Advertisement
ಈ ಬಾರಿಯ ಮಳೆಗಾಲ ಮತ್ತು ಬೆಳೆನಷ್ಟದ ಕುರಿತಂತೆ ಉದಯವಾಣಿ ರಿಯಾಲಿಟಿ ಚೆಕ್ ನಡೆಸಿದ್ದು, ಭಾರೀ ಪ್ರಮಾಣದ ಹಾನಿಯಾಗಿರುವುದು ಕಂಡು ಬಂದಿದೆ.
Related Articles
Advertisement
ಏಕೆಂದರೆ ಈಗಾಗಲೇ ರಾಜ್ಯ ಸರಕಾರ ರೈತರಿಗೆ ಪರಿಹಾರ ಘೋಷಣೆ ಮಾಡಿದೆ. ಆದರೆ ವಸ್ತುಸ್ಥಿತಿಯಲ್ಲಿ ರೈತರಿಗೆ ಪರಿಹಾರದ ಹಣ ಸಿಕ್ಕಿಲ್ಲ. ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ತುಮಕೂರು, ಬೆಳಗಾವಿ, ಗದಗ, ಕಲಬುರಗಿ, ಬೀದರ್ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಪರಿಹಾರದ ಬಗ್ಗೆ ಇನ್ನೂ ಗಮನವನ್ನೇ ನೀಡಿಲ್ಲ ಎಂಬುದು ರಿಯಾಲಿಟಿ ಚೆಕ್‌ನಲ್ಲಿ ಗೊತ್ತಾಗಿದೆ. ಅಲ್ಲದೆ, ಹಲವೆಡೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳಿವೆ. ಸರಕಾರ ಕೈಗೊಂಡ ಯಾವುದೇ ನಿರ್ಧಾರವನ್ನು ಅನುಷ್ಠಾನಗೊಳಿಸಬೇಕಾದ ಹೊಣೆ ಅಧಿಕಾರಿಗಳದ್ದು, ಮಳೆ ಮತ್ತು ತುರ್ತು ಕಾಮಗಾರಿಗಾಗಿ ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್‌ನಲ್ಲಿ 664 ಕೋಟಿ ರೂ. ಹಣವಿದೆ ಎಂದಿದ್ದರೂ ಇದರ ಸಮರ್ಪಕ ಬಳಕೆಯಾಗಿಲ್ಲ ಎಂಬ ಆರೋಪವೂ ಇದೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.90 ಮತ್ತು ಕೊಪ್ಪಳದಲ್ಲಿ ಪರಿಹಾರ ವಿತರಣೆ ಸಾಗುತ್ತಿದೆ ಎಂಬುದೇ ಸಮಾಧಾನಕರ ಅಂಶ.
ಈಗ ವಿಧಾನಮಂಡಲ ಅಧಿವೇಶನವೂ ನಡೆಯುತ್ತಿದೆ. ರಾಜ್ಯ ಸರಕಾರ ಮತ್ತು ವಿಪಕ್ಷಗಳು ಸೇರಿ ಈ ಕುರಿತಂತೆ ರಚನಾತ್ಮಕವಾಗಿ ಚರ್ಚೆ ನಡೆಸಬೇಕು. ಕೇವಲ ಬೆಂಗಳೂರು ಪ್ರವಾಹದ ಬಗ್ಗೆ ತಲೆ ಕೆಡಿಸಿಕೊಳ್ಳದೇ ರಾಜ್ಯದ ಇತರ ಭಾಗಗಳತ್ತಲೂ ನೋಡಬೇಕು. ಆದಷ್ಟು ಬೇಗ ರೈತನ ನೆರವಿಗೆ ಹೋದರೆ, ಇದರಿಂದ ಆತನಿಗಾದರೂ ಸಮಾಧಾನವಾದೀತು.