ಬೆಂಗಳೂರು: ಆಯುರ್ವೇದ ವೈದ್ಯರು ಅಲೋಪಥಿ ಔಷಧ ನೀಡದೆ ಆಯುರ್ವೇದ ಚಿಕಿತ್ಸಾ ವಿಧಾನ ದಲ್ಲೇ ಮುಂದುವರಿಯಬೇಕು ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಡಾ.ಸುಬ್ಬಯ್ಯ ಷಣ್ಮುಗಂ ಹೇಳಿದರು.
ಕೇಂದ್ರ ಆಯುಷ್ ಇಲಾಖೆ ಮತ್ತು ರಾಜ್ಯ ಆಯುಷ್ ಇಲಾಖೆ, ತಾರುಣ್ಯ ಶಿಕ್ಷಣ ಸೇವಾ ಟ್ರಸ್ಟ್ ಹಾಗೂ ಎಬಿವಿಪಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಜ್ಞಾಸ ಸಮ್ಮೇಳನದಲ್ಲಿ ಭಾನುವಾರ ವೈದ್ಯಕೀಯ ವಿದ್ಯಾರ್ಥಿಗಳಿಗೆ ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಅಲೋಪಥಿ ಚಿಕಿತ್ಸಾ ವಿಧಾನಕ್ಕಿಂತ ಆಯುರ್ವೇದ ಚಿಕಿತ್ಸಾ ವಿಧಾನ ತುಂಬ ಉತ್ತಮವಾಗಿದೆ. ಹೀಗಾಗಿ ಆಯುರ್ವೇದ ಅಭ್ಯಾಸ ಮಾಡಿದ ವೈದ್ಯರು ಅಲೋಪಥಿ ಔಷಧ ನೀಡುವ ಅಗತ್ಯವಿಲ್ಲ. ಆಯುರ್ವೇದದಲ್ಲೇ ಮುಂದುವರಿಯು ವಂತಾ ಗಲಿ, ಆಯುರ್ವೇದ ವಿದ್ಯಾರ್ಥಿಗಳು ಕೂಡ ಇದನ್ನೇ ರೂಢಿಸಿಕೊಳ್ಳಲಿ ಎಂದು ಹೇಳಿದರು.
ನಿಮ್ಹಾನ್ಸ್ ನಿರ್ದೇಶಕ ಡಾ.ಡಿ.ಎಂ.ಗಂಗಾಧರ್ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಸಂಯೋಜಿತ ವಿಧಾನವನ್ನು ಸಾಧಿಸಬೇಕಾದರೆ ವಿದ್ಯಾರ್ಥಿಗಳಿಗೆ ಎಲ್ಲ ಮಾದರಿಯ ವೈದ್ಯಕೀಯ ಕೋರ್ಸ್ ಒಳಗೊಂಡಿರುವ ಮೂಲ ಕೋರ್ಸ್‌ನ ಪರಿಚಯ ಮಾಡಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಮಾತನಾಡಿ, ಆಧುನಿಕ ವೈದ್ಯ ಪದ್ಧತಿ, ಆಯುರ್ವೇದ ಮತ್ತು ಹೋಮಿಯೋಪಥಿ ವೈದ್ಯರ ಕೌಶಲ್ಯ ಮತ್ತು ಸಾಮರ್ಥ್ಯ ಹೆಚ್ಚಿಸಿ ಸಾರ್ವಜನಿಕರಿಗೆ ಇನ್ನಷ್ಟು ಉತ್ಕೃಷ್ಟ ಆರೋಗ್ಯ ಸೇವೆ ನೀಡು ವಂತೆ ಮಾಡಬೇಕು. ಎಲ್ಲ ಕ್ಷೇತ್ರ ಗಳಲ್ಲಿ ಸಂಶೋ ಧನೆ ಇನ್ನಷ್ಟು ಪ್ರಕರವಾಗಿ ನಡೆಯ¸ಬೇಕು ಎಂದರು.ಆಯುಷ್ ಇಲಾಖೆ ಆಯುಕ್ತೆ ಮೀನಾಕ್ಷಿ, ಎಸ್-ವ್ಯಾಸ್ ವಿವಿ ಡೀನ್ ಡಾ. ನಾಗರತ್ನ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕುಲಸಚಿವ ಡಾ.ಎಂ.ಕೆ.ರಮೇಶ್, ಆಯುಷ್ ಸಚಿವಾಲಯದ ಸಂಶೋಧನಾಧಿಕಾರಿ ಡಾ. ಕಿಶೋರ್ ಕುಮಾರ್ ಮೊದಲಾದವರು ಇದ್ದರು.