Advertisement
ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸ್ಥಾಪಿಸಿದ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಸಂವಿಧಾನ ಯಾರು ಸುಟ್ಟರು, ಅವರು ಯಾವ ಧರ್ಮದವರು ಎಂದು ತಿಳಿದುಕೊಂಡು ಅವರ ಧರ್ಮಕ್ಕೆ ಧಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು.
ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದರು.
Related Articles
Advertisement
ಕಲಬುರಗಿಯ ರಾಬರ್ಟ್ ಮೈಕಲ್ ಮಿರಿಂಡಾ, ಭಂತೆ ಧಮ್ಮನಾಗ, ಶ್ರೀಮಂತ ಕೋಕಾಟೆ ಮಾತನಾಡಿ, ಸಂವಿಧಾನಕ್ಕೆ ಧಕ್ಕೆ ತರುವ ವ್ಯಕ್ತಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ಮೂಲಕ ಸಂವಿಧಾನದ ಮಹತ್ವ ಕುರಿತು ಜನ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಸಂವಿಧಾನ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಕಾರ್ಯಗಳು ಶುರುಆಗಬೇಕು ಎಂದರು. ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಮಾತನಾಡಿ, ಬರುವ ಲೋಕಸಭೆ ಚುನಾವಣೆಯಲ್ಲಿ ದಲಿತರು ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಪರಿಷತ್ ಸದಸ್ಯ ವಿಜಯಸಿಂಗ್, ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ, ಕಾಗಿನೆಲೆ ಪೀಠದ ಸಿದ್ಧರಾಮನಂದ ಪುರಿ ಸ್ವಾಮೀಜಿ, ತಡೋಳಾ ರಾಜೇಶ್ವರ ಶಿವಾಚಾರ್ಯರು, ಚನ್ನಬಸವಾನಂದ ಸ್ವಾಮೀಜಿ, ಸಿಸ್ಟರ್ ಕ್ರಿಸ್ಟಿನಾ, ಜ್ಞಾನಿ ದರಬಾರ್ ಸಿಂಗ್, ಅಬ್ದುಲ್ ಗನಿ, ಮಹ್ಮದ್ ಗಫಾರ್, ಸೈಯದ್ ಸಿರಾಜೊದ್ದೀನ್, ಮೌಲಾನ್ ಅಬು ತಾಲೀಬ್ ರೆಹಮಾನಿ, ಅಬ್ದುಲ್ ಮನ್ನಾನ್ ಸೇಠ್ಠ…, ಅನಿಲಕುಮಾರ ಬೆಲ್ದಾರ್, ರಾಜು ಕಡ್ಯಾಳ, ಅಮೃತರಾವ್ ಚಿಮಕೋಡೆ, ಬಸವರಾಜ ಮಾಳಗೆ, ಮಾರುತಿ ಬೌದ್ಧೆ, ವಹೀದ್ ಲಖನ್, ಆನಂದ ದೇವಪ್ಪ, ಶ್ರೀಕಾಂತ ಸ್ವಾಮಿ, ಸಿದ್ದು ಪಾಟೀಲ ಹುಮನಾಬಾದ್, ಮಾಳಪ್ಪ ಅಡಸಾರೆ, ರಮೇಶ ಡಾಕುಳಗಿ, ಕಲ್ಯಾಣರಾವ್ ಭೋಸ್ಲೆ, ಅಶೋಕಕುಮಾರ ಮಾಳಗೆ, ನಾರಾಯಣ ಗಣೇಶ, ಫರ್ನಾಂಡಿಸ್ ಹಿಪ್ಪಳಗಾಂವ್, ವಿಜಯಕುಮಾರ ಕೌಡ್ಯಾಳ ಇದ್ದರು.
ಹೆಂಡಕ್ಕೆ ಮತ ಮಾರಿಕೊಳ್ಳಬೇಡಿ. ಸಂವಿಧಾನಕ್ಕೆ ಗೌರವ ನೀಡುವ ನಾವು ನಮ್ಮ ಹಕ್ಕು ಚಲಾಯಿಸುವಂತೆ ಆಗಬೇಕು. ಸಂವಿಧಾನಕ್ಕೆ ಧಕ್ಕೆ ತರುವ ಸಂಘ, ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು.ರಾಜರತನ್ ಅಂಬೇಡ್ಕರ್, ಅಂಬೇಡ್ಕರ್ ಮರಿಮೊಮ್ಮಗ ಸಂವಿಧಾನ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅಂಥವರು ಹತ್ತು
ಜನರು ಹುಟ್ಟಿದರೂ ಸಂವಿಧಾನಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಲಾಗುವುದು. ಭಾರತ ದೇಶಕ್ಕೆ ಅಂಬೇಡ್ಕರ್ ನೀಡಿದ ಸಂವಿಧಾನದ ಪಾವಿತ್ರವನ್ನು ಪ್ರತಿಯೊಬ್ಬರು ಕಾಪಾಡಬೇಕು.
ಬಂಡೆಪ್ಪ ಖಾಶೆಂಪೂರ, ಸಚಿವ