Advertisement

ಅಧಿಕಾರಿಗಳು ಪಕ್ಷಾತೀತ ಕಾರ್ಯ ನಿರ್ವಹಿಸಲಿ

01:07 PM Apr 06, 2019 | Team Udayavani |

ಬಾಗಲಕೋಟೆ: ಪ್ರಸ್ತುತ ಲೋಕಸಭಾ ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಅಧಿಕಾರಿಗಳು ಎಲ್ಲ ರೀತಿಯಿಂದ ಸನ್ನದ್ದರಾಗಬೇಕು ಎಂದು ಚುನಾವಣಾ ಸಾಮಾನ್ಯ ವೀಕ್ಷಕ ನರಸಿಂಹಗಾರಿ ಎಲ್‌.ಟಿ. ರೆಡ್ಡಿ ಸೂಚಿಸಿದರು.

Advertisement

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆಗೆ ನೇಮಕಗೊಂಡ ವಿವಿಧ ನೋಡಲ್‌ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣಾ ಆಯೋಗ ನಿರ್ದೇಶನದಂತೆ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಚಾಚು ತಪ್ಪದೇ ನಿರ್ವಹಿಸಬೇಕು. ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಒದಗಿಸಬೇಕು. ಜಿಲ್ಲೆಯಲ್ಲಿ ನೀತಿ ಸಂಹಿತೆ ಪಾಲನೆ ಮಾಡುವುದರ ಜೊತೆಗೆ ಅಧಿಕಾರಿಗಳು ಪûಾತೀತ, ಪ್ರಾಮಾಣಿಕವಾಗಿ ಚುನಾವಣಾ ಕಾರ್ಯ ಮಾಡತಕ್ಕದ್ದು ಎಂದು ಸೂಚಿಸಿದರು.ಪೊಲೀಸ್‌ ವೀಕ್ಷಕ ಕೆ.ನಾರಾಯಣ ನಾಯಕ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 14 ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಚೆಕ್‌ ಪೋಸ್ಟ್‌ಗಳು ಹೆಚ್ಚು ಜಾಗರೂಕತೆಯಿಂದ ಕಾರ್ಯನಿರ್ವಹಿಸುವುದರ ಜೊತೆಗೆ ತಮ್ಮ ಕಾರ್ಯ ಚುರುಕುಗೊಳಿಸಬೇಕು. ಚೆಕ್‌ ಪೋಸ್ಟ್‌ಗಳ ಮೇಲೆ ಜಿಲ್ಲಾಡಳಿತ ಹೆಚ್ಚು ನಿಗಾವಹಿಸಬೇಕು. ಪ್ರತಿಯೊಬ್ಬ ಅಧಿಕಾರಿಗಳು ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಮಾಹಿತಿ ತಿಳಿದುಕೊಂಡಿರಬೇಕು ಎಂದರು.

ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ ಕೈಗೊಂಡ ಚುನಾವಣಾ ಪೂರ್ವ ಸಿದ್ಧತೆ, ಕಾನೂನು ಸುವ್ಯವಸ್ಥೆ, ಮತಯಂತ್ರಗಳ ಪೂರ್ವಸಿದ್ಧತೆ, ಮತಗಟ್ಟೆ ಸಿಬ್ಬಂದಿ ನಿಯೋಜನೆ, ವೋಟರ್‌ ಹೆಲ್ಪಲೈನ್‌, ಸಿ-ವಿಜಿಲ್‌ ಮೊಬೆ„ಲ್‌ ಆಪ್‌ಗೆ ಬಂದ ದೂರುಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಈವರೆಗೆ 2.90 ಕೋಟಿ ರೂ.ಗಳ ವಿವಿಧ ಮದ್ಯ ಮತ್ತು ವಾಹನಗಳನ್ನು ಹಾಗೂ 44 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ ಎಂದರು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ ಖರೆ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 840 ಆಯುಧ ಸೀಜ್‌ ಮಾಡಲಾಗಿದೆ. 16 ಚೆಕ್‌ ಪೋಸ್ಟ್‌ಗಳ ಲೈವ್‌ ಸಂಪರ್ಕವಿದ್ದು, ನಿಗಾ ವಹಿಸಲಾಗುತ್ತಿದೆ. ಸೂಕ್ಷ್ಮ,ಅತೀ ಸೂಕ್ಷ್ಮ ಕೇಂದ್ರಗಳಿಗೆ ನಿಗಾ ವಹಿಸಲಾಗುತ್ತಿದೆ. ಚೆಕ್‌ ಪೋಸ್ಟ್‌ಗಳು ಚುರುಕುಗೊಳಿಸಲಾಗುತ್ತಿದೆ.
ಪ್ಲಾಯಿಂಗ್‌ ಸ್ಕ್ವಾಡ್‌ ತಂಡದವರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಶಾಂತಿ, ನ್ಯಾಯಯುತ ಚುನಾವಣೆಗೆ ಮುಂಜಾಗೃತ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ
ಎಚ್‌.ಜಯಾ ಸೇರಿದಂತೆ ವಿವಿಧ ನೋಡಲ್‌ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next