Advertisement

ಭೋವಿ ಜನಾಂಗ ಅಭಿವೃದ್ಧಿಗೊಳ್ಳಲಿ

07:06 AM Jan 18, 2019 | |

ಆಳಂದ: ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಭೋವಿ ವಡ್ಡರ ಜನಾಂಗದವರು ಶಿವಯೋಗಿ ಸಿದ್ಧರಾಮೇಶ್ವರನ ತತ್ವಾದರ್ಶ ಮೈಗೂಡಿಸಿಕೊಂಡು ಎಲ್ಲ ರಂಗದಲ್ಲೂ ಅಭಿವೃದ್ಧಿಗೆ ಪಣತೋಡಬೇಕು ಎಂದು ಸಮಾಜದ ಮುಖಂಡ ವಿಠuಲ ಕೋಣೆಕರ್‌ ಆಶಯ ವ್ಯಕ್ತಪಡಿಸಿದರು. ತಾಲೂಕಿನ ನಿಂಬರಗಾ ಗ್ರಾಮದಲ್ಲಿ ಭೋವಿ ವಡ್ಡರ ಸಮಾಜ ಹಮ್ಮಿಕೊಂಡಿದ್ದ ಸೊಲ್ಲಾಪುರದ ಶಿವಯೋಗಿ ಸಿದ್ಧರಾಮೇಶ್ವರರ 847ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

ವಡ್ಡರ ಸಮುದಾಯಕ್ಕೆ ಸರ್ಕಾರ ಮೀಸಲಾತಿ ಕಲ್ಪಿಸಿದರೂ ಸಹಿತ ಶಿಕ್ಷಣ ಕೊರತೆ ಹಾಗೂ ಆರ್ಥಿಕ ಹಿನ್ನೆಡೆಯಿಂದ ಸಮುದಾಯದ ಜನರು ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶರಣ ಶಿವಯೋಗಿ ಸಿದ್ಧರಾಮೇಶ್ವರರು ಸಮಾಜ, ಜನರ ಹಿತಕ್ಕಾಗಿ ದುಡಿದು ಅನೇಕ ಕೆರೆ ಕಟ್ಟೆ, ದೇವಾಲಯಗಳನ್ನು ನಿರ್ಮಿಸಿ ಅದರೊಂದಿಗೆ ಬದುಕಿನ ಮಾರ್ಗವನ್ನು ತೋರಿದ್ದಾರೆ ಎಂದರು.

ಸಮಾಜದ ಯುವ ಮುಖಂಡ ಅರ್ಜುನೆ ಬಂಡೆ ಮಾತನಾಡಿ, ತಾಂತ್ರಿಕವಾಗಿ ವೈಜ್ಞಾನಿಕ ಯುಗದಲೂ ವಡ್ಡರ ಜನಾಂಗವೂ ಇಂದಿಗೂ ತಮ್ಮ ಹಳೆ ಕುಲಕಸಬನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಕಲ್ಲು ಒಡೆಯುವ ಯಂತ್ರಗಳು ಬಂದ ಮೇಲೆ ವಡ್ಡರ ಜನಾಂಗದ ಉದ್ಯೋಗಕ್ಕೆ ಹೊಡೆತ ಬಿದ್ದು ಬೀದಿಪಾಲಾಗುವಂತೆ ಮಾಡಿದೆ. ಇಂಥ ಪರಿಸ್ಥಿತಿಯಲ್ಲಿ ಸಮಾಜ ಬಾಂಧವರು ಸರ್ಕಾರಿ ಸೌಲಭ್ಯಗಳನ್ನು ಪಡೆದು ಪರ್ಯಾಯ ಉದ್ಯೋಗದಲ್ಲಿ ತೊಡಗಿ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಹೇಳಿದರು.

ಮುಖಂಡ ಶಿವಪುತ್ರಪ್ಪ ಮಾಳಗೆ, ತಾಪಂ ಸದಸ್ಯ ದತ್ತಾತ್ರೇಯ ದುರ್ಗದ, ಮುಖಂಡ ಅಮೃತ ಬಿಬ್ರಾಣಿ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಭೀಮಣ್ಣಾ ಬನ್ನಪಟ್ಟಿ, ಗ್ರಾಪಂ ಸದಸ್ಯರಾದ ಬರ್ಮಣಾ ಕಾರಬಾರಿ, ಶಾಂತಾಬಾಯಿ, ಲಕ್ಷ್ಮಣ ಧಂಗಾಪುರ, ಯಶವಂತ ವಡಿಯರ ಹಾಗೂ ಭೀಮಾಶಂಕರ ಬಂಡಿ, ಸಿದ್ದಣ್ಣಾ ಕಲಕುಟಗಿ, ಸೋಮಣ್ಣಾ ಜವಳಿ, ಎಎಸ್‌ಐ ಶಂಕರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next