಡಿ ದ್ದಾರೆ ಎಂದು ಪಕ್ಷ ತಿಳಿಸಿದೆ.
ಜಗತ್ತಿನ ಎಲ್ಲ ಹಿಂದೂಗಳೂ ಸಾಥ್: ಅಯೋಧ್ಯೆ ವಿವಾದದ ಪ್ರಕರಣ ಹಲವು ವರ್ಷಗಳಿಂದಲೂ ಕೋರ್ಟ್‌ನಲ್ಲೇ ಇದೆ. ಪ್ರಧಾನಿ ಮೋದಿಯವರಿಗೆ ಧೈರ್ಯವಿದೆ. ಸರಕಾರ ಒಂದು ನಿರ್ಧಾರ ಕೈಗೊಂಡರೆ, ಅದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯ ವಿಲ್ಲ. ಈ ವಿಚಾರದಲ್ಲಿ ಶಿವಸೇನೆ ಮಾತ್ರವಲ್ಲ, ಇಡೀ ಜಗತ್ತಿನ ಹಿಂದೂಗಳೆಲ್ಲರೂ ನಿಮ್ಮ ಜತೆಗಿದ್ದಾರೆ ಎಂದೂ ಉದ್ಧವ್ ಹೇಳಿದ್ದಾರೆ.
ಇದೇ ವೇಳೆ, “ಕಾನೂನ್ ಬನಾವೋ, ಮಂದಿರ್ ಬನಾವೋ’ (ಕಾನೂನು ತನ್ನಿ, ಮಂದಿರ ನಿರ್ಮಿಸಿ) ಎಂದು ಘೋಷಣೆ ಕೂಗಿದ ಉದ್ಧವ್, ರಾಮಮಂದಿರ ನಿರ್ಮಾ ಣವು ಎಲ್ಲ ಹಿಂದೂಗಳಿಗೆ ಸಂಬಂಧಿಸಿದ ವಿಷಯ. ಹೀಗಾಗಿ, ಸರಕಾರ ಸುಗ್ರೀವಾಜ್ಞೆ ತಂದು ಆದಷ್ಟು ಬೇಗ ದೇಗುಲ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.